ಬೆಂಗಳೂರಿನ ತ್ಯಾಗರಾಜನಗರದಲ್ಲಿರುವ 'ವಜ್ರಕ್ಷೇತ್ರ' ಶ್ರೀ ಅಭಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಾರ್ಗಶಿರ ಹುಣ್ಣಿಮೆಯ ಪ್ರಯುಕ್ತ ಡಿಸೆಂಬರ್ 15, ಭಾನುವಾರ ಬೆಳಗ್ಗೆ ಶ್ರೀ ಕಂಬದ ನರಸಿಂಹಸ್ವಾಮಿಗೆ ಸಹಸ್ರ ಶಂಖ ಕ್ಷೀರಾಭಿಷೇಕ ನೆರವೇರಲಿದೆ.
ನಂತರ ಮಹಾಲಕ್ಷ್ಮಿ ಹಾಗೂ ಶ್ರೀ ಸತ್ಯನಾರಾಯಣಸ್ವಾಮಿ ಪೂಜೆ, ನರಸಿಂಹಸ್ವಾಮಿಗೆ ವಿಶೇಷ ಅಲಂಕಾರ, ಸಂಜೆಯ ಕಾರ್ಯಕ್ರಮದಲ್ಲಿ ಭೂತರಾಜರ ಪೂಜೆ, ಭಜನೆ, ಮಹಾಮಂಗಳಾರತಿ, ಭಕ್ತಾದಿಗಳಿಗೆ ಪ್ರಸಾದ ವಿತರಣೆ ಕಾರ್ಯಕ್ರಮಗಳು ಜರುಗಿದವು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಡಾ|| ವಾದಿರಾಜ ಆಚಾರ್ಯ ಹಾಗೂ ಸಹ- ಅರ್ಚಕರಾದ ಶ್ರೀ ನರಹರಿ ಆಚಾರ್ಯ ತಿಳಿಸಿದ್ದಾರೆ.