ಬಾಸ್ಮತಿಯವರೊಂದಿಗೆ ಬಾತ್ ಚೀತ್

varthajala
0

ಮೊನ್ನೆ ತಾನೇ ನನ್ನ ಎಂ ಎಸ್ ಇಂಜಿನಿಯರಿಂಗ್ ಕಾಲೇಜ್, ಪ್ರಾಂಶುಪಾಲರಾದ  ಡಾ. ಎನ್. ರಾಣಾಪ್ರತಾಪ್ ರೆಡ್ಡಿ ಅವರು ಒಬ್ಬ ಮಹಿಳೆಯನ್ನು ಕಾಲೇಜ್ ಗೆ ಕರೆದುಕೊಂಡು ಬಂದಿದದ್ಡರು. ಆ ಮಹಿಳೆಯನ್ನು ನೋಡಿದರೆ ಏನೋ ಕುತೂಹಲ. ಅವರ ನಡೆಯಲ್ಲಿ ವಿನೀತ ಸ್ವಭಾವ ಎದ್ದು ಕಾಣುತಿತ್ತು. ಅವರನ್ನು ಎಲ್ಲೋ ನೋಡಿದ ನೆನಪು ಆದರೆ ನೆನಪು ಅಸ್ಪಷ್ಟ, ನೋಡಲು ಉತ್ತರ ಭಾರತ ಮೂಲದವರು ಅದರಲ್ಲೂ ಒರಿಸ್ಸಾ ಅಥವಾ ಬಿಹಾರ್ ಆಕಡೆ ಅವರು ಎಂದೆನಿಸಿತು ಆ ಮಹಿಳೆಯ ಮುಖ ಚಹರೆ ನೋಡಿದರೆ ಏಕೋ ಏನೋ ಅವರನ್ನು ಮಾತಾನಾಡಿಸುವ ಆಸೆ ಆಕ್ಷಣೆವೆ ನನ್ನ ಒಳಗೆ ಚಿಗುರೊಡೆಯಿತು. ನಾನು ಕುತೂಹಲದಿಂದ ಹಾಗೂ ಸ್ವಲ್ಪ ಹಿಂಜರಿಕೆಯಿಂದ ನಮ್ಮ ಪ್ರಾಂಶುಪಾಲರಿಗೆ ನಾನು ಅವರನ್ನು ಮಾತಾನಾಡಿಸಬಹುದೆ ಎಂದು ಕೇಳಿದೆ ಅದಕ್ಕೆ ಅವರು ಆಲ್‌ರೈಟ್ ಆದರೆ ಮೊದಲು ಅವರು ನಿಮ್ಮನ್ನು ಉದ್ದೇಶಿಸಿ ಸಭಾಂಗಣದಲ್ಲಿ ಸ್ವಲ್ಪ ಸಮಯದಲ್ಲೇ ಭಾಷಣ ಮಾಡಲಿದ್ದಾರೆ ತದ ನಂತರ ನೀನು ಅವರನ್ನು ಮಾತಾನಾಡಿಸಬಹುದು ಎಂದರು. ಸರಿ ಎಂದು ನಾನು ಕೌತುಕದಿಂದ ಸಭಾಂಗಣಕ್ಕೆ ದೌಡಾಯಿಸಿದೆ . ಆ ಮಹಿಳೆ ಸಭಾಂಗಣಕ್ಕೆ ತಡ ಮಾಡದೆ ಬಂದೆ ಬಿಟ್ಟರು.

