" ಸಾಕ್ಷಾತ್ ಶ್ರೀ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನನವಾಗಿ ನಡೆದು ಬಂದ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಸಂಸ್ಥಾನದ ಮೂಲ ಪರಂಪರೆ ಹಾಗೂ ಶುದ್ಧವಾದ ಪೀಳಿಗೆ - 1 "

varthajala
0

 " ಸಾಕ್ಷಾತ್ ಶ್ರೀ ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನನವಾಗಿ ನಡೆದು ಬಂದ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ  ಮೂಲ ಸಂಸ್ಥಾನದ ಮೂಲ ಪರಂಪರೆ ಹಾಗೂ ಶುದ್ಧವಾದ ಪೀಳಿಗೆ - 1 "

" ಬೊಮ್ಮನ ಸಂತತಿಯಿದು ಪುಸಿಯಲ್ಲವೋ ಸತ್ಯಾ ಭಜಿಸಿರಿ ನಿತ್ಯಾ " 

" ಹಂಸನಾಮಕ ಪರಮಾತ್ಮನಿಂದ ಅವಿಚ್ಛಿನ್ನವಾಗಿ ನಡೆದು ಬಂದ ಮೂಲ ಪೀಠದ ಪರಿಶುದ್ಧವಾದ ಶ್ರೀ ರಾಯರ ಮಠದ ಪೀಳಿಗೆ - ಒಂದು ಪಕ್ಷಿ ನೋಟ " 

" ಶ್ರೀ ವಾದಿರಾಜ ಗುರುಸಾರ್ವಭೌಮರು " ಏಕಾದಶೀ ನಿರ್ಣಯದಲ್ಲಿ " ...... 

ಲಕ್ಷ್ಮೀನಾರಾಯಣಮುನೇ 

ವ್ಯಾಸತೀರ್ಥಾರ್ಯಯೋಗಿನಃ ।

ವಿಬುಧೇಂದ್ರಮುನಿರ್ವಂಶೋ 

ಜಯತೀರ್ಥಾದಿರೇವ ಹಿ ।। 


ಶ್ರೀ ಹಂಸನಾಮಕ ಪರಮಾತ್ಮ 

ಶ್ರೀ ಚತುರ್ಮುಖ ಬ್ರಹ್ಮದೇವರು 

। 

ಶ್ರೀ ಸನಕಾದಿಗಳು 

( ಬ್ರಹ್ಮ ಮಾನಸ ಪುತ್ರರು )

ಶ್ರೀ ದುರ್ವಾಸತೀರ್ಥರು 

ಶ್ರೀ ಜ್ಞಾನನಿಧಿತೀರ್ಥರು ( ಕ್ರಿ ಶ 838 - 888 )

 ।

 ಶ್ರೀ ಇಂದ್ರವಾಹನತೀರ್ಥರು ( ಕ್ರಿ ಶ 888 - 938 )

 ।

 ಶ್ರೀ ಕೈವಲ್ಯತೀರ್ಥರು ( ಕ್ರಿ ಶ 938 - 988 )

 ।

ಶ್ರೀ ಜ್ಞಾನೇಶತೀರ್ಥರು ( ಕ್ರಿ ಶ 988 - 1038 )

|

ಶ್ರೀ ಪರತೀರ್ಥರು ( ಕ್ರಿ ಶ 1038 - 1088 )

ಶ್ರೀ ಸತ್ಯಪ್ರಜ್ಞತೀರ್ಥರು ( ಕ್ರಿ ಶ 1088 - 1138 )

|

ಶ್ರೀ ಪ್ರಾಜ್ಞತೀರ್ಥರು ( ಕ್ರಿ ಶ 1138 - 1188 )

|

ಶ್ರೀ ಅಚ್ಯುತಪ್ರೇಕ್ಷಾಚಾರ್ಯರು ( ಕ್ರಿ ಶ 1188 - 1238 ) 

( ಶ್ರೀ ಭೀಮನಕಟ್ಟೆ ಮಠ )


ಈ ವಿಷಯವನ್ನು ಮರುದಂಶ ಶ್ರೀ ಪ್ರಾಣೇಶದಾಸರು ಖಚಿತ ಪಡಿಸಿದ್ದಾರೆ. 


