ಸುಬ್ರಹ್ಮಣ್ಯ ಷಷ್ಠಿ
ಡಿಸೆಂಬರ್ ತಿಂಗಳಿಂದ, ಜನವರಿ,ಫೆಬ್ರವರಿ ತಿಂಗಳ ವರೆಗಿನ ಶುದ್ಧ ಷಷ್ಠಿ,ಎಲ್ಲಾ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ತೇ ರು,ರಥೋತ್ಸವ ಆಚರಣೆ ಇರುತ್ತದೆ.ಚಂಪಾ ಷಷ್ಠಿ, ಸುಬ್ರಹ್ಮಣ್ಯ ಷಷ್ಠಿ, ಸ್ಕಂದ ಷಷ್ಠಿ ಇತ್ಯಾದಿ ಹೆಸರಿನಿಂದ ಕರೆಯುವರು. ಈ ಷಷ್ಠಿ ಗಳಂದು ಕೆಲವರು ಮನೆಗಳಲ್ಲಿ ಷಷ್ಠಿ ಆಚರಣೆ ಇಟ್ಟುಕೊಳ್ಳುತ್ತಾರೆ.ಇದು ಪೂರ್ವೀಕರಿಂದ ಬಂದ ಪದ್ಧತಿ ಇಲ್ಲದಿದ್ದರೆ ಸುಬ್ರಹ್ಮಣ್ಯ ,ನಾಗ ಪ್ರತಿಷ್ಠೆ ಮಾಡಿರುವವರು ಈ ಷಷ್ಠಿ ಆಚರಣೆ ಮಾಡುತ್ತಾರೆ.
ಹಿಂದಿನ ದಿನ ಒದ್ದೆ ಮಡಿಯಲ್ಲಿ ಮಡಿಬಿಟ್ಟೆ ಹರವಿರುತ್ತಾರೆ.ಮಡಿ ನೀರು ಅಡಿಗೆಗೆ ಪೂಜೆಗೆ ಹಿಡಿದಿರುತ್ತಾರೆ.ಹಾಗು ವಟು ವಿಗೆ, ಉಪನಯನ ಆದ ಬ್ರಾಹ್ಮಣ ಗಂಡು ಹುಡುಗನಿಗೆ ಶಷ್ಟಿಗೆ ಬ್ರಹ್ಮಚಾರಿಯಾಗಿ ಮನೆಗೆ ಆಮಂತ್ರಣ ನೀಡಿರುತ್ತಾರೆ.ಸುಬ್ರಹ್ಮಣ್ಯನ ಮಡಿ ಜಾಸ್ತಿ.
ಮಾರನೇ ದಿನ ಕುಟುಂಬದ ಎಲ್ಲರೂ ತಲೆಗೆ ಎರಡು ಬೊಟ್ಟು ಹಾಲು ಇಟ್ಟುಕೊಂಡು ಬಿಸಿ ನೀರಿನಲ್ಲಿ ತಲೆ ಸ್ನಾನ ಮಾಡಿ ಮಡಿ ವಸ್ತ್ರ ಧರಿಸುತ್ತಾರೆ.ಹೆಂಗಸರು ಮಡಿ ನೀರಿನಲ್ಲಿ ಅಡಿಗೆ ಮಾಡಿದರೆ ಗಂಡಸರು ನಿತ್ಯ ದೇವರ ಪೂಜೆ, ಫಣಿ,ನಾಗರ ಹೆಡೆಗೆ ಷೋಡಶೋಪಚಾರ ಪೂಜೆ ಮಾಡುತ್ತಾರೆ.
