" ಶ್ರೀ ವಾಯುದೇವರ ಅವತಾರ - ಒಂದು ಚಿಂತನೆ "

varthajala
0

" ದಿನಾಂಕ : 13.12.2025 ಶುಕ್ರವಾರ - " ಹನುಮದ್ವ್ರತ ". ತನ್ನಿಮ್ಮಿತ್ತ ಶ್ರೀ ವಾಯುದೇವರ ಕಾರುಣ್ಯ ಸ್ಮರಣೆ "

ಶ್ರೀ ಮದಾಚಾರ್ಯರು " ಬಳಿತ್ಥಾ ಸೂಕ್ತದ ಅರ್ಥ ವಿವರಣೆ " ಯಲ್ಲಿ...


ಹನ ಶಬ್ದೋ ಜ್ಞಾನವಾಚೀ 

ಹಣಮಾನ್ ಮತಿ ಶಬ್ದತಃ ।

ರಾಮಸ್ಯ ಸ್ವೃತ ರೂಪಸ್ಯ 

ವಾಚಸ್ತೇನಾನಯಂತ ಹಿ ।।

ಭೃತಮೋ ಭೀಮ ಇತ್ಯಕ್ತೋ 

ವಾಚೋ ಮಾ ಮಾತರಃ ಸ್ಮೃತಾಃ ।

ಋಗಾದ್ಯ ಇತಿಹಾಸಶ್ಚ 

ಪುರಾಣಂ ಪಂಚರಾತ್ರಕಮ್ ।

ಪೋಕ್ತಾಃ ಸಪ್ತಶಿವಾಸ್ತತ್ರ 

ಶಮೋ ಭೀಮಸ್ತತಃ ಸ್ಮೃತಃ ।।

ಮಧ್ವಿತ್ಯಾನಂದ ಉದ್ಧಿಷ್ಟೋ ವೇತಿ ತೀರ್ಥಮುದಾಹೃತಮ್ ।

ಮಧ್ವ ಆನಂದತೀರ್ಥ: ಸ್ಯಾತ್ 

ತೃತೀಯಾ ಮಾರುತೀ ತನು: ।।

ಇತಿ ಸೂಕ್ತಗತಂ ರೂಪ-

ತ್ರಯ ಮೇತನ್ಮಹಾತ್ಮನಃ ।

ಯೋ ವೇದಾ ವೇದವಿತ್ ಸ 

ಸ್ಯಾತ್ ತತ್ತ್ವವಿತ್ ತತ್ ಪ್ರಸಾದತಃ ।।

1. . " ಹನು " ಎಂದರೆ " ಜ್ಞಾನ ".

" ಹನಗತೌ - ಹನೂಮಾನ್ " ಎಂದರೆ ಸ್ವರೂಪ ಭೂತವಾದ ಅತಿಶಯವಾದ ಜ್ಞಾನ ಉಳ್ಳವರು. ಈ ಅರ್ಥದಲ್ಲೇ ಸೂಕ್ತದಲ್ಲಿ " ಮತಿ = ಜ್ಞಾನ ಸ್ವರೂಪ " ಎಂಬ ಪದದಿಂದ ಕರೆದಿದ್ದಾರೆ.

" ಋತ " ಎಂದರೆ ಯಥಾರ್ಥ ಜ್ಞಾನ ರೂಪವಾದ ನಿರ್ವಿಕಾರನಾದ ವೇದ ವೇದ್ಯನಾದ ಶ್ರೀ ರಾಮಚಂದ್ರ. ಅನಂತ ಜ್ಞಾನಮಯನಾದವನ ಸಂದೇಶವನ್ನು ಜ್ಞಾನಮಯನಾದ ಹನುಮಂತನೇ " ಸೀತೆಗೆ " ಮುಟ್ಟಿಸಿದ.

2. " ಭೀಮ " ಎನ್ನುವುದೂ " ಜ್ಞಾನನಿಧಿ " ಎನ್ನುವ ಅರ್ಥವನ್ನೇ ಹೇಳುವ ಪದ.