( ಶ್ರೀ ಚತುರ್ಮುಖ ಬ್ರಹ್ಮದೆವರಿಂದ ಶ್ರೀಮದಾಚಾರ್ಯರ ವರೆಗೆ ) 

ನಾಭಿ ಸಂಭವ । ಸಂತ ।

ತೀ ಭಕ್ತಿಂದೊರ್ಣಿಸೂವೆ ।

ಈ ಭವ ಶರಧೀ ತ್ವರದಿಂದ ಕೋಲೆ ।

ಈ ಭವ ಶರಧೀ ತ್ವರದಿಂದ 

ಕೂಡಿಸಲು ಕೋಲೆ ।। ಪಲ್ಲವಿ ।। 

ವಿಧಿಜಾತ ಸನಕಾದಿ 

ತದನಂತರಾ ದೂರ್ವಾಸ ।

ಅದರಹಿಂದೆ ಜ್ಞಾನ -

ನಿಧಿಗಳ ಕೋಲೆ । 

ಅದರಹಿಂದೆ ಜ್ಞಾನ 

ನಿಧಿಯೂ ಗರುಡವಾಹನ ।

ಬುಧರೂ ಕೈವಲ್ಯ -

ತೀರ್ಥರೂ ಕೋಲೆ ।। ಚರಣ ।। 

ಜ್ಞಾನೇಶ ಪರತೀರ್ಥ 

ಮೌನೀಶ ಸತ್ಯ ಪ್ರಜ್ಞಾ ।

ದೀನ ವತ್ಸಲರೂ 

ಪ್ರಾಜ್ಞತೀರ್ಥಾ ಕೋಲೆ ।

ದೀನ ವತ್ಸಲರೂ ಪ್ರಾಜ್ಞಾ 

ಸೂತಾ ಪೋರಾಜ ।

ಜ್ಞಾನಿ ಅಚ್ಯುತಪ್ರೇಕ್ಷರೂ 

ಕೋಲೆ ।। ಚರಣ ।।

ಕ್ಷಿತಿಯೊಳಗೆ ದುರ್ಮತ 

ವತಿಶಯವಾದವೆಂದು ।

ಸ್ತುತಿಸಲು ಸುರರು 

ಮೊರೆ ಕೇಳಿ ಕೋಲೆ ।

ಸ್ತುತಿಸಲು ಸುರರು ಮೊರೆ 

ಕೇಳಿ ಪಾಲಿಸಿದಾ ।

ಯತಿ ಶಿರೋಮಣಿಯ 

ಬಲಗೊಂಬೆ ಕೋಲೆ ।। ಚರಣ ।। 


ಹರಿ ಸರ್ವೋತ್ತಮನಲ್ಲ 

ಬರಿದೆ ವಿಶ್ವವೆಲ್ಲ ।

ಎರಡಿಲ್ಲವೆಂದು 

ಪೇಳೋರು ಕೊಲೆ ।

ಎರಡಿಲ್ಲವೆಂದು ಪೇಳ್ವಾ 

ಮಾಯ್ಗಳ ಗೆದ್ದಾ ।

ಗುರು ಮಧ್ವ ಮುನಿಗೆ ನಾ 

ಶರಣೆಂಬೆ ಕೋಲೆ ।। ಚರಣ ।। 


ಮೂರು ದೇವರು ಸಮ 

ಆರೂ ಮತಾಗಳೆಂಬ ।

ಪೋರಾ ವಾದಿಗಳಾ 

ನಯದಿಂದ ಸೋಲಿಸಿದ ।

ಪೋರಾ ವಾದಿಗಳಾ 

ನಯದಿಂದ ಸೋಲಿಸಿದ ।

ಭಾರತೀ ಪತಿಯ 

ಬಲಗೊಬೆ ಕೋಲೆ ।। ಚರಣ ।। 


ಒಂದು ಇಲ್ಲಾವೋ ಎಂಬೋ 

ಮಂದಮತಿಯ ಮತ ।

ಒಂದೇ ಮಾತಿನಲ್ಲಿ 

ಗೆಲಿದಾರು ಕೋಲೆ ।

ಒಂದೇ ಮಾತಿನಲ್ಲಿ 

ಗೆಲಿದಂಥಾ । ಶ್ರೀಮದಾ ।

ನಂದ ತೀರ್ಥರನಾ 

ಬಲಗೊಂಬೆ ಕೋಲೆ ।। ಚರಣ ।। 


ನಾನಾ ದೇವರು ಎಂಬಾ

 ಹೀನ ಮತಗಳೆಲ್ಲ ।