ಸಭಾಂಗಣದಲ್ಲಿರುವ ವೇದಿಕೆ ಮೇಲೆ ಆಸೀನಾರಾದರು ಆ ಮಹಿಳೆ ಅವರ ಬಗ್ಗೆ ನಿರೂಪಕರು ಪರಿಚಯಸಿದರು ಆವಾಗ ತಿಳಿಯಿತು ಅವರು ಬಾಸ್ಮತಿ ಗಾರ್ಗೈ ಎಂದು. ಇದೇನಿದು ಬಾಸ್ಮತಿ ಅಕ್ಕಿ ಕೇಳಿದ್ದೆ ಬಾಸ್ಮತಿ ಎಂಬ ಹೆಸರು ಎಂದು ಅಚ್ಚರಿ ಮೂಡಿತು .... ಸ್ವಲ್ಪ ಸಮಯದ ನಂತರ ತಿಳಿಯಿತು ಬಾಸ್ಮತಿ ಅಂದರೆ ಅದರ ಇನ್ನೊಂದು ಅರ್ಥ ಪರಿಮಳ ಎಂದು. ಮೊದಲಿನ ನನ್ನ ಉಹೆ ಸ್ವಲ್ಪ ಸರಿಯಿತ್ತು ಅವರು ಉತ್ತರ ಭಾರತದವರು ಎಂದು ನಂತರ, ಝಾರ್ಖಂಡ ರಾಜ್ಯದ  ಒಂದು ಕುಗ್ಗ್ರಾಮದ ಬುಡಕಟ್ಟು ಜನಾಂಗದ ಮಹಿಳೆ ಎಂದು ತಿಳಿಯಿತು.  ಅವರು “ಜೋಹಾರ್“  “ಜೋಹಾರ್”   ತಮ್ಮ ಭಾಷಣ ಶುರು ಮಾಡಿದರು. ಅವರ ಬಾಷೆಯೆಲ್ಲಿ ಜೋಹಾರ್ ಎಂದರೆ ನಮಸ್ಕಾರವೆಂದು. ಅವರ ನುಡಿಗಳು ಎಂತವರಿಗಾದರೂ ಸ್ಪೂರ್ತಿ ತುಂಬುವ ಶಕ್ತಿ ಹೊಂದಿದದ್ದವು .

