ಒಬ್ಬ ವ್ಯಕ್ತಿಯು ಮೃತನಾದಾಗ ಅವನಿಗೆ " ಪ್ರೇತ " ದೇಹ ಬರುತ್ತದೆ.
10 ದಿನದ ಕರ್ಮಗಳೂ, ಏಕಾಹ ವಿಧಿ, ಸಪಿಂಡೀಕರಣ ಆದಾಗ ಆ ಪ್ರೇತ ದೇಹವು ಹೇಗಿ " ಯಮ ಲೋಕ " ಕ್ಕೆ ಪ್ರಯಾಣ ಮಾಡಲು ಬೇಕಾದ ಮತ್ತೊಂದು ದೇಹ ಬರುತ್ತದೆ.
ಆ ಯಮ ಮಾರ್ಗದಲ್ಲಿ 16 ಪಟ್ಟಣಗಳಿವೆ.
ಆ ಪಟ್ಟಣಕ್ಕೆ ಬಂದಾಗ ಮಕ್ಕಳು ಕೊಡತಕ್ಕ ಮಾಸಿಕ ಶ್ರಾದ್ಧಗಳ ಅನ್ನಾದಿಗಳನ್ನು ಯಮಭಟರು ಪಿತೃಗಳಿಗೆ ಆ ಪಟ್ಟಣದಲ್ಲಿ ತಲುಪಿಸುತ್ತಾರೆ.
ಮಾಸಿಕಾದಿ ಶ್ರಾದ್ಧಗಳು 16.
ಪಟ್ಟಣಗಳು 16.
ಒಂದೊಂದು ಪಟ್ಟಣದಲ್ಲಿ ಒಂದೊಂದು ಮಾಸಿಕದ ಅನ್ನಗಳು ಕ್ರಮವಾಗಿ ತಲುಪುತ್ತದೆ.
೧. ಪ್ರಥಮ ಮಾಸಿಕವನ್ನು 11ನೇ ದಿನ ಮಾಡಬೇಕು. ಇಲ್ಲಿ ಮಕ್ಕಳಿಂದಲೋ, ಮೊಮ್ಮಕ್ಕಳಿಂದಲೋ, ಸ್ನೇಹಿತರಿಂದಲೋ, ಕೃಪೆಯಿಂದ ಕೊಟ್ಟ ಮಾಸಿಕ ಪಿಂಡವನ್ನು ತಿನ್ನುತ್ತಾನೆ. ಅನಂತರ " ಸೌರಿ " ಎಂಬ ಯಮ ಪಟ್ಟಣಕ್ಕೆ ಹೋಗುತ್ತಾನೆ.
೨. ಅಲ್ಲಿಂದ ಮುಂದೆ " ನಗೇಂದ್ರ ಭವನ " ಎಂಬ ಪಟ್ಟಣಕ್ಕೆ ಬಹು ಬೇಗನೆ ಅಲ್ಲಿ ಭೀಕರ ಕಾಡುಗಳನ್ನು ದಾಟಿ ಮುನ್ನಡೆಯುತ್ತಾನೆ. ಅಲ್ಲಿ ಯಮಭಟರು ಎಳೆದಾಗ ೨ನೇ ತಿಂಗಳು ಕಳೆದಂತೆ ಆ ಪಟ್ಟಣ ಬಿಡುತ್ತಾನೆ.
೩. ಆ ಎರಡನೆಯ ತಿಂಗಳ ಅಂತ್ಯದಲ್ಲಿ ಪಿಂಡವನ್ನು ತಿಂದು, ನೀರು - ವಸ್ತ್ರಗಳನ್ನು ಸಂಬಂಧಿಕರು ಕೊಟ್ಟಿದ್ದನ್ನು ಅನುಭವಿಸಿ ಮುನ್ನಡೆಯುತ್ತಾನೆ.
೪. 3ನೇ ತಿಂಗಳು " ಗಂಧರ್ವ ನಗರ ", 4ನೇ ತಿಂಗಳು ಕಲ್ಲು ಸುರಿಯುವ " ಶೈಲಾಗಮ " ಪಟ್ಟಣಕ್ಕೆ, 5ನೇ ತಿಂಗಳು " ಕ್ರೌ೦ಚ ಪುರಿ " ಯಲ್ಲಿ ವಾಸ, 6ನೇ ತಿಂಗಳು " ಕ್ರೂರಪುರ " ಎಂಬ ಪಟ್ಟಣಕ್ಕೆ ಜೀವನು ಪ್ರಯಾಣ ಮಾಡುತ್ತಾನೆ.