ಭೃತ + ಮ " ಮಾ " ಎಂದರೆ " ಸಪ್ತಶಿವಾಸು ಮಾತೃಷು " ಎಂಬಲ್ಲಿ ಮಾತುಗಳೇ ಮಾತೃಗಳು. ಇವುಗಳನ್ನು ಧರಿಸಿದವರೇ " ಶ್ರೀ ಭೀಮಸೇನದೇವರು ".

ನಾಲ್ಕು ವೇದಗಳೂ, ಭಾರತ - ರಾಮಾಯಣಗಳೆಂಬ ಇತಿಹಾಸ - ಪುರಾಣಗಳು ಮತ್ತು ಪಂಚರಾತ್ರ ಇವೇ " ಸಪ್ತಶಿವಗಳು " - ಮಾಂಗಲೀಕ ಮಾತುಗಳು. ಇವುಗಳಲ್ಲಿ ವಿಹರಿಸುವವರೇ ಶ್ರೀ ಭೀಮಸೇನದೇವರು.

3. " ಮಧು " ಎಂದರೆ " ಆನಂದ ".

" ವ " ಎಂದರೆ " ಜ್ಞಾನಪ್ರದವಾದ ಶ್ರಾಸ್ತ್ರತೀರ್ಥ ".

ಆದ್ದರಿಂದ..

" ಮಧು + ವ " ಎಂದರೆ " ಆನಂದತೀರ್ಥ. ಇದು ಶ್ರೀ ವಾಯುದೇವರ ಮೂರನೇ ಅವತಾರ ರೂಪ!

" ಯಜು: ಸಂಹಿತಾ " ದಲ್ಲಿ...

