ಜೈನ್ ವಿಶ್ವವಿದ್ಯಾಲಯದ (Jain university) ಉಪಕುಲಪತಿ ಡಾ. ರಾಜ್ ಸಿಂಗ್ ಅವರ
ಉದ್ಘಾಟನಾ ನುಡಿ ಅಲ್ಲಿ ಬನಾರಸ್ ಲಿಟ್ ಫೆಸ್ಟ್ ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಪರಂಪರೆಯನ್ನು ಆಚರಿಸುವ ವೇದಿಕೆಯಾಗಿದೆ. ಇದು ಚಿಂತಕರು, ಬರಹಗಾರರು, ಕಲಾವಿದರು ಮತ್ತು ಪ್ರದರ್ಶಕರನ್ನು ಅರ್ಥಪೂರ್ಣ ಸಂಭಾಷಣೆ ಮತ್ತು ಕಲಾತ್ಮಕ ಅಭಿವ್ಯಕ್ತಿಯಲ್ಲಿ ತೊಡಗಿಸಿಕೊಳ್ಳಲು, ಸಾಂಸ್ಕೃತಿಕ ವಿನಿಮಯ ಮತ್ತು ಸಹಯೋಗವನ್ನು ಉತ್ತೇಜಿಸುತ್ತದೆ. ವಿಶ್ವ ಕುಟುಂಬಿಯಾಗುವಲ್ಲಿ ಸದೃಢ ಭಾಷಾ ಬಾಂಧವ್ಯ ಅಗತ್ಯ, ಎಂದು ತಿಳಿಸಿದರು.
ಮಾರ್ಚ್ ಮಾಹೆಯಲ್ಲಿ ನಡೆಯುವ ಬಹು ನಿರೀಕ್ಷಿತ ಪ್ರತಿಷ್ಠಿತ ಬನಾರಸ್ ಲಿಟ್ ಫೆಸ್ಟ್ , ಬೆಂಗಳೂರಿನ ಜೈನ್ (ಡೀಮ್ಡ್-ಟು-ಬಿ ಯೂನಿವರ್ಸಿಟಿ) ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಸಿದ್ಧ ವಿದ್ವಾಂಸರು, ಲೇಖಕರು, ಕಲಾವಿದರು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಬನಾರಸ್ ಲಿಟ್ ಫೆಸ್ಟ್ ಆಯೋಜಕರಾದ ಬ್ರಿಜೇಶ್ ಸಿಂಗ್ ರವರನ್ನು ಮೈಸೂರಿನ ಸಾಂಪ್ರದಾಯಿಕ ಪೇಟೆ ತೊಡಿಸಿ ಸನ್ಮಾನಿಸಲಾಯಿತು ಎಂದು ಭಾಷಾ ನಿಕಾಯದ ಡೀನ್ ಪ್ರೊ. ರಜನಿ , ಜೈರಾಮ್ ತಿಳಿಸಿದರು. ಕರ್ನಾಟಕ ಶೈಲಿಯಲ್ಲಿ ದೀಪ ಬೆಳಗಿಸುವ ಮೂಲಕ ಆರಂಭವಾಗಿ ನಿಶಾಂತ್ ಜೀ ಅವರ ಭಾವಪೂರ್ಣ ಭಜನೆ ನಡೆಯಿತು.
ಜೈನ್ ವಿವಿಯ ಪ್ರಾಧ್ಯಾಪಕರುಗಳಾದ ಪ್ರೊ. ಯಶಸ್ವಿನಿ ಎಂ , ಪ್ರೊ.ವೈ ಎಂ ರಾಜೇಶ್ವರಿ, ಮೇಜರ್ ರೇಖಾ ಸಿನ್ಹ,ಪ್ರೋ. ಶ್ರೀನಿವಾಸಯ್ಯ ಆರ್ ಮೊದಲಾದವರು ಉಪಸ್ಥಿತರಿದ್ದರು.