ಜಾಣೀಕೆಯಲ್ಲಿ 

ಗೆಲಿದಾರು ಕೋಲೆ ।

ಜಾಣೀಕೆಯಲ್ಲಿ 

ಗೆಲಿದಂಥಾ ಕುಲಗುರು ।

ಪ್ರಾಣದೇವರಿಗೆ ಶರಣೆಂಬೆ 

ಕೋಲೆ ।। ಚರಣ ।। 


ಇಲ್ಲಿ ಮಾತ್ರ ಭೇದ 

ಅಲ್ಲಿ ಒಂದೆಂಬುವ ।

ಖುಲ್ಲಾರನೆಲ್ಲ 

ಮುರಿದಾರು ಕೋಲೆ । 

ಖುಲ್ಲಾರನೆಲ್ಲ ಮುರಿದ 

ಸದ್ಗುರು । ಪಾದ ।

ಪಲ್ಲವಗಳಿಗೆ ಶರಣೆಂಬೆ 

ಕೋಲೆ ।। ಚರಣ ।। 


ತನುವೆ ನಾನೆಂಬುವ 

ಭಣಗು ಮತಗಳೆಲ್ಲ ।

ವಿನಯದಿಂದಲಿ 

ಗೆಲಿದರು ಕೋಲೆ ।

ವಿನಯದಿಂದಲಿ 

ಗೆಲಿದಂಥಾ । ಶ್ರೀಮಧ್ವ ।

ಮುನಿಯ ಪಾದಗಳ 

ಸ್ಮರಿಸೂವೆ ಕೋಲೆ ।। ಚರಣ ।। 



ಇಪ್ಪತ್ತೊಂದು ಕುಭಾಷ್ಯ 

ತಪ್ಪಾನೆ ಸೋಲಿಸಿದ ।

ಸರ್ಪಶಯನನ 

ಒಲಿಸೀದ ಕೋಲೆ । 

ಸರ್ಪಶಯನನ 

ಒಲಿಸೀದ ಗುರುಗಳ ।

ತಪ್ಪದೆ ನೆನೆವೇನನ-

ನುದಿನ ಕೋಲೆ ।। ಚರಣ ।। 


ಈತನ ಮಹಿಮೀಯ 

ಭೂತನಾತನರಿಯ ।

ನಾ ತುತಿಸುವೆನೇ 

ಕಡೆ ಗಂಡು ಕೋಲೆ ।

ನಾ ತುತಿಸುವೆನೇ ಕಡೆ 

ಗಂಡು ಮರುತನ ।

ಮಾತು ಮಾತಿಗೆ 

ಸ್ಮರಿಸಿರೋ ಕೊಲೆ ।। ಚರಣ ।। 


ಸಾರುವ ಕರ್ಮವ ಮಾಡೆ 

ಮರುತಾಂತರ್ಗತ ನೆಂದು ।

ಹರಿಗರ್ಪಿಸದಲೆ 

ಮುದದಿಂದ ಕೋಲೆ ।

ಹರಿಗರ್ಪಿಸದಲೆ 

ಮುದದಿಂದಲಿರುವಾರು ।

ನಿರಯ ಭಾಗಿಗಳು 

ತಿಳಿವುದು ಕೋಲೆ ।। ಚರಣ ।। 


ಈ ನಮ್ಮ ಗುರು 

ಮೆಚ್ಚಾದೇನೂ ಸಾಧನ ಮಾಡಿ ।

ಪ್ರಾಣೇಶವಿಠ್ಠಲ-

ನೊಲಿಸೋರಾ ಕೋಲೆ ।

ಪ್ರಾಣೇಶವಿಠ್ಠಲ-

ನೊಲಿಸವಂಥ ಜಾಣರ ।

ನಾನೆಲ್ಲಿ ಕಾಣೆ 

ಜಗದೊಳು ಕೋಲೆ ।। ಚರಣ ।। 

ಆಚಾರ್ಯ ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ 

ಮುಂದುವರೆಯುವುದು.....


ಜಾಹೀರಾತು...



Post a Comment

0Comments

Post a Comment (0)