ಮಾರ್ಗಶಿರ ಗುರುವಾರ ಪೂಜೆ

varthajala
0

ತಡವಾದ ಬರಹ.ಮಾರ್ಗಶಿರ ಗುರುವಾರ ಲಕ್ಷ್ಮಿ ಪೂಜೆ ಮಾಡುವ ಪದ್ಧತಿ ಕೆಲವರಲ್ಲಿ ಇದೆ.

ಮಾರ್ಗಶಿರ ಮಾಸದ ಗುರುವಾರ ಅಂಭಿನ ಕಂದಲಿಗೆ ಪೂಜೆ ಮಾಡುತ್ತಾರೆ.ಹಿಂದಿನ ದಿನ ಮಡಿಗೆ ಸೀರೆ ಕುಬಸ ಹರವಿರುತ್ತಾರೆ.ಗುರುವಾರ ಬೆಳಿಗ್ಗೆ ತಲೆಗೆ ಎಣ್ಣೆ ಇಟ್ಟುಕೊಂಡು ಸ್ನಾನ ಮಾಡಿ , ಮಡಿ ಬಟ್ಟೆ ಧರಿಸಿ, ಮಡಿ ನೀರಿನಲ್ಲಿ ಅಂಬಿನ ಕಂದಲಿನ ಪೂಜೆ ಮಾಡುವರು.ನಿತ್ಯ ಗೌರಿ ಪೂಜೆ ಜೊತೆಗೆ ಲಕ್ಷ್ಮಿಗೆ ಷೋಡಶೋಪಚಾರ ಪೂಜೆ ಮಾಡುವರು.ಬೇಕಾದರೆ ಲಕ್ಷ್ಮಿ ಸಹಸ್ರನಾಮ ಹೇಳಿಕೊಂಡು ಪೂಜೆ ಮಾಡಬಹುದು.

ನೈವೇದ್ಯಕ್ಕೆ ತೆಂಗಿನಕಾಯಿ, ಹಣ್ಣು, ಬೇಕಾದರೆ ಏನಾದರೂ ಸಿಹಿ ಮಾಡುವರು. ಪೂಜೆಯ ನಂತರ ಮುತ್ತೈದೆಯರನ್ನು ಕರೆದು ಯಥಾಶಕ್ತಿ ತಾಂಬೂಲ ನೀಡುವರು.ಬೇಕಾದರೆ ಈ ದಿನ ಹಬ್ಬದಡುಗೆ ತಯಾರಿಸಬಹುದು.

ಸಂಜೆ ಲಕ್ಷ್ಮಿಗೆ ದೇವರ ದೀಪ ಹಚ್ಚಿ ಆರತಿ ಮಾಡುವರು. ಮಾರ್ಗಶಿರ ಗುರುವಾರ ಲಕ್ಷ್ಮಿ ಪೂಜೆಯ ಕಥೆ ಇದ್ದರೆ ಓದುವರು, ಆರತಿ ಹಾಡುಗಳನ್ನು ಹೇಳಿಕೊಳ್ಳುವರು. ಈ ಪೂಜೆ ಸರಳವಾದದ್ದು.ಹೆಚ್ಚಿನ ಆಡಂಬರ ಇಲ್ಲದ್ದು.


ವೈಚಾರಿಕವಾಗಿ ನೋಡಿದರೆ ಲಕ್ಷ್ಮಿ, ಹೊಸ ಬೆಳೆ, ಅಕ್ಕಿ ಇತ್ಯಾದಿಗಳ ಪೂಜೆ ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ.ಯಾವುದೇ ಪೂಜೆ ಮಾಡಿದರೆ ಮುತ್ತೈದೆಯರಿಗೆ ತಾಂಬೂಲ ನೀಡುವುದು ನಮ್ಮ ಹಿಂದೂಗಳ ಸಂಪ್ರದಾಯ.ಇದು ಹೆಂಗಸರಿಗೆ ನಾವು ತೋರಿಸುವ ಗೌರವ.

 ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ.ಉಳಿದಂತೆ ಅವರವರ ಮನೆಯ ಹಿರಿಯರ ಆಚರಣೆಯಂತೆ ಇರುತ್ತದೆ.

ರಾಧಿಕಾ ಜಿ ಎನ್  ಟೀವೀ ಹೋಸ್ಟ್ 

brahmies@gmail.com

Post a Comment

0Comments

Post a Comment (0)