ನಂತರ ವಟುವನ್ನು ಕರೆದು ರಂಗೋಲಿ ಹಾಕಿದ ಬಾಳೆ ಎಲೆ ಮುಂದೆ ಕೂರಿಸುತ್ತಾರೆ. ಈ ದಿನ ಪಾಯಸ, ಹುಳಿಯನ್ನ ಅಂದರೆ ಒಂದು ಬಗೆಯ ಪುಳಿಯೋಗರೆ, ಆಂಬೊಡೆ, ಅನ್ನ,ಸಾರು, ಸಪ್ಪೆ ತೊವ್ವೆ, 2ಬಗೆ ಪಲ್ಯ, ಕೋಸಂಬರಿ, ಚಟ್ನಿ, ಅಡಿಗೆ ಮಾಡಿರುತ್ತಾರೆ.ಇದನ್ನು ಬ್ರಹ್ಮಚಾರಿಯ ಎಲೆಗೆ ಬಡಿಸುತ್ತಾರೆ.ನಂತರ ವಟುವಿನ ಹೆಗಲ ಮೇಲೆ ಹೊಸ ಪಂಚೆ ಶಲ್ಯ ಇಲ್ಲವೇ ಬರಿ ಶಲ್ಯ,ಟವೆಲ್ ಹೊದಿಸಿ ವಟು ವಿಗೆ ಗಂಧ ಅಕ್ಷತೆ ಕೊಟ್ಟು ಮನ್ಗಳಾರತಿ ಮಾಡುತ್ತಾರೆ.ನಂತರ ಮನೆಯವರೆಲ್ಲ ವಟುವಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ನಂತರ ಹಸ್ಥೋದಕ ಹಾಕಿ ಭೋಜನ ಪ್ರಾರಂಭ ಆಗುತ್ತದೆ.ಭೋಜನದ ನಂತರ ವಟುವಿಗೆ ಯಥಾ ಶಕ್ತಿ ತಾಂಬೂಲ ವೀಳ್ಯದೆಲೆ, ಅಡಿಕೆ, ತೆಂಗಿನಕಾಯಿ, ಬಾಳೆಹಣ್ಣು,ದಕ್ಷಿಣೆ ಇಟ್ಟು ಅವರಿಗೆ ಹೊದಿಸಿದ ವಸ್ತ್ರದ ಸಮೇತ ನೀಡುತ್ತಾರೆ. ಈ ದಿನದ ಪ್ರಸಾದ ಆಂಬೊಡೆ.ಇದನ್ನು ಬೇಕಾದವರಿಗೆಲ್ಲ ಹಂಚುತ್ತಾರೆ.ನಂತರ ಸಂಜೆಗೆ ನಾಗನ ಸನ್ನಿಧಿಗೆ ಹೋಗಿ ಹಣ್ಣು ಕಾಯಿ ಅಂದರೆ ಪೂಜೆ ಮಾಡಿಸಿಕೊಂಡು ಬರುತ್ತಾರೆ.ಕೆಲವರು ಬೆಳಿಗೆಯೇ ಸುಬ್ರಹ್ಮಣ್ಯನ ಪೂಜೆಗೆ ದೇವಸ್ಥಾನದಲ್ಲಿ ಕೊಟ್ಟಿರುತ್ತಾರೆ.ನಂತರ ರಾತ್ರಿಗೆ ಊಟವಿಲ್ಲ.ಇದು ಮನೆಯ ಹಿರಿಯರಿಗೆ ಮಾತ್ರ.ಮಕ್ಕಳು ಊಟ ಮಾಡಬಹುದು.ಹಿರಿಯರು ಫಲಾಹಾರ ತೆಗೆದುಕೊಳ್ಳಬಹುದು.
ಏನು ಮಾಡಲು ಸಾಧ್ಯವಿಲ್ಲದಿದ್ದವರು ಈ ದಿನ ಒಬ್ಬ ಬ್ರಾಹ್ಮಣ ವಟುವಿಗೆ ಯಥಾಶಕ್ತಿ ದಕ್ಷಿಣೆ ಇಟ್ಟು ತಾಂಬೂಲ ನೀಡಿ ನಾಗನ ಗುಡಿಗೆ ಹೋಗಿ ಮಂಗಳಾರತಿ ಅಥವಾ ಪೂಜೆ ಮಾಡಿಸುತ್ತಾರೆ
ವೈಚಾರಿಕವಾಗಿ ನೋಡಿದರೆ ಷಷ್ಠಿ ಆಚರಣೆ ನಮ್ಮ ದೈನಂದಿನ ಜೀವನದಲ್ಲಿ ನಾಗನ ಪ್ರಾಮುಖ್ಯತೆ ಎತ್ತಿ ತೋರಿಸುತ್ತದೆ.ನಾಗನ ಹೆಸರಲ್ಲಿ ಪೂಜೆ ಅವನ ಬಗ್ಗೆ ನಮಗಿರುವ ಭಯ,ಕಾಳಜಿ ತೋರಿಸುತ್ತದೆ.ಇದಲ್ಲದೆ ಪ್ರತಿ ಷಷ್ಠಿ ಉಪವಾಸ ಆಚರಿಸುವವರು ಇದ್ದಾರೆ.
ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಈ ಸಮಯದಲ್ಲಿ ರಥೋತ್ಸವ ಇರುತ್ತದೆ.ಆಗ ಸಹಿತ ಬ್ರಹ್ಮಚಾರಿಗಳಿಗೆ ಹಸ್ಥೋದಕ, ಅಥವಾ ಪೂಜೆಯ ಸೇವೆ ಇರುತ್ತದೆ.
ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಜಿಲ್ಲೆಯ ಆಚರಣೆ ತಿಳಿಸುತ್ತದೆ.ಉಳಿದಂತೆ ಈ ದಿನ ಅವರವರ ಮನೆಯ ಹಿರಿಯರು ರೂಡಿಸಿಕೊಂಡ ಪದ್ಧತಿಯಂತೆ ಆಚರಿಸಲ್ಪಡುತ್ತದೆ.
ರಾಧಿಕಾ ಜಿ ಎನ್
ಟೀವೀ ಹೋಸ್ಟ್
brahmies@gmail.com
ಜಾಹಿರಾತು....