" ಶ್ರೀ ರಾಯರ ಅಂತರಂಗ ಭಕ್ತರಾದ ಶ್ರೀ ಗುರು ಶ್ರೀನಿವಾಸ ವಿಠ್ಠಲಾಂಕಿತ ಮೈಸೂರು ಶ್ರೀ ಕೃಷ್ಣದಾಸರು "

varthajala
0

ಮೈಸೂರಿನ ಶ್ರೀ ಕೃಷ್ಣದಾಸರು ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಶಿಷ್ಯ ಪ್ರಶಿಷ್ಯ ಪರಂಪರೆಯಲ್ಲಿ ಬಂದ ಶ್ರೀ ಹೊನ್ನಾಳಿ ಶ್ರೀನಿವಾಸ ವಿಠ್ಠಲರಿಂದ " ಗುರು ಶ್ರೀನಿವಾಸ ವಿಠ್ಠಲ" ಎಂಬ ಮುದ್ರಿಯನ್ನು ಪಡೆದು ಹಲವು ಕೀರ್ತನೆಗಳನ್ನೂ, ಕೆಲವು ಕಾವ್ಯಗಳನ್ನೂ ರಚಿಸಿದ್ದಾರೆ. 

ಶ್ರೀ ಗುರು ಶ್ರೀನಿವಾಸ ವಿಠ್ಠಲರ ಪದ - ಸುಳಾದಿಗಳೆಲ್ಲವೂ ಪ್ರಮೇಯ ಭೂಯಿಷ್ಠವಾಗಿ ತಾತ್ತ್ವಿಕ ಕಾವ್ಯಗಳಾಗಿವೆ. 

ಶ್ರೀ ಗುರು ಶ್ರೀನಿವಾಸ ವಿಠ್ಠಲರು " ಗಯ ಚರಿತ್ರೆ " ಎಂಬ ಮಧುರ ಕಾವ್ಯವನ್ನು ಭಾಮಿನೀ ಷಟ್ಪದಿಯಲ್ಲಿ ಬರೆದಿದ್ದಾರೆ. 

" ಸಂಪೂರ್ಣ ಭಗವದ್ಗೀತೆ " ಯನ್ನು ಭಾಮಿನೀ ಷಟ್ಪದಿಯ ಛಂದಸ್ಸಿನಲ್ಲಿ ಕನ್ನಡಕ್ಕೆ ಭಟ್ಟಿಗಿಳಿದ್ದಾರೆ. 

ಶ್ರೀ ಗುರು ಶ್ರೀನಿವಾಸ ವಿಠ್ಠಲರಕೃತಿಗಳಲ್ಲಿ ಸಾಹಿತ್ಯದ ರಸೋತ್ಕಟತೆಯು ವೇದಾಂತದ ಸಮ ತೂಕದಲ್ಲಿ ಬೆರೆತು ಹೊಸ ಪಾಕವನ್ನೇ ನಿರ್ಮಾಣ ಮಾಡಿದೆ. 

ಇತ್ತೀಚಿನ ಶಾಸ್ತ್ರ ಸಾಹಿತ್ಯಗಳ ಪ್ರಭುತ್ವದ ಪ್ರೌಢಿಮೆಯಿಂದ ಹರಿದಾಸ ಸಾಹಿತ್ಯವನ್ನು ಬಳಿಸಿ - ಬೆಳಗಿಸಿದ ಧೀರ ಧೀಮಂತ ದಾಸರೆಂದರೆ ' ಶ್ರೀ ಗುರು ಶ್ರೀನಿವಾಸ ವಿಠ್ಠಲಾಂಕಿತ ಶ್ರೀ ಕೃಷ್ಣದಾಸರು!!

ಶ್ರೀ ಗುರು ಶ್ರೀನಿವಾಸ ವಿಠ್ಠಲರಕೆಲವು ಕೀರ್ತನೆಗಳ ಪ್ರಾರಂಭ ( ಪಲ್ಲವಿ ) ಹೀಗಿದೆ... 

