*ವಿಶ್ವ ರೈತರ ದಿನಾಚರಣೆ: ಅನ್ನದಾತರಿಗೆ 'ಭೂಮಿ' ಪ್ರಶಸ್ತಿ*

varthajala
0

ಬೆಂಗಳೂರು: ನಗರದ ಪ್ರೆಸ್ ಕ್ಲಬ್ ಆವರಣದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸುಮಾರು ಇನ್ನೂರು ರೈತರಿಗೆ 'ಭೂಮಿ' ರೈತ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಜ್ಯದ ವಿವಿಧ ಕೃಷಿ ವಿಶ್ವ ವಿದ್ಯಾಲಯದ ನಿವೃತ್ತ ಉಪ ಕುಲಪತಿಗಳು ಹಾಗೂ ಕೃಷಿ ವಿಜ್ಞಾನಿಗಳಾದ ಡಾ.ಅಶೋಕ್ ಆಲೂರ್, ಡಾ. ಕೆ ಮಂಜುನಾಥ, ಡಾ. ಧನಂಜಯ, ಟಿ ರಮೇಶ್, ಡಾ.ಚಿದಾನಂದ ಹಾಗೂ ಭೂಮಿ ಸಂಸ್ಥೆಯ ಮುಖ್ಯಸ್ಥ ರಘುನಂದನ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರೈತರಿಂದಲೇ ರೈತರಿಗೆ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಹೊಸತನಕ್ಕೆ ನಾಂದಿ ಹಾಡಲಾಯಿತು.

ಪ್ರತಿ ವರ್ಷ ಡಿಸೆಂಬರ್ 23 ರಂದು ವಿಶ್ವ ರೈತರ ದಿನಾಚರಣೆ ಆಚರಿಸುತ್ತಿರುವುದು ತಮಗೆಲ್ಲರಿಗೂ ತಿಳಿದಿದೆ.

ದೇಶದ ಭದ್ರತೆಗೆ ಯೋಧ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ದೇಶದ ಜನರಿಗೆ ಆಹಾರ ಭದ್ರತೆ ನೀಡುವ ಅನ್ನದಾತ. ರೈತರ ಬದುಕಿನಲ್ಲಿ ಸುಧಾರಣೆ ತರುವ ಅಗತ್ಯವಿದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ತಜ್ಞರು ಅಭಿಪ್ರಾಯಪಟ್ಟರು.

'ಭೂಮಿ'ಒಂದು ಡಿಜಿಟಲ್ ಕೃಷಿ ವೇದಿಕೆಯಾಗಿದ್ದು, ಆಧುನಿಕ ತಂತ್ರಜ್ಞಾನ ಬಳಸಿ ರೈತರಿಗೆ ಉತ್ತಮ ಮಾರುಕಟ್ಟೆ, ಭೂಮಿ ಫಲವತ್ತತೆ ಹಾಗೂ ಕೃಷಿಯನ್ನು ಯುವ ಜನಾಂಗಕ್ಕೆ ಆಕರ್ಷಕ ಕ್ಷೇತ್ರವನ್ನಾಗಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ರಾಜ್ಯ ವ್ಯಾಪಿ ಕೆಲಸ ಮಾಡುತ್ತಿದೆ.

ಭೂಮಿ ಸಂಸ್ಥೆ ಇದೇ ಮೊದಲ ಬಾರಿಗೆ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಆಯ್ಕೆ ಮಾಡಿದ ಸುಮಾರು 200 ರೈತರಿಗೆ ಪ್ರಶಸ್ತಿ ಪ್ರದಾನ ಮಾಡಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Post a Comment

0Comments

Post a Comment (0)