ದಕ್ಷಿಣಾಯಣ ರಾತ್ರಿಯೂ, ಉತ್ತರಾಯಣ ದೇವತೆಗಳಿಗೆ ಹಗಲು.
ಆದರೆ ಧನುರ್ಮಾಸವು ದೇವತೆಗಳಿಗೆ ಹಗಲೂ - ರಾತ್ರಿಯೂ ಆಗಿದೆ.
ಆದ್ದರಿಂದ ಸರ್ವ ಪ್ರಯತ್ನದಿಂದಲೇ ಧನುರ್ಮಾಸದಲ್ಲಿ ಪ್ರತಿದಿನವೂ ಉಷಃ ಕಾಲದಲ್ಲೆದ್ದು, ಸ್ನಾದಿಗಳನ್ನು ಮಾಡಿ ಷೋಡಶೋಪಚಾರಗಳಿಂದ ಶ್ರೀ ಹರಿ ಪೂಜೆ ಮಾಡಿ ಮುದ್ಗಾನ್ನ ನೈವೇದ್ಯ ಮಾಡಬೇಕು.
" ಆದಿತ್ಯ ಪುರಾಣದಲ್ಲಿ "...
ಸೂರ್ಯನು ಧನು ರಾಶಿಯಲ್ಲಿದ್ದಾಗ ಉಷಃ ಕಾಲದಲ್ಲಿ ಸ್ನಾನ ಮಾಡಬೇಕು.
ಸೂರ್ಯೋದಯದ ಮೊದಲು ಜಗನ್ನಾಥನಾದ ಶ್ರೀ ಹರಿಯನ್ನು ಮುದ್ಗಾನ್ನ ನೈವೇದ್ಯದೊಂದಿಗೆ ಪೂಜಿಸಬೇಕು.
ಅನಂತರ ಪ್ರಾತಃ ಕಾಲದಲ್ಲಿ ಸೂರ್ಯಾರ್ಘ್ಯವನ್ನು ಕೊಟ್ಟು ಗಾಯತ್ರೀ ಜಪ ಮಾಡಿ ಸೂರ್ಯೋಪಸ್ಥಾನವನ್ನು ಮಾಡಬೇಕು.
" ಸ್ಮೃತ್ಯರ್ಥ ಸಾರದಲ್ಲಿ.. "
ಧನುರ್ಮಾಸದ ಕೊನೆಯ ಯಾಮದಲ್ಲಿ ( ಬೆಳಗಿನ ಜಾವ 4.30 - 6.00 ಘಂಟೆಯ ಒಳಗೆ ) ಶ್ರೀ ಹರಿಯನ್ನು ಪೂಜಿಸಿ ಮುದ್ಗಾನ್ನ ನೈವೇದ್ಯ ಮಾಡಿ ಅನಂತರ ಸಂಧ್ಯಾವಂದನೆ ಮಾಡಬೇಕು.
ಹೀಗೆ ಮಾಡಿದರೂ ಕರ್ಮ ಲೋಪವಾಗುವುದಿಲ್ಲ.
" ಪಂಚರಾತ್ರ ಸಂಹಿತೆಯಲ್ಲಿ.. "
ಸೂರ್ಯನು ಧನು ರಾಶಿಯಲ್ಲಿದ್ದಾಗ ಬೆಳಗಿನ ಜಾವದಲ್ಲಿ ಶ್ರೀ ಹರಿಗೆ ಮುದ್ಗಾನ್ನ ಸಮರ್ಪಿಸಿ ಪೂಜೆ ಮಾಡಿದರೆ ಒಂದು ದಿನದ ಪೂಜೆಯಿಂದ 1000ವರ್ಷದ ಪೂಜೆಯ ಫಲವು ಬರುತ್ತದೆ.
" ಪಾರಮೇಷ್ಟ್ಯ ಸಂಹಿತೆಯಲ್ಲಿ... "
ಸೂರ್ಯನು ಧನು ರಾಶಿಯಲ್ಲಿದ್ದಾಗ ಬೆಳಗಿನ ಜಾವ ಮಹಾಭಿಷೇಕ ವಿಧಾನದಿಂದಲೂ, ವೇದ ಪಾರಾಯಣಾದಿಗಳಿಂದಲೂ ಶ್ರೀ ಹರಿಯನ್ನು ಪೂಜಿಸಬೇಕು.