ಸಾಧಕೋ ರಾಮಕಾರ್ಯಾಣಾ೦ 

ತತ್ ಸಮೀಪಗತಃ ಸದಾ ।

ಹನೂಮಾನ್ ಪ್ರಥಮೋಜ್ಞೇಯೋ 

ಭೀಮಸ್ತು ಬವಭುಕ್ ಪಿತೋ: ।।

ಪೃತನಾಕ್ಷಿಯಕಾರೀ ಚ 

ದ್ವಿತೀಯಸ್ತು: ತೃತೀಯಕಃ ।

ಪೂರ್ಣಪ್ರಜ್ಞಸ್ತಥಾssನಂ+

ದತೀರ್ಥ ನಾಮಾ ಪ್ರಕೀರ್ತಿತಃ ।।


ದಶೇತಿ ಸರ್ವಮುದ್ದಿಷ್ಟ೦ 

ಸರ್ವಂ ಪೂರ್ಣಮಿಹೋಚ್ಯತೇ ।

ಪ್ರಜ್ಞಾ ಪ್ರಮತಿರುದ್ಧಿಷ್ಟಾ 

ಪೂರ್ಣಪ್ರಜ್ಞಸ್ತತಃ ಸ್ಮೃತಃ ।।


ಆ ಸಮಂತಾತ್ ಪತಿತ್ವೇ ತು 

ಗೂಢ೦ ಕಲಿಯುಗೇ ಹರಿಮ್ ।

ಅಸತ್ಯಮಪ್ರತಿಷ್ಠ೦ ಚ 

ಜಗದೇತ ದನೀಶ್ವರಮ್ ।।

ವದಬ್ಭಿರ್ಗೂಹಿತಂ ಸಂತಂ ತೃತೀಯೋsಸುಮರ್ಥಾಯತಿ ।

ಯೇನ ವಿಷ್ಣೋ ರ್ಹಿ ವರ್ಪಾಖ್ಯಾನ್ ಗುಣಾನಜ್ಞಾನಿಷು: ಪರಾನ್ ।।


ಈಶಾನಾಸಃ ಸೂರಯಶ್ಚ 

ನಿಗೂಢಾನ್ ನಿರ್ಗುಣೋಕ್ತಿಭಿ: ।

ತ್ರೇತಾಯಾಂ ದ್ವಾಪರೇ ಚೈವ ಕಲೌ 

ಚೈತೇ ಕ್ರಮಾತ್ ತ್ರಯಃ ।।


ಏತೇಷಾ೦ ಪರಮೋ ವಿಷ್ಣು-

ರ್ನೇತಾ ಸರ್ವೇಶ್ವರೇಶ್ವರಃ ।

ಸ್ವಯಂಭೂ ಬ್ರಹ್ಮ ಸಂಜ್ನೋಸೌ 

ಪರೋsಸ್ಮೈ ಬ್ರಹ್ಮಣೇ ನಮಃ ।।


ಶ್ರೀ ರಾಮಚಂದ್ರದೇವರ ಕಾರ್ಯಗಳನ್ನು ನೆರವೇರಿಸುವುದಕ್ಕಾಗಿ ( ಸಾಧತೇ ) ರಾಮಚಂದ್ರನ ಬಳಿ ಸಾರಿದ. ಶ್ರೀ ರಾಮನ ಅಂತರಂಗ ಭಕ್ತರಾದ ಶ್ರೀ ಹನುಮಂತದೇವರು " ಪ್ರಾಣಾಗ್ನಿ ಸ್ವರೂಪರಾದ ಶ್ರೀ ವಾಯುದೇವರ ಪ್ರಥಮಾವತಾರ ".


ಬಹು ಅನ್ನವನ್ನುಂಡ ( ಪಿತುಮಾನ್ ) ಸೇನೆಯನ್ನು ಸದೆ ಬಡೆದ ಶ್ರೀ ಭೀಮಸೇನದೇವರು ಶ್ರೀ ವಾಯುದೇವರ ದ್ವಿತೀಯಾವತಾರ.

ಪೂರ್ಣಪ್ರಜ್ಞರೆಂದೂ - ಆನಂದತೀರ್ಥರೆಂದೂ ಪ್ರಖ್ಯಾತರಾದ " ಯತಿ " ಯೇ ಶ್ರೀ ವಾಯುದೇವರ ತೃತೀಯಾವತಾರ.

" ದಶ " ಎಂದರೆ " ಪೂರ್ಣ " ಎಂದರ್ಥ.

" ಪ್ರಮತಿ " ಎಂದರೆ " ಪ್ರಜ್ಞೆ " - ಜ್ಞಾನ.

ಎಲ್ಲವನ್ನೂ ತಿಳಿದವರೇ ಪೂರ್ಣಪ್ರಜ್ಞರು.  ಅವರೇ ದಶಪ್ರಮತಿ. 

ಹೀಗೆ ಮತಿ = ಶ್ರೀ ಹನುಮಂತದೇವರೇ " ದಶಪ್ರಮತಿ " ಯಾದರು!!

ಶ್ರೀ ಹರಿಯೇ ಎಲ್ಲರಿಗೂ ಸ್ವಾಮಿ ( ಆ + ಧವೇ ) " ಸರ್ವೋತ್ತಮ " ಎಂದು ಸಾರಲು ಕಲಿಯುಗದಲ್ಲಿ ಮರೆಯಾದ ಶ್ರೀ ಹರಿಯ ಮಹಿಮೆಯನ್ನೂ; ಈ ಜಗತ್ತು ಮಿಥ್ಯೆ, ಅದಕ್ಕೆ ನೆಲೆಯಿಲ್ಲ, ನೆಲೆಯಾದ ಭಗವಂತನೂ ಇಲ್ಲ ಎಂದು ಹೇಳುವ ದುರಾತ್ಮರು ಮರೆಮಾಚಿದ ಶ್ರೀ ಹರಿಯ ಮಹಿಮೆಯನ್ನು ಶ್ರೀ ಮುಖ್ಯಪ್ರಾಣದೇವರ ಮೂರನೆಯ ರೂಪ ( ಶ್ರೀ ಆಚಾರ್ಯ ಮಧ್ವರು ) ಶಾಸ್ತ್ರಗಳನ್ನು ಮಥನ ಮಾಡಿ ಮತ್ತೆ ಬೆಳಕಿಗೆ ತರುತ್ತದೆ.

