ಬೆಂಗಳೂರು : ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ಹಾಗೂ ಅನನ್ಯ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ಮಲ್ಲೇಶ್ವರದ 4ನೇ ಮುಖ್ಯರಸ್ತೆಯಲ್ಲಿರುವ ಅನನ್ಯ ಸಭಾಂಗಣದಲ್ಲಿ ಡಿಸೆಂಬರ್ 7 ಮತ್ತು 8 ರಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಡಿಸೆಂಬರ್ 7, ಶನಿವಾರ : ಸಂಜೆ 5-00ಕ್ಕೆ ವಿದ್ವಾನ್ ಸಂಜಯ್ ನಾಗ್ ಅವರಿಂದ "ಶಾಸ್ತ್ರೀಯ ಸಂಗೀತ". ವಾದ್ಯ ಸಹಕಾರ : ವಿದ್ವಾನ್ ಗೋವಿಂದಮಾಧವ (ಪಿಟೀಲು), ವಿದ್ವಾನ್ ವಿಷ್ಣುವರ್ಧನ್ (ಮೃದಂಗ). 7-00 ಗಂಟೆಗೆ : ವಿದುಷಿ ಅದಿತಿ ಪ್ರಹ್ಲಾದ್ ಮತ್ತು ವಿದ್ವಾನ್ ಸಂಜಯ್ ನಾಗ್ ಅವರಿಗೆ "ಅನನ್ಯ - ನಾದಜ್ಯೋತಿ ಕಲಾ ಪ್ರತಿಭಾ ಪುರಸ್ಕಾರ" ಪ್ರಶಸ್ತಿ ಪ್ರದಾನ. ಮುಖ್ಯ ಅತಿಥಿಗಳು : ಪ್ರೊ|| ಎಸ್. ಮುರಳೀಧರನ್ (ಮುಖ್ಯಸ್ಥರು, ಸಂಸ್ಕೃತ ವಿಭಾಗ, ಶೇಷಾದ್ರಿಪುರಂ ಡಿಗ್ರಿ ಕಾಲೇಜು, ಶೇಷಾದ್ರಿಪುರಂ).
ಡಿಸೆಂಬರ್ 8, ಭಾನುವಾರ : ಸಂಜೆ 6-00ಕ್ಕೆ - ವಿದುಷಿ ಅದಿತಿ ಪ್ರಹ್ಲಾದ್ ಅವರಿಂದ "ಶಾಸ್ತ್ರೀಯ ಸಂಗೀತ". ವಾದ್ಯ ಸಹಕಾರ : ವಿದುಷಿ ಹೃಷಿತಾ ಕೇದಗೆ (ಪಿಟೀಲು), ವಿದ್ವಾನ್ ಪೃಥ್ವಿ ಕೃಷ್ಣ (ಮೃದಂಗ).
ಸರ್ವರಿಗೂ ಆತ್ಮೀಯ ಸುಸ್ವಾಗತ.