" ಮತ್ಸ್ಯ ಪುರಾಣದ ದಾನಖಂಡದಲ್ಲಿ.. "
ಎಲೈ ಮಹಾ ಪುರುಷ ಶ್ರೇಷ್ಠನೇ!
ಧನುರ್ಮಾಸದ ಉಷಃ ಕಾಲದಲ್ಲಿ ಶ್ರೀ ಹರಿಯ ಪೂಜೆ, ಹುಗ್ಗಿ ಸಮರ್ಪಣೆ, ಬ್ರಾಹ್ಮಣ ಭೋಜನ, ನಾನಾ ದಾನಗಳು ಮಾಡಿದವನು ತನ್ನ ಪಿತೃಗಳೊಂದಿಗೆ ಶಾಶ್ವತವಾಗಿ ವಿಷ್ಣು ಲೋಕವನ್ನು ಹೊಂದುತ್ತಾನೆ ಎಂದು ಹೇಳಿದೆ.
" ಸಂಗ್ರಹವೆಂಬ ಧರ್ಮ ಶಾಸ್ತ್ರದಲ್ಲಿ "
ಸೂರ್ಯನು ಧನು ರಾಶಿಗೆ ಬಂದಾಗ ಯಾವ ದ್ವಿಜನು ಪ್ರಾತಃ ಕಾಲದಲ್ಲಿ ಶ್ರೀ ಹರಿಯ ಪೂಜೆಯನ್ನೂ, ಮುದ್ಗಾನ್ನವನ್ನೂ ಸಮರ್ಪಿಸುತ್ತಾನೋ ಸತ್ಯವಾಗಿಯೂ ಅವನು ವೈಕುಂಠವನ್ನೇ ಹೊಂದುತ್ತಾನೆ.
ಧನುರ್ಮಾಸದ ಉಷಃ ಕಾಲದಲ್ಲಿ ಯಾವನು ಶ್ರೀ ಹರಿಯ ಪ್ರೀತಿಗಾಗಿ ಬೆಲ್ಲ ಸಹಿತವಾದ ಹುಗ್ಗಿಯನ್ನು ನೆವೇದನೆ ಮಾಡುತ್ತಾನೋ ಅವನು ಶ್ರೀ ಮಹಾ ವಿಷ್ಣುವಿನ ಸ್ಥಾನವಾದ ವೈಕುಂಠವನ್ನು ಪಡೆಯುತ್ತಾನೆ.
ಧನುರ್ಮಾಸದ ಪೂಜೆ ಅದಕ್ಕೆ ಸಾಧನವಾದ ದ್ರವ್ಯಗಳೂ ಮತ್ತು ಕಾಲ ವಿಶೇಷಗಳನ್ನೂ ತಿಳಿಸುವ ಪ್ರಮಾಣ ವಾಕ್ಯಗಳು ಸ್ಪಷ್ಟ ಪಡಿಸಿವೆ.
ಆದ್ದರಿಂದ ಎಲ್ಲರೂ ಈ ಧನುರ್ಮಾಸದಲ್ಲಿ ಪ್ರಾತಃ ಕಾಲದಲ್ಲೆದ್ದು ಸ್ನಾನಾದಿಗಳನ್ನು ಮಾಡಿ ಶ್ರೀ ಹರಿಗೆ ಭಕ್ತಿಯಿಂದ ಮುದ್ಗಾನ್ನ ( ಹುಗ್ಗಿ ) ವನ್ನು ಸಮರ್ಪಿಸಿ ಪೂಜಿಸಿ ಜಗತ್ ಸ್ವಾಮಿಯಾದ ಶ್ರೀ ಲಕ್ಷ್ಮೀ ನಾರಾಯಣರ ಪರಮಾನುಗ್ರಹಕ್ಕೆ ಪಾತ್ರರಾಗೋಣ....
" ವಿಶೇಷ ವಿಚಾರ "
12ನೇ ಕಕ್ಷಾ ಸಂಪನ್ನರೂ - ಶ್ರೀ ಕೃಷ್ಣ ಪರಮಾತ್ಮನ ವಿಭೂತಿಯಿಂದೊಪ್ಪುವ ಶ್ರೀ ಯಮಧರ್ಮರಾಜರ ಅಂಶ ಸಂಭೂತರಾದ ಶ್ರೀ ಕನಕದಾಸರ ಅಮೃತ ಹಸ್ತಗಳಲ್ಲಿ ಪ್ರತಿಷ್ಠಾಪನೆಗೊಂಡ ಶ್ರೀ ಮುಖ್ಯಪ್ರಾಣದೇವರು.
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