ಧನುರ್ಮಾಸ ಪೂಜೆ

varthajala
0

ಪುಷ್ಯ ಮಾಸ ವನ್ನು ಧನುರ್ಮಾಸ ಎನ್ನುವರು.ಇದು ಚಳಿಗಾಲ. ಈ ಮಾಸದಲ್ಲಿ ನಾವು ಧನುಸ್ಸಿನಂತೆ ಚಳಿಯಿಂದ ಬಗ್ಗುತ್ತೇವೆ ಎನ್ನುವ ಪ್ರತೀತಿ ಇದೆ.

ಧನುರ್ಮಾಸದಲ್ಲಿ ಬೆಳ್ಳಂ ಬೆಳಿಗ್ಗೆ ದೇವಾಲಯಗಳಲ್ಲಿ ವಿಶೇಷ ಪೂಜೆ ಇರುತ್ತದೆ.

ಮನೆಯ ಹಿರಿಯರು ಧನುರ್ಮಾಸದಲ್ಲಿ ಅಕ್ಕಿ, ಕಾಯಿ, ಬೆಲ್ಲ, ಹೆಸರುಬೇಳೆ ಇತ್ಯಾದಿ ದೇವಾಲಯಕ್ಕೆ ಪೂಜೆಗೆ ನೀಡುತ್ತಾರೆ.ನಂತರ ಹಿಂದಿನ ದಿನ ಸ್ನಾನವಾದ ನಂತರ ಮಡಿ ನೀರು ಹಿಡಿದು ಮಡಿ ಬಟ್ಟೆ,  ಹರವುತ್ತಾರೆ.ಮಾರನೇ ದಿನ ಬೆಳಿಗ್ಗೆ ಮುಂಚೆಯೇ ಎದ್ದು, ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ, ಮಡಿ ನೀರಿನಲ್ಲಿ ಮನೆಯ ದೇವರ ಪೂಜೆ ಮಾಡುತ್ತಾರೆ.

ಸಿಹಿ ಪೊಂಗಲ್ ಅಥವಾ ಸಿಹಿ ಹುಗ್ಗಿ ಈ ದಿನದ ನೈವೇದ್ಯ ವಿಶೇಷ.ಸಾನ್ಗೋಪಾನ್ಗವಾಗಿ ದೇವರ ಪೂಜೆಯ ನಂತರ ಬ್ರಾಹ್ಮಣ ಮುತ್ತೈದೆಯರಿಗೆ ಪೊಂಗಲ್, ದಕ್ಷಿಣೆ ಸಮೇತ ತಾಂಬೂಲ ನೀಡುತ್ತಾರೆ.ನಂತರ ದೇವಾಲಯಕ್ಕೆ ಹೋಗಿ ದೇವರ ಪ್ರಸಾದ ತೆಗೆದುಕೊಂಡು ಬರುವರು.

ಸಾಮಾನ್ಯವಾಗಿ ಈ ಮಾಸದಲ್ಲಿ ಒಂದೊಂದು ದಿನ ಒಂದು ಕುಟುಂಬದವರ ಧನುರ್ಮಾಸ ಸೇವೆ ಇರುತ್ತದೆ.

ಅಯ್ಯಂಗಾರ್ರಿಗೆ ಇದು ವಿಶೇಷ ಮಾಸ.ಲಕ್ಷ್ಮಿದೇವಿ ಅಥವಾ ಅಂಡಾಲ್ ರಂಗನಾಥನನ್ನು ಒಲಿಸಿಕೊಂಡ ಮಾಸ. ಆಗ ತಿರುಪ್ಪಾವೈ ಓದುವರು.

 ವೈಚಾರಿಕವಾಗಿ ನೋಡಿದರೆ ಹೆಸರುಬೇಳೆ ಹಾಗು ತುಪ್ಪ, ಒಣ ಹಣ್ಣುಗಳ ಸೇವನೆ ಈ ಕಾಲದಲ್ಲಿ ಒಳ್ಳೆಯದು.ಕಾರ ಪೊಂಗಲ್ ಹಾಗು ಮೆಣಸು, ಜೀರಿಗೆ ಸೇವನೆ ಕೂಡಾ ಈ  ಕಾಲದಲ್ಲಿ ಆಗಬಹುದಾದ ಸಣ್ಣ ಪುಟ್ಟ ರೋಗಗಳಿಗೆ ಮದ್ದು.ನಸುಕಿನಲ್ಲಿ ಏಳುವುದು ಕೊಂಚ ತ್ರಾಸವೇ ಸರಿ

 ವಿಶೇಷವಾಗಿ ಈ ಮಾಸದಲ್ಲಿ ಮಹಾ ವಿಷ್ಣುವಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.

 ಬನ್ನಿ ಓದುಗರೇ ಧನುರ್ಮಾಸ ಪೂಜೆ ಮಾಡಿ ನಮ್ಮ ಆಚರಣೆ ಮರೆಯದಿರೋಣ.

ಈ ಲೇಖನ ಸ್ಮಾರ್ತ ಹೊಯ್ಸಳ ಕರ್ನಾಟಕ ಶಿವಮೊಗ್ಗ ಭಾಗದ ಆಚರಣೆ ತಿಳಿಸುತ್ತದೆ.ಉಳಿದಂತೆ ಇದು ಅವರವರ ಮನೆಯ ಹಿರಿಯರ ಆಚರಣೆಯಂತೆ ಇರುತ್ತದೆ.

ರಾಧಿಕಾ ಜಿ ಎನ್ 

ಟೀವೀ ಹೋಸ್ಟ್ 

brahmies@gmail.com





Post a Comment

0Comments

Post a Comment (0)