ಬೆಂಗಳೂರು: ಶಾಂತಿನಗರ, ಯೋಗ ಸಭಾಗಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕನ್ನಡ ಕ್ರಿಯಾ ಸಮಿತಿ ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವ ಮತ್ತು ಕನ್ನಡಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ.
ಕ.ರಾ.ರ.ಸಾ.ಸಂಸ್ಥೆಯ ಕನ್ನಡ ಕೇಂದ್ರೀಯ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷರಾದ ನಾಡೋಜ ಮನು ಬಳಿಗಾರ್ ರವರು, ವಿಭಾಗೀಯ ನಿಯಂತ್ರಣಾಧಿಕಾರಿ ಎಸ್. ಲಕ್ಷ್ಮಿಣ್ ಮತ್ತು ಗೌರವ ಸಲಹೆಗಾರರಾದ ವ.ಚ.ಚನ್ನೇಗೌಡರವರು, ವಲಯ ಅಧ್ಯಕ್ಷರಾದ ಕೆ.ಎಸ್.ಎಂ.ಹುಸೇನ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
*ಸಾಹಿತಿಗಳಾದ ಬೇಲೂರು ರಾಮಮೂರ್ತಿ, ಶ್ರೀಮತಿ ಹೆಚ್.ಆರ್.ಸುಜಾತ ಮತ್ತು ಕನ್ನಡ ಪರ ಹೋರಾಟಗಾರ ಮ.ಚಂದ್ರಶೇಖರ್ ರವರಿಗೆ ಕನ್ನಡಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು*
*ನಾಡೋಜ ಮನುಬಳಿಗಾರ್* ರವರು ಮಾತನಾಡಿ ಮೊದಲು ಗಂಡು ಮಕ್ಕಳು ಮುಂದೆ ಇದ್ದರು, ಸತತ ಪರಿಶ್ರಮದ ಮೂಲಕ ಸಮಾಜದಲ್ಲಿ ಎಲ್ಲ ರಂಗದಲ್ಲಿ ಮಹಿಳೆಯರು ಸಾಧನೆ ಮಾಡಿ, ಸರಿಸಮಾನವಾಗಿ ನಿಂತಿದ್ದಾರೆ.
ಕನ್ನಡ ಲಿಪಿ ಮತ್ತು ವಚನ ಸಾಹಿತ್ಯ ಕಾಯಕ ತತ್ವ, ಮಹಿಳೆಯರಿಗೆ ಸರಿಸಮಾನ ಹಕ್ಕು , ಶಿಶುನಾಳ ಶರೀಫ್ ರು, ಸರ್ವಜ್ಞರು, ಕುವೆಂಪುರವರ ಸೇವೆಯಿಂದ ಕನ್ನಡ ಭಾಷೆಗೆ ಬೆಳಯಲು ಸಹಕಾರಿಯಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಎಲ್ಲ ಮುಖ್ಯಮಂತ್ರಿಗಳು ಸಹಕಾರ ಕೊಟ್ಟಿದ್ದಾರೆ.
ಕನ್ನಡಿಗರಿಗೆ ಅಂದಿನಿಂದ ಇಂದಿನವರದೆ ನಿರ್ಲಕ್ಷ್ಯ ಗೊಳಗಾಗಿದ್ದಾರೆ.
ಕುವೆಂಪುರವರಿಗೆ ನೋಬಲ್ ಪ್ರಶಸ್ತಿ ಸಿಗಬೇಕಾಗಿತ್ತು. ನಮ್ಮ ಹಿರಿಮೆ, ಗರಿಮೆ ತಿಳಿಯಲು ರಾಜ್ಯೋತ್ಸವ ಅಚರಣೆ ಮಾಡಬೇಕು. ಪ್ರತಿದಿನ ಕನ್ನಡ ತಾಯಿಯ ಸೇವೆ ಮಾಡಬೇಕು.
