ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಯ್ಯಾಲಿಕಾವಲಿನ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಡಿ.21ರಂದು ಏರ್ಪಡಿಸಲಾಗಿತ್ತು.
ಊಂಜಲ್ ಸಂಗೀತೋತ್ಸವದಲ್ಲಿ ಕಾರ್ಯಕ್ರಮ ದಲ್ಲಿ ಕು|| ಅಹಿಕಾ ನಾಗದೀಪ್ ಪ್ರಾರಂಭದಲ್ಲಿ ಅನ್ನಮಾಚಾರ್ಯರ ಕೀರ್ತನೆಗಳಾದ "ಶ್ರೀಮನ್ನಾರಾಯಣ", "ವಂದೇ ವಾಸುದೇವಂ", "ಜೋ ಜೋ ಅಚ್ಯುತಾನಂದ" ಹಾಡಿ ನಂತರ ಕನ್ನಡದ ಹರಿದಾಸರುಗಳಿಂದ ರಚಿತವಾದ "ನಾರಾಯಣ ಎನ್ನಿರೋ ", "ರಾಮ ಗೋವಿಂದ ಹರೇ ", "ಯಾದವ ರಾಯಾ", "ಗರ್ವ ಯಾತಕೋ", "ಒಂದೇ ನಾಮವು ಸಾಲದೇ", "ಸಾಮಾನ್ಯವಲ್ಲ ಶ್ರೀಹರಿ ಸೇವಾ", "ಯಮನೆಲ್ಲಿ ಕಾಣೆನೆಂದು ಹೇಳಬೇಡ", "ರಾಮ ಮಂತ್ರವ ಜಪಿಸೋ" ಹೀಗೆ ಇನ್ನೂ ಮುಂತಾದ ಹಲವಾರು ಅಪರೂಪದ ಕೃತಿಗಳನ್ನು ಪ್ರಸ್ತುತಪಡಿಸಿ, ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ಶ್ರೀ ಎಸ್. ಶಶಿಧರ್ ಮತ್ತು ಮೃದಂಗ ವಾದನದಲ್ಲಿ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಸಾಥ್ ನೀಡಿದರು. ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ಸ್ವಾಗತ ಮತ್ತು ವಂದನಾರ್ಪಣೆ ಮಾಡಿದರು.