ನೃತ್ಯವಿದುಷಿ ದರ್ಶಿನಿ ಮಂಜುನಾಥ್ ಗೆ ಪಿಎಚ್ ಡಿ ಪದವಿ # ರೇವಾ ವಿವಿಯಿಂದ ಪ್ರದಾನ

varthajala
0

ಬೆಂಗಳೂರು:  ವಿದುಷಿ ದರ್ಶಿನಿ ಮಂಜುನಾಥ್ ಅವರಿಗೆ ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯ ಪಿಎಚ್ ಡಿ  ಪದವಿ ನೀಡಿ ಗೌರವಿಸಿದೆ.



ಭರತನಾಟ್ಯ ವಿದುಷಿ ದರ್ಶಿನಿ ಮಂಜುನಾಥ್ ಅವರು ಡಾ. ವಿದ್ಯಾ ಶಿಮ್ಲಡ್ಕ ಅವರ ಮಾರ್ಗದರ್ಶನ ದಲ್ಲಿ" 19ನೇ ಮತ್ತು 20ನೇ ಶತಮಾನಗಳಲ್ಲಿ ಬೆಂಗಳೂರು ಪ್ರದೇಶದಲ್ಲಿನ ನೃತ್ಯದ ಸಾಮಾಜಿಕ-ಸಾಂಸ್ಕೃತಿಕ ಬೆಳವಣಿಗೆ:  ಭರತನಾಟ್ಯದ  ವಿಶೇಷ ಉಲ್ಲೇಖ"  ಕುರಿತು ಮಂಡಿಸಿದ್ದ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಅಲಂಕರಿಸಿದೆ. ದರ್ಶಿನಿ ಅವರು ಬೆಂಗಳೂರಿನ ನೃತ್ಯ ದಿಶಾ ಟ್ರಸ್ಟ್  ಕಲಾ  ನಿರ್ದೇಶರೂ ಆಗಿದ್ದಾರೆ.2004 ರಲ್ಲಿ ನೃತ್ಯ ದಿಶಾ ಸಂಸ್ಥೆ ಆರಂಭಿಸಿ ಈವರೆಗೆ ಸಾವಿರಾರು ಮಕ್ಕಳಿಗೆ ಭರತನಾಟ್ಯ ಕಲೆ ಧಾರೆ ಎರೆದಿರುವುದು ವಿಶೇಷ.

ಕರ್ನಾಟಕ ಸೇರಿದಂತೆ ದೇಶದ ಪ್ರತಿಷ್ಠಿತ ವೇದಿಕೆಗಳಲ್ಲಿ ಹಾಗೂ ವಿದೇಶದಲ್ಲೂ ವಿದುಷಿ ದರ್ಶಿನಿ ಮತ್ತು ಅವರ ತಂಡದ ಕ್ರಿಯಾಶೀಲ ಕಲಾವಿದರು ಕಾರ್ಯಕ್ರಮ ನೀಡಿ ಕಲಾರಸಿಕರ ಮನ ಗೆದ್ದಿರುವುದು ಗಮನಾರ್ಹ ಸಾಧನೆಯಾಗಿದೆ.

ಬೆಂಗಳೂರಿನ ರೇವಾ ವಿವಿ  ಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಿಎಚ್  ಡಿ ಪದವಿಯನ್ನು ಭರತನಾಟ್ಯ ವಿದುಷಿ ದರ್ಶಿನಿ ಮಂಜುನಾಥ್ ಅವರಿಗೆ ಪ್ರದಾನ ಮಾಡಲಾಯಿತು. ವಿವಿಯ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಬಿ.ಪಿ. 

 ದಿವಾಕರ್ , ಉಪ ನಿರ್ದೇಶಕ ಡಾ.  ವಿಶ್ವನಾಥ ಆರ್.  ಹುಳಿ ಪಲ್ಲೇದ ಹಾಜರಿದ್ದರು.

Post a Comment

0Comments

Post a Comment (0)