ಅವರ ಭಾಷಣ ಪ್ರತಿಯೊಬ್ಬರನ್ನೂ ಬೇರೆ ಪ್ರಪಂಚಕ್ಕೆ ಕರೆದೋಯಿತು ಅಂದರೆ ತಪ್ಪಾಗಲಾರದು. ಅಸಲಿ ಕಹಾನಿ  ಎಂದರೆ  ಬಾಸ್ಮತಿ ಗಾರ್ಗೈ  ಝಾರ್ಖಂಡ್ ರಾಜ್ಯದ ಪಶ್ಚಿಮ ಮಂಝರಿ ಜಿಲ್ಲೆಯ ಲಾಂಝರಿ ಎಂಬ ಹಳ್ಳಿಯ  " ಹೊ" ಎಂಬ ಬುಡಕಟ್ಟು ಜನಾಂಗದ ಮಹಿಳೆ. ಅಲ್ಲಿಯ ಬುಡಕಟ್ಟಿನ ಜನಾಂಗದವರಿಗೆ ಊಟ ವಸತಿ ದೊರೆತರೆ ಅದೇ ಹೆಚ್ಚು ಇಂಥಾ ಪರಿಸ್ಥಿತಿಯಲ್ಲಿ ಓದು  ಬರಹ ಎಂದರೆ  ಗಗನ ಕುಸುಮ ,  ಇಂಥಾ  ದುಸ್ಥಿತಿಯಲ್ಲೂ ಎಲ್ಲಾ ರೀತಿಯ ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು  ಸಾವಿರಾರು ಬುಡಕಟ್ಟು ಮಹಿಳೆಯರಲ್ಲಿ ಡಿಗ್ರೀಯವರೆಗೂ ಓದಿದ ಏಕೈಕ  ವ್ಯಕ್ತಿ ಹಾಗೂ ಸಾವಿರಾರು ಬುಡಕಟ್ಟು ಮತ್ತು ಅನಾಥ ಮಕ್ಕಳಿಗೆ ತನ್ನ ಕೈಯಾರೆ ಶಾಲೆ ಒಂದನ್ನು ಕಟ್ಟಿದ ಮಹಾನ್ ಸಾಧಕಿ. ಅವರಿಗೆ 17ನೇ ವಯಸ್ಸಿಗೆ ಮದುವೆ ಮಾಡಲಾಯಿತು ಒಂದು ವರ್ಷದಲ್ಲಿ ಮಗುವಿಗೆ ಜನನ ತದನಂತರ ಎರಡು ವರ್ಷ ವನವಾಸ ಆದರೂ ಛಲ ಬಿಡದೆ  ತನ್ನ ಸ್ವಂತ ದುಡಿಮೆ ಯಲ್ಲಿ ಡಿಗ್ರೀ ವರೆಗೆ ವಿದ್ಯಾಭಾಸ ಮುಗಿಸಿ  ಪಟ್ಟಣ ಒಂದರಲ್ಲಿ ಶಿಕ್ಷಕಿ ಕೆಲಸಕ್ಕೆ ಸೇರಿದ ವರು. ತನ್ನ ಮಗುವಿಗೆ ಶಾಲೆಗೆ  ಕಳಿಸಬೇಕು ಎಂದು ಮಹದಾಸೆ ಆದರೆ ತಮ್ಮ ಊರಲ್ಲಿ ಶಾಲೆ ಇಲ್ಲ. ಅದು 2016 ನೇ ವರ್ಷ ಬಾಸ್ಮತಿ ಸಂಬಂಧ ಪಟ್ಟಿವರಿಗೆ ಎಲ್ಲಾ ರೀತಿಯ ಮನವಿ ಮಾಡಿದರು ತನ್ನ ಹಳ್ಳಿಗೆ ಶಾಲೆಯ ವ್ಯವಸ್ಥೆ ಕಲ್ಪಿಸಲಾಗಲಿಲ್ಲ ಹಾಗಾಗಿ ಬಾಸ್ಮತಿ ಒಂದು ಮರದ ಕೆಳೆಗೆ ತನ್ನ ಮಗು ಮತ್ತು ಇತರೆ ಮೂರು ಮಕ್ಕಳೊಂದಿಗೆ ಒಂದು ಮರದ ಕೆಳೆಗೆ ಓನಾಮ ಹೇಳಿಕೊಡಲು ಶುರು ಮಾಡಿದರು. ಒಂದು ಮರದ ಕೆಳೆಗೆ ಶುರು ಮಾಡಿದ ಶಿಕ್ಷಣ ಈಗ ಒಂದು ಎನ್‌ಜಿಒ ಸಹಾಯದೊಂದಿಗೆ 350 ಮಕ್ಕಳಿಗೆ ಉಚಿತ ವಾಗಿ ಶಿಶು ವಿಹಾರದಿಂದ ಏಳನೇ ತರಗತಿಯವರಿಗೆ ವ್ಯಾಸಂಗ ಮಾಡಲು ಒಂದು ದೊಡ್ಡ ಶಾಲೆ ಜೊತೆಗೆ ಉಚಿತ ಬೆಳಗ್ಗಿನ ತಿಂಡಿ ಮಧ್ಯಾಹ್ನದ ಊಟ ಮತ್ತು 50 ಜನ ಅನಾಥ ಮಕ್ಕಳಿಗೆ ವಸತಿ ಸೌಕರ್ಯವಾಗಿ ಮಾರ್ಪಟ್ಟಿದೆ.  ಅಷ್ಟೇ ಅಲ್ಲದೆ ಕಳೆದ 6 ವರ್ಷಗಳಲ್ಲಿ ಸರಿ ಸುಮಾರು 50,000 ಬುಡಕಟ್ಟು ಜನರಿಗೆ ಶಿಕ್ಷಣ, ಪರಿಸರ , ಆರೋಗ್ಯ , ವ್ಯಾಸಗಳಿಂದ ಮುಕ್ತಿ ಇವುಗಳ  ಬಗ್ಗೆ ಯಶಸ್ವಿ ಜನ ಜಾಗೃತಿ  ಮತ್ತು ಸಾವಿರಾರು ಮಹಿಳೆಯರ ಸಬಲೀಕರಣ ಮಾಡಿದ್ದಾರೆಂದು ಅವರ ಭಾಷಣದಿಂದ ತಿಳಿದು ಬಂತು.


