ಬೆಂಗಳೂರು : ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಡಿಸೆಂಬರ್ 20 ರಿಂದ 22ರ ವರೆಗೆ ಮಲ್ಲೇಶ್ವರದ ಶ್ರೀ ರಾಮ ಮಂದಿರದಲ್ಲಿ ಏರ್ಪಡಿಸಲಾಗಿತ್ತು.
6ನೇ ಸಂಗೀತ ಸಮ್ಮೇಳನದ ಸಂದರ್ಭದಲ್ಲಿ ಯುವ ಸಂಗೀತ ಸಮ್ಮೇಳನದ ಅಧ್ಯಕ್ಷರೂ, ಕೊನ್ನಕ್ಕೋಲ್ ಕಲಾವಿದರೂ ಆದ ವಿದ್ವಾನ್ ಬಿ. ಅರ್ ಸೋಮಶೇಖರ್ ಜೋಯಿಸ್ ರವರ ಅತ್ಯಮೂಲವಾದ ಸಾಧನೆಯನ್ನು ಗುರುತಿಸಿ "ಸ್ವರ ಲಯ ಭಾರತೀ" ಎನ್ನುವ ಬಿರುದನ್ನು ಶ್ರೀ ಎಂ ಅನಂತ್ ರವರ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾದ ಡಾ.ಸುಮಾ ಸುದೀಂದ್ರ. ಶ್ರೀ ಎಂ ಅನಂತ್, ಶ್ರೀ ಮುಕುಂದ್, ಶ್ರೀ ಕಟ್ಟೆ ಸತ್ಯನಾರಾಯಣ ರವರು ನೀಡಿ ಗೌರವಿಸಿದರು.