ಬೆಂಗಳೂರು, ಡಿ, 1; ಅತ್ಯಂತ ಶ್ರಿಮಂತಿಕೆ ಹೊಂದಿರುವ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಕರೆ ನೀಡಿದ್ದಾರೆ.
ರಾಜಾಜಿನಗರದ ಕಾರ್ಮಿಕ ರಾಜ್ಯ ವಿಮಾನ ನಿಗಮ ಮಾದರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಕ್ಕೆ 2500 ವರ್ಷಗಳ ಹಿನ್ನೆಲೆಯಿದೆ. ಅತ್ಯಂತ ತರ್ಕಬದ್ಧವಾದ, ತನ್ನದೇ ಆದ ಲಿಪಿ ಹೊಂದಿರುವ ಅನನ್ಯ ಭಾಷೆ ಕನ್ನಡ ಎಂದರು.
ಆಸ್ಪತ್ರೆಯ ನರ್ಸಿಂಗ್ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿ ವಿಶೇಷ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು.
ಆಸ್ಪತ್ರೆಯ ಡೀನ್ ಡಾ. ಸಂಧ್ಯಾ ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಅಧೀಕ್ಷಕ ಅಶೋಕ್ ಕುಮಾರ್, ಪ್ರಾದೇಶಿಕ ನಿರ್ದೇಶಕ ರೇಣುಕಾ ಪ್ರಸಾದ್, ಕನ್ನಡ ರಾಜ್ಯೋತ್ಸವ ಸಮಿತಿಯ ಪ್ರಭಾರ ಅಧ್ಯಕ್ಷ ಸುಧಾಕರ್, ಪದಾಧಿಕಾರಿಗಳಾದ ದೀಪಕ್ ಬಿ. ಆರ್ ,ಮಂಜುನಾಥ್, ಮನರಂಜನಾ ಕೂಟದ ಕಾರ್ಯದರ್ಶಿಯಾದ ಯತೀಶ್ ಉಪಸಿತರಿದ್ದರು.