ಇಷ್ಟೆಲ್ಲಾ ಕೇಳಿದ ನನಗೆ ಬಾಸ್ಮತಿಯವರ ಬಗ್ಗೆ ಇನ್ನೂ ತಿಳಿದು ಕೊಳ್ಳಬೇಕೆಂಬ ಆಸೆ ಇಮ್ಮಡಿ ಆಯಿತು. ಹಾಗಾಗಿ ಭಾಷಣ ಮತ್ತು ಇತರೆ ಕಾರ್ಯಕ್ರಮ ಮುಗಿದ ನಂತರ ನಮ್ಮ ಪ್ರಾಂಶುಪಾಲರಾದ                                          ಡಾ. ಎನ್. ರಾಣಾಪ್ರತಾಪ್ ರೆಡ್ಡಿ ಮತ್ತು ಎಂ ಎಸ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಶ್ರೀ. ಸುದರ್ಶನ್ ರಾಜು ಅವರ ಅನುಮತಿಯೊಂದಿಗೆ ಬಾಸ್ಮತಿ ಗಾರ್ಗೈ ಅವರೊಂದಿಗೆ ಬಾತ್ ಚೀತ್ ಗೆ ಮುಂದಾದೆ…. ನನ್ನ ಪ್ರಶ್ನೆಗಳು ಹಾಗೂ ಅವುಗಳಿಗೆ   ಬಾಸ್ಮತಿ ಗಾರ್ಗೈ ಅವರ ಉತ್ತರ ಹೀಗಿದ್ದವು…………

 

 ನೀವು ಶಾಲೆ ಸ್ಥಾಪಿಸಲು ಕಾರಣವೇನು?

ನಮ್ಮ ಹಳ್ಳಿ ತುಂಬಾ ದುಸ್ಥಿತಿಯಲ್ಲಿತ್ತು  ನಮ್ಮ ಹಳ್ಳಿ ಜನರಿಗೆ ತಮ್ಮ ಮಕ್ಕಳಿಗೆ ಶಾಲೆಗೆ ಕಳಿಸಬೇಕು ಎಂಬ ಪರಿಜ್ಞಾನವಿರಲಿಲ್ಲಾ ಅದು ಅವರ  ತಪ್ಪಲ್ಲ ಏಕೆಂದರೆ  ಊಟ ವಸತಿ ನೀರಿಗೆ ಪರೆದಾಡುವ ನಮ್ಮ ಜನಾಂಗ ಮಕ್ಕಳಿಗೆ ಶಿಕ್ಷಣ ಕೊಡೆಸುವ ತಿಳುವಳಿಕೆ ಅಸಹಜ ಇದು ನನನ್ನು ಹಗಲು ಇರುಳು ಕಾಡಿತು ನಾನು ಹೇಗೂ ಶಿಕ್ಷಣ ಪಡೆದ  ನಂತರ ಎಲ್ಲಾ ನನ್ನ ಸುತ್ತ ಮುತ್ತಲಿನ ಬುಡಕಟ್ಟು ಜನ ರ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಮಹದಾಸೆ ಮತ್ತು ಜವಾಬ್ದಾರಿ  ನನನ್ನು ಶಾಲೆಯೊಂದನ್ನು ಸ್ಥಾಪಿಸಲು ಕಾರಣವಾಯಿತು.

ಶಾಲೆ ಕಟ್ಟುವ ಸಮಯದಲ್ಲಿ ಏನಾದರೂ ಅಡೆ ತಡೆಗಳು ಉಂಟಾದವೋ?

ಶಾಲೆ ಕಟ್ಟುವ ಸಮಯದಲ್ಲಿ ನಾನಾ ವಿಧದ ಸಮಸ್ಯೆಗಳು ಎದುರಾದವು , ನಮ್ಮ ಬುಡಕಟ್ಟು ಜನರೇ ನನ್ನ ವಿರುದ್ಧ ಪಿತೂರಿ ಮಾಡಿದರು, ಬೇರೆ ಬೇರೆ ಸಂಘ ಸಂಸ್ಥೆಗಳು ನೀಡಿದ್ದ ದೇಣಿಗೆ  ಹಣದಿಂದ ತಂದಿದ ಕಟ್ಟಡ ಸಾಮಗ್ರಿಗಳನ್ನು ಕದ್ದುರು, ಅರ್ಧ ಕಟ್ಟಡ ನಿರ್ಮಾಣ ಮಾಡಿದ ಮೇಲೆ ಪೂರ್ತಿ ನೆಲಸಮ ಮಾಡಿದರು, ಆಗ ನಾನೇ ಖುದ್ದಾಗಿ ನಿರ್ಮಾಣ ಮಾಡಲು ಮುಂದಾದೆ, ಶಾಲೆ ನಿರ್ಮಾಣ ಮಾಡುವರೆಗೆ ಪಾಳು ಕಟ್ಟಡದಲ್ಲೇ ನಾನು ವಾಸ ಮಾಡಿ ಎಲ್ಲವನ್ನೂ ನೋಡಿಕೊಂಡೆ, ಆಗ ಕೆಲ ಗಂಡಸರು ನನ್ನ ಮೇಲೆ ಹಲ್ಲೆ ಮಾಡಲು  ಪ್ರಯತ್ನ ಪಟ್ಟರು  ಆದರು ನಾನು ಧೃತಿಗೆಡಲಿಲ್ಲ ಧೈರ್ಯ ವಾಗಿ ಮುನ್ನುಗ್ಗಿ ಶಾಲೆ ಕಟ್ಟಿದೆ.