ದೇಶದಲ್ಲಿ ಜಿ.ಎಸ್.ಟಿ.ಪಾವತಿಯಲ್ಲಿ ಎರಡನೇಯ ಸ್ಥಾನದಲ್ಲಿ ಇರುವ ಬೆಂಗಳೂರಿಗೆ ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯವಾಗಿದೆ.
ಕೇಂದ್ರ ಸರ್ಕಾರಗಳು ಕಳೆದ 30ವರ್ಷಗಳಿಂದ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ.
*ವ.ಚ.ಚನ್ನೇಗೌಡರವರು* ಮಾತನಾಡಿ ಹರಿದು ಹಂಚಿ ಹೋಗಿರುವ ಪ್ರದೇಶಗಳು ಒಂದಾಗಬೇಕು ಎಂದುಅಲೂರು ವೆಂಕಟರಾಯರು ಹೋರಾಟ ಮಾಡಿದರು. ಇದರ ಪ್ರತಿಫಲ ಕರ್ನಾಟಕ ರಾಜ್ಯ ಉದಯವಾಯಿತು.
ಅ.ನ.ಕೃ ಮತ್ತು ಮ.ರಾಮಮೂರ್ತಿ ರವರು 1962ರಲ್ಲಿ ಕನ್ನಡ ರಾಜ್ಯೋತ್ಸವ ಅಚರಣೆ ಮೊದಲ ಚಾಲನೆ ನೀಡಿದರು.
ನಾಡು, ನುಡಿಗೆ ಶ್ರಮಿಸಿದ ಮಹನೀಯರುಗಳಿಗೆ ಗೌರವಿಸಿ,ಸನ್ಮಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯ.
ಕ.ರಾ.ರ.ಸಾ.ನಿ.ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ರಜಾ ಘೋಷಣೆ ಮಾಡುತ್ತಿರಲ್ಲಿಲ, ಅಂದಿನ ಮುಖ್ಯಮಂತ್ರಿ ರಾಮಕೃಷ್ಣಹೆಗಡೆ ರವರು ಅವರ ಬಳಿ ಕನ್ನಡ ಪರ ಹೋರಾಟಗಾರ ಪ್ರಭಾಕರ್ ರವರು ಮನವಿ ಮಾಡಿದರು ಇದರ ಪ್ರತಿಫಲ ಸರ್ಕಾರಿ ಮಾದರಿಯಲ್ಲಿ ಈ ಸಂಸ್ಥೆಗಳಿಗೆ ರಜಾ ನೀಡಬೇಕು ಎಂದು ಆದೇಶ ನೀಡಿದರು.
ಆಡಳಿತದಲ್ಲಿ ಸಂಪೂರ್ಣ ಕನ್ನಡ ಬಳಕೆ ಮಾಡುತ್ತಿರುವ ಸಂಸ್ಥೆ ಸಾರಿಗೆ ಸಂಸ್ಥೆಯಾಗಿದೆ.
ಮಹಾ ಮಹಿಮರು ಹುಟ್ಟಿದ ನಾಡು ಕನ್ನಡನಾಡು.ಬಸವಣ್ಣ, ಕನಕದಾಸರು, ವಚನಕಾರರು, ಸಂತರರವರ ಸೇವೆ ಅನನ್ಯ.