1. ಅಧಿಕಾರಿ ನಾನಲ್ಲ ಅಧಿಕಾರವೆನಗಿಲ್ಲ 

2. ನರನ ಸೇವಕನಾಗಿ ಷಡುರಸುಂಬದಕ್ಕಿಂತ 

3. ಭಕುತಿ ಭಾಗ್ಯವನಿತ್ತು ಯೆನ್ನೀ ಸಕಲ ಕರುಣಾ 

4. ಎಂಥಾ ಋಜು ವೀರಾ 

5. ಪವಮಾನಗತಿ ಪ್ರೀಯಳೇ ಭಾರತೀದೇವಿ 

ರಾಗ : ಮೋಹನ         ತಾಳ : ಆದಿ 

ಪವಮಾನಗತಿ ಪ್ರೀಯಳೇ ಭಾರತೀದೇವಿ।

ದಯಮಾಡಿ ಸಲಹೆ ಯೆನ್ನ ।। ಪಲ್ಲವಿ ।।

ಪ್ರಿಯದಿಂದ ನಿನ್ನ ನಿರುತ ನಂಬಿ ನುತಿಪರ್ಗೆ ।

ವಯುನಗಮ್ಯನ ಭಕ್ತಿ ಪಾಲಿಪ ದೇವಿ ।। ಅ ಪ ।। 

ಆರು ಮೂರ್ಯೆರಡೊಂದು ಮತವ ಗೆದ್ದು ।

ಮೂರು ಯೆರಡು ಭೇದವಾ ।

ಪಾರಮಾರ್ಥಿಕದಿಂದಾ ಸೂರಿಗಳಿಗೆ ಪೇಳ್ದಾ ।

ಧೀರಾನರಸಿ ವೇದಸಾರ ನಾಮಕೆ ಕಾಯೆ ।। ಚರಣ ।।

ಕಾಲಾಭಿಮಾನಿ ನಿನ್ನ ಪತಿಯ ಪಾದಾ ।

ಕಾಲಕಾಲದಿ ಹೃದಯಾ । ಆಲಯ ।

ದೊಳಗೆ ಪೂಜಿಸುವ ದಾಸರ ಪಾದ ।

ಮೂಲವ ಪೊದ್ದುವ ಶಿಲ ಗುಣವಾನಿಯೇ ।। ಚರಣ ।।

ಆಗಾ ಭೋಗವ ಬಾಯಾ ನೀ ನಿರುತ ದುಃಖ ।

ಸಾಗರದೊಳು ಮುಳುಗಿ ಕೂಗುತಲಿ ।

ಹೇ ಗುರು ಶ್ರೀನಿವಾಸವಿಠ್ಠಲಾ  ನಾ ।

ಬೇಗ ಸ್ಮರಿಸಿ ಭಾವಾ ನೀಗುವ ಬಗೆ ಮಾಡು ।। ಚರಣ ।।

6. ನೋಡೇ ಬ್ರಹ್ಮನಿಂ ನೀ 

7. ಬುದ್ಧಿಮಂತನ ಭಜಿಸಿ ಬದುಕೋ 

8. ಕಾಯಲಾಗದೆ ಯೆನ್ನ ಕಾಯಲಾಗದೆ 

9. ಯೇನು ಮೆಚ್ಚಿದಮ್ಮಾ ಲಕುಮೀ ದೀನರಕ್ಷಾಗೆ 

10. ಅಗಲಿ ಸೈರಿಸಲಾರೆ ನಮ್ಮಮ್ಮಾ ಅಂತರಾತುಮ್ಮ 

11. ಎಂದು ಪೊರೆದೆಪೆ ಯನ್ನ ಆನಂದಮುನಿ

ಆಚಾರ್ಯ ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ

Post a Comment

0Comments

Post a Comment (0)