ನೀವು ಬುಡಕಟ್ಟು ಜನಾಂಗದ ಹೆಣ್ಣು ಮಕ್ಕಳನ್ನು ಹೇಗೆ ಶಾಲೆಗೆ ಕರೆತಂದಿರಿ?

ನಮ್ಮ ಬುಡಕಟ್ಟು ಜನರಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕಳಿಸಲು ಪರಿಪಾಟವಿಲ್ಲ  ನಾನು

ಮೊದ ಮೊದಲು ನಮ್ಮ ಜನಾಂಗದ ಹೆಂಗಸರಿಗೆ ಎಷ್ಟೇ ಬುದ್ದಿವಾದ ಹೇಳಿದರು ಕೇಳಲಿಲ್ಲ ನಾನು ತದನಂತರ ನನ್ನ ತಾಯಿ ಸಹಕಾರದಿಂದ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸಿ ಉಚಿತ ಶಿಕ್ಷಣ ಮತ್ತು ಉಚಿತ ಸಮ ವಸ್ತ್ರ, ಊಟ,ಪುಸ್ತಕ, ಇತ್ಯಾದಿ ಮತ್ತುಶೌಚಾಲಯದ ಸೌಕರ್ಯವನ್ನು ನನ್ನ ಶಾಲೆ ಹೊಂದಿದೆ

ಉಚಿತ ಪೂರೈಕೆ ಮಾಡುತ್ತೇವೆ ಎಂದು ಹೇಳಿದ ಮೇಲೆ ಮತ್ತುಅವರಿಗೆ ತೋರಿಸಿ ಖಾತ್ರಿ ಪಡಿಸಿದ ಮೇಲೆ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಿದರು.

ನೀವು ನಮ್ಮ ಕಾಲೇಜಿಗೆ ಭೇಟಿ ನೀಡಲು ಕಾರಣ ಮತ್ತು ಅನಿಸಿಕೆ?

ನಾನು ಹೋದ ಬಾರಿ ಬೆಂಗಳೂರಿಗೆ ಬಂದಾಗ ಡಾ. ರಾಣಾಪ್ರತಾಪ್ ರೆಡ್ಡಿ ಯವರು ಒಂದು ಸಮಾರಂಭದಲ್ಲಿ ಪರಿಚಯವಾದರು ನಾನು ಅವರ ಬಗ್ಗೆ ಮತ್ತು ಅವರ ಕಾಲೇ ಜಿನ ಬಗ್ಗೆ ವಿಚಾರಿಸಿದ ಮೇಲೆ ನಾನು ನಿಮ್ಮ ವಿದ್ಯಾ ಸಂಸ್ಥೆಯನ್ನು ನೋಡಲು ತವಕ ಉಂಟಾಯಿತು ಇಲ್ಲ ಬಂದ ಮೇಲೆ ನನಗೆ ಇಲ್ಲಿನ ವಾತಾವರಣ ಇಲ್ಲಿನ ಉನ್ನತ ಶಿಕ್ಷಣ ಕಲಿಸುವ ರೀತಿ ಎಲ್ಲವೂ ನನಗೆ ಇಷ್ಟವಾಯಿತು. ನನಗೆ ಈ ಎಂ ಎಸ್ ಇಂಜಿನಿಯರಿಂಗ್ ಕಾಲೇಜ್ ನಮ್ಮ ಮಹಾಕವಿ ರವೀಂದ್ರನಾಥ್ ಟಾಗೋರ್ ರ        ಶಾಂತಿನಿಕೇತನದಂತೆ ಭಾಸವಾಗುತ್ತಿದೆ ಮತ್ತು ಈ ಭೇಟಿ ತುಂಬಾ ಖುಷಿ ತಂದಿದೆ ನಾನು  ಮುಂದೆ ಇದೆ ರೀತಿ ಒಂದು ಕಾಲೇಜ್ ಸ್ಥಾಪಿಸುವ ಆಸೆ ನನಗೆ ಬಂದಿದೆ.

