ಬೆಂಗಳೂರು: ವಿಶ್ವ ಏಡ್ಸ್ ದಿನದ ಅಂಗವಾಗಿ ರಾಜಾಜಿನಗರದ ಇ.ಎಸ್.ಐ ಆಸ್ಪತ್ರೆಯಲ್ಲಿ ನಡೆದ ಜಾಗೃತಿ ವಾಕಥಾನ್ಗೆ ನಟ ಶರಣ್, ಇ.ಎಸ್.ಐ.ಸಿ ಡೀನ್ ಡಾ. ಸಂಧ್ಯಾ ಆರ್ ರವರು ಚಾಲನೆ ನೀಡಿದರು.
ಎಚ್ಐವಿ, ಏಡ್ಸ್ ಹರಡುವಿಕೆಯಿಂದ ಆಗುವ ತೊಂದರೆಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಏಡ್ಸ್ ಬಗ್ಗೆ ಯುವಕರು ಮೊದಲೇ ಜಾಗೃತರಾಗಬೇಕು ಎಂದು ನಟ ಶರಣ್ ಹೇಳಿದರು.
ಈ ಕಾರ್ಯಕ್ರಮದಲ್ಲಿ ವೈದ್ಯರು ಹಾಗೂ ವಿದ್ಯಾರ್ಥಿಗಳು ಆಸ್ಪತ್ರೆಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಜಾಥಾ ನಡೆಸಿ ಹೆಚ್ ಐ ವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದರು.
ಇ ಎಸ್ ಐ ಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ ಅಶೋಕ್ ಕುಮಾರ್ ಸಮತಾ, ಚರ್ಮ ರೋಗ ವಿಭಾಗದ ಮುಖ್ಯಸ್ಥರಾದ ಡಾ. ಎಂ.ಎಸ್ ಗಿರೀಶ್, ಐಸಿಟಿಸಿ ಕೇಂದ್ರದ ನೋಡಲ್ ಅಧಿಕಾರಿ ಡಾ ಭಾರತಿ, ಡಿ ಎಂ ಎಸ್ ಡಾ ಯೋಗಾನಂದನ್, ಡಾ ಸುಚಿತ್ರಾ ಶ್ಯಾಮ್, ಡಾ ರವಿ, ಡಾ ಧನಂಜಯ, ಡಾ ಸುರೇಶ್ ಕುಂಬಾರ್, ಡಾ ಅಮೀನಾ, ಡಾ ಗಾಯತ್ರಿ, ಡಾ ಚೇತನ್, ಡಾ ಬಿಂದುಶ್ರೀ, ಡಾ ವಿದ್ಯಾ, ಡಾ ಮನೋಜ್, ನರ್ಸಿಂಗ್ ಸೂಪರಿಂಟೆಂಡೆಂಟ್ ಸುಧಾಕರ್ ಐಸಿಟಿಸಿ ಆಪ್ತ ಸಮಾಲೋಚಕರಾದ ಲಕ್ಷ್ಮೀ ನಾರಾಯಣ, ಲಿಂಗರಾಜು, ರಾಜೇಶ್, ಫೈ ಸ್ಟಾರ್ ಗಣೇಶ್, ತಿಪ್ಪೇಸ್ವಾಮಿ, ಮಂಜುನಾಥ್ ಸೇರಿದಂತೆ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.