ಅದರಿಂದ ಜಗತ್ತಿನ ನಿಯಾಮಕ ಶಕ್ತಿಗಳಾದ ದೇವತೆಗಳೂ; ಇತರೆ ಜ್ಞಾನಿಗಳೂ; ನಿರ್ಗುಣ ವಾದಗಳಿಂದ ಮರೆಯಲ್ಲಿ ಹುದಗಿದ್ದ " ವರ್ಪ " ಗಳೂ ಎಂದು ನಿಗೂಢವಾಗಿಯೇ ಶ್ರುತಿಗಳೂ ಸಾರಿದ ಹರಿಯ ಹಿರಿಯ ಗುಣಗಳನ್ನು ತಿಳಿಯುವಂತಾಯಿತು.

ತ್ರೇತಾ - ದ್ವಾಪರ ಮತ್ತು ಕಲಿ - ಈ ಮೂರು ಯುಗಗಳಲ್ಲಿ ಕ್ರಮವಾಗಿ ಶ್ರೀ ವಾಯುದೇವರ ಈ ಮೂರು ಅವತಾರಗಳಾದವು.

ಈ ಮೂರು ರೂಪಗಳಿಗೂ ನಿಯಾಮಕನಾದವನು ಸರ್ವೋತ್ತಮನಾದ ಶ್ರೀಹರಿಯೊಬ್ಬನೇ.

ಅವನನ್ನೇ " ಸ್ವಯಂಭು " " ಬ್ರಹ್ಮ " ( ತಾನೇ ತಾನಾದ ಪರತತ್ತ್ವ ) ಎಂದು ಶ್ರುತಿಗಳು ಕೊಂಡಾಡುವ ಅಂಥಾ " ಪರತತ್ತ್ವ " ಕ್ಕೆ ನಮಸ್ಕಾರಗಳು!!

" ಶ್ರೀ ಸಹ್ಲಾದಾಂಶ ಜಗನ್ನಾಥಾದಾಸರು " ಹರಿಕಥಾಮೃತಸಾರ - ಮಂಗಳಾಚರಣ ಸಂಧಿ " ಯಲ್ಲಿ...

ಆರು ಮೂರೆರಡೊಂದು ಸಾವಿರ ।

ಮೂರೆರಡು ಶತ ಶ್ವಾಸ ಜಪಗಳ ।

ಮೂರು ವಿಧ ಜೀವ-

ರೊಳಗಬ್ಜಜಕಲ್ಪಪರಿಯಂತ ।।

ತಾ ರಚಿಸಿ ಸತ್ವರಿಗೆ ಸುಖ । ಸಂ ।

ಸಾರ ಮಿಶ್ರರಿಗಧಮ । ಜನರಿಗ ।

ಪಾರ ದುಃಖಗಳೀವ 

ಗುರು ಪವಮಾನ ಸಲಹೆಮ್ಮ ।।

ಆರು ಮೂರೆರಡೊಂದು ಸಾವಿರ =  6 x 3 = 18 + 2 + 1 = 21 x 1000 = 21000

ಮೂರೆರಡು ಶತ = 3 x 2 = 6 x 100 = 600

ಒಟ್ಟು = 21600

ಶ್ವಾಸ ಜಪಗಳ = 21600 ಶ್ವಾಸ ಜಪಗಳ ಷಡಕ್ಷರ ಹಂಸ ಮಂತ್ರ ಜಪಗಳನ್ನು ಪ್ರತಿ ದಿವಸದಲ್ಲಿ

ಮೂರು ವಿಧ ಜೀವರೊಳಗೆ = ಸಾತ್ವಿಕ, ರಾಜಸ, ತಾಮಸ ಜೀವಿಗಳಲ್ಲಿದ್ದು

ಅಬ್ಜಜ ಕಲ್ಪ ಪರಿಯಂತ = ಶ್ರೀ ಚತುರ್ಮುಖ ಬ…

Post a Comment

0Comments

Post a Comment (0)