ಬೆಂಗಳೂರು,ಡಿ.28 :ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಶುಕ್ರವಾರ ನಡೆದ GB ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಪುನರಾಯ್ಕೆಯಾಗಿದ್ದಾರೆ.
ಷಡಾಕ್ಷರಿ ಅವರು 507 ಮತಗಳು ಹಾಗೂ ಬಿ.ಪಿ. ಕೃಷ್ಣೇಗೌಡ ಅವರು 442 ಮತಗಳನ್ನು ಪಡೆದರು. ಷಡಾಕ್ಷರಿ ಅವರು 65 ಮತಗಳ ಅಂತರದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ,ಸಂಘದ ಖಚಾಂಚಿಯಾಗಿ ಶಿವರುದ್ರಯ್ಯ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎ. ಹನುಮನರಸಯ್ಯ ಘೋಷಿಸಿದರು.
ಬಳಿಕ ಎರಡನೇ ಬಾರೀ ಜಿದ್ದಾಜಿದಿಯಲ್ಲಿ ಚುನಾವಣೆಯನ್ನು ಜಯಗಳಿಸಿ ಅಪಾರ ಸ ಬಂದುಗಳೊಂದಿಗೆ ವಿಜಯೋತ್ಸವ ಆಚರಿಸಿದ ಸಿ.ಎಸ್.ಷಡಕ್ಷರಿ ನನ್ನನ್ನು ಸೋಲಿಸಲೇ ಬೇಕೆಂಬ ಉದ್ದೇಶದಿಂದ ಎದುರಾಳಿಗಳು ಅನುಸರಿಸಿದ ಚುನಾವಣಾ ತಂತ್ರ, ಹಣದ ಬಲದಿಂದ ನನ್ನ ಗೆಲುವಿನ ಅಂತರ ಕಡಿಮೆಯಾಗಿದೆ, ಮುಂದಿನ ದಿನಗಳಲ್ಲಿ 2025ರ ವರ್ಷದಲ್ಲಿ ಎಪಿಎಸ್ ಹೋಗಾಲಾಡಿಸಿ ಓಪಿಎಸ್ ಹಳೆಯ ನಿವೃತ್ತಿ ಯೋಜನೆ ಜಾರಿಗೊಳಿಸುವುದು ಜತೆಗೆ ನೌಕರರ ಕುಟುಂಬಗಳಿಗೆ ಅನುಕೂಲವಾಗುವಂತೆ ಆರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
.