ಬಾಂಗ್ಲಾದೇಶದಲ್ಲಿ ಹಿಂದೂ ಗಳಮೇಲೆ ನಿರಂತರವಾಗಿ ನಡೆಯುತ್ತಿರುವ ಹಲ್ಲೆ ಮತ್ತು ಅಕ್ರಮಣಗಳ ಖಂಡಿಸಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ
ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ, ದೌರ್ಜನ್ಯ ನಿಲ್ಲುವರೆಗೂ ಸಂಘ ಹಾಗೂ ಬಿಜೆಪಿಯಿಂದ ಹೋರಾಟ-
ಪ್ರಭಾರಿ ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ . ಅಶ್ವತ್ಥನಾರಾಯಣ ರಾವ್ ಟಿ.ಎಸ್.
ಪ್ರಭಾರಿ ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ . ಅಶ್ವತ್ಥನಾರಾಯಣ ರಾವ್ ಟಿ.ಎಸ್, ಅವರು ಮಾತನಾಡಿ, ಯಾವ ಬಾಂಗ್ಲಾದೇಶ ಉದಯ ಆಗೋದಕ್ಕೆ ಕಾರಣರಾದ ಭಾರತೀಯ ಹಿಂದೂಗಳು, ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡ್ತಿದ್ದಾರೆ, ಜೊತೆಗೆ ಇವತ್ತಿನ ದಿನ ಬಾಂಗ್ಲಾದೇಶ ದೇಶದಲ್ಲಿ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಇದಕೋಸ್ಕರ ಇಂದು ಭಾರತಾಂದ್ಯಾತ ಎಲ್ಲ ಹಿಂದೂಗಳು ಪ್ರತಿಭಟನೆ ಹಮ್ಮಿಕೊಂಡಿದ್ದು, ಎಲ್ಲರೂ ಈ ಅನ್ಯಾಯವನ್ನು ಒಗ್ಗಟ್ಟಾಗಿ ಖಂಡಿಸಬೇಕು, ಜಾಗೃತರಗಬೇಕು. ಇಂದು ಮುಸ್ಲಿಮ್ ಜಿಹಾದಿಗಳು ಅಲ್ಲಿರುವ ನಮ್ಮ ಹಿಂದೂಗಳ ಆಸ್ತಿ ಪಾಸ್ತಿ, ಹಾಗೂ ಅಪಾರ ಪ್ರಮಾಣದ ಜೀವ ಹಾನಿ ಮಾಡುತ್ತಿದ್ದಾರೆ. ಇವತ್ತು ಬಾಂಗ್ಲಾದೇಶ ದಲ್ಲಿರುವ ಇಸ್ಕಾನ್ ಮಂದಿರದಲ್ಲಿ ಹಾನಿ ಮಾಡಿದ್ದೂ, ಅಲ್ಲಿನ ಮುಖ್ಯಸ್ಥರು ಇಂದು ಹೇಳಿಕೆ ನೀಡಿ ಕೋವಿಡ್ ಸಂದರ್ಭದಲ್ಲಿ ದೇಶದ ಹಲವು ಕಡೆಗಳಲ್ಲಿ ಅನ್ನ, ನೀರು ನೀಡಿ ಸಾಕಿದ ಅವರಿಗೆ ಇಂದು ಜೈಲಿಗೆ ಹಾಕಿದ್ದಾರೆ. ಸ್ವಾತಂತ್ರ ಬಂದ ಬಾಂಗ್ಲಾದೇಶ ದೇಶದಲ್ಲಿ ಹಿಂದೂಗಳು 23% ಪರ್ಸೆಂಟ್ ಜನಸಂಖ್ಯೆ ಇದ್ದು, ಈಗ ನಡೆಯುತ್ತಿರುವ ಜನಾಂಗಿಯ ಹಿಂಸಾಚಾರದಿಂದ ಹಿಂದೂಗಳ ಜನಸಂಖ್ಯೆ 7.1/2 ಪರ್ಸೆಂಟ್ ಗೇ ಇಳಿದಿದೆ.
ಇದನ್ನು ಖಂಡಿಸಿ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ನೇತೃತ್ವದಲ್ಲಿ ಬಾಂಗ್ಲಾದೇಶ ದೇಶದ ಪ್ರಧಾನಿ ಯೂನುಷ್ ಅವರಿಗೆ ತಕ್ಕ ಉತ್ತರವನ್ನು ನೀಡಬೇಕು. ಅಲ್ಲಿರುವ ಎಲ್ಲ ಹಿಂದುಗಳಿಗೆ ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಮನೋಬಲ ತುಂಬಲು ಇಂದು ಪ್ರತಿಭಟನೆ ಮಾಡುತ್ತಿದ್ದೇವೆ. ಎಂದು ಬೆಂಗಳೂರು ಕೇಂದ್ರ ಜಿಲ್ಲಾ ಬಿಜೆಪಿ ಪಕ್ಷದ ಪ್ರಭಾರಿ ಟಿ ಎಸ್ ಅಶ್ವಥ್ ನಾರಾಯಣ ರಾವ್ ಮಾಧ್ಯಮಕ್ಕೆ ತಿಳಿಸಿದರು.ಈ ಸಂಧರ್ಭದಲ್ಲಿ ರಂಗನಾಥ್, ರಾಜಶೇಖರ್, ಸುಬ್ರಮಣಿ, ಹೇಮಂತ್,ಸಂಘಪರಿವಾರದ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.