೫. ಊನ ಷಣ್ಮಾಸಿಕ - ಗೋದಾನಕ್ಕೆ ಪ್ರಶಸ್ತವಾದ ಸಮಯ. ವೈತರಣೀ ನದೀ ದಾಟ ಬೇಕು. ಆದ ಮಕ್ಕಳು ಕೊಡುವ ಗೋದಾನದಿಂದ ಆ ನದಿಯನ್ನು ದಾಟಿಸಲು ದೋಣಿ ಬರುತ್ತದೆ. ಹೀಗೆ " ವಿಚಿತ್ರ ಭವನ " ಯೆಂಬ ಪಟ್ಟಣವನ್ನು ದಾಟುತ್ತಾನೆ.
೬. 7ನೇ ತಿಂಗಳು ಬರುವಾಗ " ಬಹ್ವಾಪದ " ಪಟ್ಟಣಕ್ಕೆ, 8ನೇ ತಿಂಗಳು " ದುಃಖದ " ಪಟ್ಟಣಕ್ಕೆ, 9ನೇ ತಿಂಗಳು " ನಾನಾಕ್ರಂದಪುರ " ಎಂಬ ಪಟ್ಟಣಕ್ಕೆ ಬರುತ್ತಾನೆ.
೭. 11 ತಿಂಗಳು ಭಾರೀ ದಗೆಯುಳ್ಳ " ಸುತಪ್ತ ಭವನ " ಕ್ಕೆ ಬರುತ್ತಾನೆ. ಮುಂದೆ 11ನೇ ತಿಂಗಳು " ರೌದ್ರ " ಮುಂದೆ ಪಯೋವರ್ಷಣ " ಪಟ್ಟಣಕ್ಕೆ, 12ನೇ ತಿಂಗಳು " ಶೀತಾಢ್ಯ ನಗರ " ಕ್ಕೆ ಬರುತ್ತಾನೆ. ಆಗ ಚಳಿ - ಹಸಿವೆ ಎರಡೂ ಆಗುತ್ತದೆ. ಆಗ ಯಮಭಟರು ಜೀವನಿಗೆ ನೀನೇನಾದರೂ ಪುಣ್ಯ ಮಾಡಿದ್ದರೆ ಒಳ್ಳೆಯದಾಗುತ್ತಿತ್ತು. ನೀನೀದರೂ ಪುಣ್ಯ ಮಾಡಿದ್ದೀಯಾ? ಎಂದು ಕೇಳುತ್ತಾರೆ.
೮. ಆಗ ವರ್ಷಾಬ್ಧಿಕೆಯಲ್ಲಿ ನೀಡಿದ ಪಿಂಡ ತರ್ಪಣಗಳಿಂದ ಸ್ವಲ್ಪ ಧೈರ್ಯ ತಾಳುತ್ತಾನೆ. " ಬಹುಭೀತಿಪುರ " ಮುಟ್ಟಿ ಮುಂದೆ ಹೋಗುತ್ತಾನೆ.
ಆ ಸಂವತ್ಸರದ ಕೊನೆಯಲ್ಲಿ " ಯಮನ ಪಟ್ಟಣ " ವು ಬರುತ್ತಿರುವಾಗ ಆ ಜೀವ ಹಸ್ತ ಮಾತ್ರದ ದೇಹ ಬಿಟ್ಟು ಮುನ್ನಡೆಯುವನು.
ಎಲೈ ಗರುಡನೇ! ಯಾರಿಂದ ಮೇಲಿನ ಲೋಕಕ್ಕೆ ತೆರಳಿದವರಿಗಾಗಿ ಮೇಲೆ ಹೇಳಲ್ಪಟ್ಟ ಮಾಸಿಕ ಶ್ರಾದ್ಧ, ದಾನಗಳು ನೀಡಲ್ಪಡಲಿಲ್ಲವೋ ಅಂಥವರಿಗೆ ಮಾತ್ರ ಕಷ್ಟಗಳಿಂದ ಕೂಡಿದ ದುಃಖ ಬರುತ್ತದೆ.