  ನಿಮ್ಮ ಸಾಧನೆ ನಿಮಗೆ ತ್ರಪ್ತಿ ತಂದಿದೆಯೇ ಹಾಗೂ ವಿದ್ಯಾರ್ಥಿ ಮಿತ್ರರಿಗೆ ನಿಮ್ಮ ಕಿವಿಮಾತು?

ನಾನು ಇನ್ನೂ ಏನನ್ನೂ ಸಾಧಿಸಿಲ್ಲ . ನಾನು ಇನ್ನೂ ಸಾಧಿಸುವುದು ತುಂಬಾ ಇದೆ.  ನನಗೆ ಪ್ರತಿಯೊಬ್ಬ ಪ್ರಜೆ ಬುಡಕಟ್ಟು ಜನಾಂಗವಿರಲಿ ಯಾರೇ ಇರಲಿ ಶಿಕ್ಷಣದಿಂದ ವಂಚಿತರಾಗಬಾರದು ಪ್ರತಿಯೊಬ್ಬರೂ ತಮ್ಮ ತಮ್ಮ ಮಕ್ಕಳಿಗೆ ಶಾಲೆಗೆ .ಕಳಿಸಬೇಕು ನಾನು ನನ್ನ ಕೆಲಸದಲ್ಲಿ ತೃಪ್ತಿ ಕಂಡುಕೊಳ್ಳಲು  ಪ್ರಯತ್ನಿಸುತ್ತೇನೆ . ಪ್ರತಿಯೊಬ್ಬ ವಿದ್ಯಾರ್ಥಿ; ದೇಶ ಸೇವೆ, ನಮ್ಮಸಂವಿಧಾನದ ಮೌಲ್ಯಗಳ ಪಾಲನೆ, ಸಂವಿಧಾನದಲ್ಲಿ ಜೀವನದ ಮೌಲ್ಯಗಳು ಅಡಕವಾಗಿವೆ. ಹೀಗಾಗಿ ಅವುಗಳನ್ನು ಅರ್ಥಮಾಡಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಕಾಣಲು ಸಾಧ್ಯ ಹಾಗೂ ಪರೋಪಕಾರ ಮನೋಭಾವ ಬೆಳಸಿಕೊಳ್ಳಬೇಕು ಎಂಬುದು ನನ್ನ ಅನಿಸಿಕೆ.

ಬಾಸ್ಮತಿ ಗಾರ್ಗೈ ಅವರ ಜೀವನದ ಅನುಭವಗಳನ್ನು ಕೇಳುವುದು ನಿಜವಾಗಿಯೂ ಸ್ಪೂರ್ತಿದಾಯಕವಾಗಿತ್ತು. ಇದು ನಿಸ್ವಾರ್ಥತೆ ಮತ್ತು ಸಮುದಾಯ ಹಾಗೂ ಸ್ಥಳೀಯ ಅಭಿವೃದ್ಧಿ ಮಹತ್ವಮಹಿಳಾ ಸಬಲೀಕರಣ,ಕಲಿಕೆ, ಶಿಕ್ಷಣ, ಕುರಿತು ಅಮೂಲ್ಯವಾದ ಜೀವನ ಪಾಠಗಳನ್ನು ನನಗೆ ಈ ಬಾತ್ ಚೀತ್ ನೀಡಿದೆ.


   ಶಿಲ್ಪ. ಎಂ .ಎಸ್ AI & ML ತಾಂತ್ರಿಕ ವಿಭಾಗ

ಮೊದಲನೇ  ಸೆಮಿಸ್ಟರ್

ಎಂ. ಎಸ್. ಇಂಜಿನಿಯರಿಂಗ್ ಕಾಲೇಜ್

ನವರತ್ನ ಅಗ್ರಹಾರ, ಸಾದಹಳ್ಳಿ

ಆಫ್ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್,

ಬೆಂಗಳೂರು – 562 110

Post a Comment

0Comments

Post a Comment (0)