ರಾಮಾನುಜರನ್ನು ತಮಿಳುನಾಡಿನಿಂದ ಓಡಿಸಿದರು ಅವರಿಗೆ ಆಶ್ರಯ ನೀಡಿದ್ದು ಕನ್ನಡಿಗರು. ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ ಎಲ್ಲ ಧರ್ಮಗಳಿಗೆ ಸರಿಸಮಾನವಾಗಿ ಕಾಣುವ ನಾಡು ಕರ್ನಾಟಕ. ಇಮ್ಮಡಿ ಪುಲಕೇಶಿ ಸುಪುತ್ರ ವಿಕ್ರಮಾದಿತ್ಯರಾಜರು ಯುದ್ದದಲ್ಲಿ ಗೆದ್ದ ನಂತರ ದೋಚುವ ಕಾರ್ಯ ಮಾಡಲ್ಲಿಲ , ರಾಜ ಮುದ್ರೆಯನ್ನು ವಶಪಡಿಸಿಕೊಂಡರು. ಕನ್ನಡಿಗರು ದೋಚುವ ಕೆಲಸ ಮಾಡುವುದಿಲ್ಲ, ಹೃದಯ ಗೆಲ್ಲುವ ಕೆಲಸ ಮಾಡುತ್ತಾರೆ.
ನಾಮಫಲಕದಲ್ಲಿ ಕನ್ನಡ ಭಾಷೆ ಬಳಕೆ ಮಾಡಿ ಎಂದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಅನ್ಯ ಭಾಷಿಕರ ಹಾವಳಿ ಹೆಚ್ಚಾಗಿದೆ.
ಬೆಂಗಳೂರುನಗರ ವಿಶ್ವಮಾನ್ಯತೆ ಪಡೆಯಲು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣರವರ ಕೊಡುಗೆ ಅಪಾರ ಎಂದು ಹೇಳಿದರು.
*ವಿಭಾಗೀಯ ನಿಯಂತ್ರಣಾಧಿಕಾರಿ ಲಕ್ಷ್ಮಣ್ ರವರು* ಮಾತನಾಡಿ ಪ್ರತಿ ವರ್ಷ ನಮ್ಮ ಸಂಸ್ಥೆಯಲ್ಲಿ ಕನ್ನಡ ಹಬ್ಬ ಅಚರಣೆ ಮಾಡುತ್ತಿದ್ದೇವೆ. ನಾಡಗೀತೆ ಕೇಳಿದರೆ ಮನಸ್ಸು ರೋಮಾಂಚನವಾಗುತ್ತದೆ, ಅಂತಹ ಕನ್ನಡ ಪುಣ್ಯಭೂಮಿಯಲ್ಲಿ ಜನಿಸಿದ್ದೇವೆ.
ಸರ್ಕಾರದ ಅಂಗಸಂಸ್ಥೆ ಕ.ರಾ.ರ.ಸಾ.ನಿ.ಸಂಸ್ಥೆಯಲ್ಲಿ ಸಂಪೂರ್ಣ ಕನ್ನಡ ಬಳಕೆ ಮಾಡುತ್ತಿದ್ದೇವೆ. ನಗರ ಪ್ರದೇಶದಲ್ಲಿ ಕನ್ನಡ ಮೊಳಗಿಸಲು ಕಷ್ಟ ಪಡುವ ಪರಿಸ್ಥಿತಿ ಬಂದಿದೆ.
ಅನ್ಯ ಭಾಷಿಕರಿಗೆ ಬಂದವರನ್ನ ಕನ್ನಡ ಕಲಿಸುವ ಕಾರ್ಯವಾಗಬೇಕು, ಇಲ್ವದೇ ಹೋದರೆ ಕನ್ನಡಿಗರು ಅಲ್ಪಸಂಖ್ಯಾತರಾಗುವ ಸಂಭವವಿದೆ. ಕನ್ನಡ ನಾಡು, ನುಡಿ, ಜಲದ ಸಮಸ್ಯೆಗಳು ಬಂದಾಗ ಕನ್ನಡ ಪರ ಸಂಘಟನೆಗಳು ಅವಿರತ ಹೋರಾಟ ಮಾಡುತ್ತಿದೆ ಎಂದು ಹೇಳಿದರು.
*ಸಾರಿಗೆ ಸಂಸ್ಥೆಯ ಅಧಿಕಾರಿ, ಸಿಬ್ಬಂದಿಗಳ ಮಕ್ಕಳು ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿ ಅತಿಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು*