ಸಿಬಿಎಸ್ಇ ಸಂಸ್ಕೃತಿಯಿಂದ ನಮ್ಮ ಗುರುಕುಲ ಪದ್ಧತಿ, ಪರಂಪರೆ, ಸಂಸ್ಕೃತಿಯು ಉಳಿಯುತ್ತಿಲ್ಲ -ಶ್ರೀ ಸುಜಯನಿಧಿ ತೀರ್ಥರು

varthajala
0

ಬೆಂಗಳೂರು : ಸಿಬಿಎಸ್ಇ ಸಂಸ್ಕೃತಿಯಿಂದ  ನಮ್ಮ ಗುರುಕುಲ ಪದ್ಧತಿ, ಪರಂಪರೆ, ಸಂಸ್ಕೃತಿಯು ಉಳಿಯುತ್ತಿಲ್ಲ ಎಂದು ಮುಳಬಾಗಿಲು ಶ್ರೀಶ್ರೀಪಾದರಾಜ ಮಠದ ಪೀಠಾಧಿಪತಿ -ಶ್ರೀ ಸುಜಯನಿಧಿ ತೀರ್ಥರು ಕಳವಳ ವ್ಯಕ್ತಪಡಿಸಿದರು,
ಅವರು ಅಕ್ಷಯ ವಿಪ್ರ ಮಹಾಸಭಾ ಆಯೋಜಿಸಿದ್ದ ನೂತನ 2025ರ ದಿನಚರಿ (ಕ್ಯಾಲೆಂಡರ್)ಬಿಡುಗಡೆ ಮಾಡಿ ಆಶೀರ್ವಚನ ನೀಡಿ ಮಾತನಾಡಿ ದರು.
 ಇಂದು ಮುಖ್ಯವಾಗಿ ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವುದಕ್ಕೆ ಒತ್ತು ಕೊಡಬೇಕು ಸಾಧ್ಯವಾದಷ್ಟು ಬೇಗ ಅಂದರೇ ಎಂಟು ವರ್ಷದ ಒಳಗೆ ಉಪನಯನ ಮಾಡಬೇಕು, ಆಗ ಮಾತ್ರ ಗಾಯತ್ರಿ ಮಂತ್ರದ ಶಕ್ತಿ ನಮಗೆ ಸಂಪೂರ್ಣ ವಾಗಿ ಸಿಗುತ್ತೆ ಎಂದರು,
ನಮ್ಮ ಧರ್ಮ ಆಚರಣೆಯನ್ನು ನಾವು ಕಟ್ಟು ನಿಟ್ಟಾಗಿ ಫಾಲನೆ ಮಾಡಬೇಕು ಎಂದ ಅವರು ಅಕ್ಷಯ ವಿಪ್ರ ಮಹಾಸಭಾವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಅಭಿನಂದನಿಯವಾದದು ನಮ್ಮ ಸಮಾಜಕ್ಕೆ ಸಾಧ್ಯವಾದಷ್ಟು ಉತ್ತಮ ಕೆಲಸ ಕಾರ್ಯಗಳನ್ನು ಮಾಡಿ ಮಾರ್ಗದರ್ಶಕವಾಗಿದೆ ಎಂದು ಶ್ರೀಸುಜಯನಿಧಿ ತೀರ್ಥರು ಶ್ಲಾಘೀಸಿದರು.



ಜನವರಿಯಲ್ಲಿ ನಗರದ ಅರಮನೆ ಮೈದಾನದಲ್ಲಿ ಎ ಕೆಬಿಎಮ್ಎಸ್ ಆಯೋಜಿಸಿರುವ ಸುವರ್ಣ ಸಂಭ್ರಮದಲ್ಲಿ ಸಮಸ್ತ ವಿಪ್ರ ಭಾಂದವರು ಪಾಲ್ಗೊಂಡು ಯಶಸ್ವಿ ಗೊಳಿಸುವ ಜೊತೆಗೆ 24ಕೋಟಿ ಗಾಯತ್ರಿ ಮಂತ್ರ ಜಪಪಟನೆಗೆ ನಿಮ್ಮದೇ ಆದ ಕೊಡುಗೆಯನ್ನು ನೀಡಿ ಎಂದರು.
ಸಭೆಯಲ್ಲಿ ಅಥಿತಿಯಾಗಿ ಎ ಕೆಬಿಎಮ್ಎಸ್ ನ ಉಪಾಧ್ಯಕ್ಷ ರಾಘವೇಂದ್ರ ಭಟ್ ಪಾಲ್ಗೊಂಡು ಎಲ್ಲರೂ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಹ್ವಾನವನ್ನು ನೀಡಿದರು.
ಈ ಸಂದರ್ಭದಲ್ಲಿ ಮಹಾಸಭಾದ ಹಿರಿಯ ಮುಖಂಡರಾದ ಡಾ, ರಘುನಾಥ್ ರಾವ್, ಕೆ, ಜನಾರ್ಧನ ರಾವ್, ರಾಮಚಂದ್ರ ರಾವ್, ಫಣಿರಾಜ್, ಅಧ್ಯಕ್ಷ ರಾಘವೇಂದ್ರ ರಾವ್, ಉಪಾಧ್ಯಕ್ಷರಾದ ಡಾ, ಕಿರಣ್ ಎಸ್ ಮೂರ್ತಿ, ಶ್ರೀಪ್ರಕಾಶ್, ಪ್ರಧಾನ ಕಾರ್ಯದರ್ಶಿ ಎನ್ ಎಸ್ ಸುಧೀಂದ್ರ ರಾವ್, ಸಹಕಾರ್ಯದರ್ಶಿ ಪ್ರಾಣೇಶ್ ರಾವ್, ಲಕ್ಷ್ಮೀಶ,ಮಹೇಶ್ ಅಂತರಿಕ ಲೆಕ್ಕ ಪರಿಶೋಧಕ ಗುರುನಾಥ, ಅಕ್ಷಯ ಬಳಗದ ಮಹಿಳಾ ಭಜನಾ ತಂಡದ ರೂಪ ನಾಗೇಶ್, ಮಾಲತಿ ಸೇತುಮಾದವ, ಸಿಂಧು ಆನಂದರಾವ್, ರಮಾ ರಾಧಾಕೃಷ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Post a Comment

0Comments

Post a Comment (0)