ಕರ್ನಾಟಕ ಸೌತ್ ಜೋನ್ ಯೋಗಅಸೋಸಿಯೇಷನ್ ಡಾ .ರಾಜ್ ಯೋಗ ವಿದ್ಯಾಲಯ, ಸಂಯುಕ್ತ ಆಶ್ರಯದಲ್ಲಿ ರಾಷ್ಟಮಟ್ಟದ ಮುಕ್ತ ಯೋಗಾ ಚಾಂಪಿಯನ್ ಶಿಪ್ ಸ್ಪರ್ಧೆಗಳು ಪರ್ಲ್ ಎಂ ಜಿ ಪಾರ್ಟಿ ಹಾಲ್, ಕಲ್ಯಾಣ ನಗರ,ಸರ್ವಜ್ಞ ನಗರ ವಿಧಾನ ಸಭಾ ಕ್ಷೇತ್ರ ಇಲ್ಲಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೆಂಟ್ ಫಿಲೋಮಿನಾ ಪ್ರೌಢಶಾಲೆಯ ಚೇರ್ಮನ್ ಬಿ .ಎನ್ ಸುರೇಶ್ ನ್ಯಾಯವಾದಿಗಳಾದ ಎಸ್.ಎ ಕಿರಣ್ ಕುಮಾರ್, ತನು ಸೋಲಾರ್ ಮಾಲೀಕರಾದ ಎಲ್ ಕೃಷ್ಣಮೂರ್ತಿ ಸಮಾಜ ಸೇವಕರಾದ ಪ್ರಭಾಕರ್ ವಿದುಷಿ ಶ್ರೀಮತಿ ಪ್ರವೀಣ್, ಅಂತರಾಷ್ಟ್ರೀಯ ಯೋಗ ತೀರ್ಪಗಾರರಾದ ಶ್ರೀಮತಿ ವಾಣಿ, ನವ್ಯ ನಾಟ್ಯಶಾಲೆಯ ಅಧ್ಯಕ್ಷರಾದ ಡಿ.ಶ್ರೀನಾಥ್ ಮುಖಂಡರಾದ ರಾಬರ್ಟ್ ಕ್ಲೈವ್ ಯುವ ಮುಖಂಡರಾದ ರಾಬರ್ಟ್ ಕ್ಲೈವ್ ಯುವ ಮುಖಂಡ ನವನೀತ ಮುರಳಿ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಅಸೋಸಿಯೇಷನ್ ಅಧ್ಯಕ್ಷರಾದ ಯೋಗ ಶ್ರೀ ವರ್ಧಮಾನ್ ಕಳಸೂರು ಪ್ರಾಸ್ತಾವಿಕ ನುಡಿಗಳನ್ನು ನುಡಿದರು ಕಾರ್ಯದರ್ಶಿಗಳಾದ ಕಲಂದರ್ ಭಾಷಾ ಸರ್ವರನ್ನು ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿಶ್ವ ಬಂಧು ನಾಗೇಶ್ ಅಚ್ಚುಕಟ್ಟಾಗಿ ನಿರ್ವಹಿಸಿದರು.
ನ್ಯಾಯವಾದಿಗಳಾದ ಕಿರಣ್ ಕುಮಾರ್ ಮತ್ತು ಬಿಎನ್ ಸುರೇಶ್ ರವರು ಮಾತನಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗದ ಪ್ರಾಮುಖ್ಯತೆಗಳನ್ನು ತಿಳಿಸಿ ಹೇಳಿದರು.
ಯೋಗ ಆಚಾರ್ಯ ಕಲಂದರ್ ಭಾಷಾ ಮತ್ತು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಬಿಎನ್ ಸುರೇಶ್ ರವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.