*1992ಮತ್ತು 2024ರ ಅಯೋಧ್ಯೆ ಶ್ರೀರಾಮಜನ್ಮಭೂಮಿ ಹೋರಾಟ, ನಿರ್ಮಾಣ ವೀಕ್ಷಣೆ ಮಾಡಿದ ಪುಣ್ಯ-ರಾಘವೇಂದ್ರರಾವ್*
ಅಯೋಧ್ಯೆ: ಹಿಂದೂಗಳಿಗೆ ಪವಿತ್ರ ಕ್ಷೇತ್ರ, ನಮ್ಮ ಪ್ರಾತ ಸ್ಮರಣೀಯ ತೀರ್ಥಕ್ಷೇತ್ರ ಅಯೋಧ್ಯೆಯ ಪುಣ್ಯ ಭೂಮಿಯಲ್ಲಿ, 32 ವರ್ಷಗಳ ಹಿಂದೆ
1992 ರಲ್ಲಿ ಬೆಂಗಳೂರಿನ ರಾಜಾಜಿನಗರದಿಂದ ನಗರಪಾಲಿಕೆ ಸದಸ್ಯರು, ಮಾಜಿ ಶಿಕ್ಷಣ ಸಚಿವರು, ಹಾಲಿ ಶಾಸಕರಾದ ಎಸ್ ಸುರೇಶ್ ಕುಮಾರ್ ರವರ ನೇತೃತ್ವದಲ್ಲಿ, ಬೆಂಗಳೂರುನಗರ ಕೇಂದ್ರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರರಾವ್ ,ಶ್ರೀರಾಮ ಪುರದ ಅಧ್ಯಕ್ಷರಾದ ಸಿ ಆರ್ ಸ್ವಾಮಿ, ನಮ್ಮ ಹಿರಿಯ ಕಾರ್ಯಕರ್ತರಾದ ಪ್ರಭಾಕರ್, ಶಾಸಕರ ಹಿಂದಿನ ಆಪ್ತ ಸಹಾಯಕ ಪುರುಷೋತ್ತಮ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ದ್ವಾರಕಿ, ಕಾಂತಾ, ಕಿರ್ಲೋಸ್ಕರ್ ಹರೀಶ್, ರಮಾನಂದ್, ಕರಿ ಗೌಡರು ಅಯೋಧ್ಯೆಗೆ ತೆರಳಿದ್ದರು.
ಇದೇ ಸಂದರ್ಭದಲ್ಲಿ *ರಾಘವೇಂದ್ರರಾವ್* ರವರು ಮಾತನಾಡಿ ವಾಜಪೇಯಿ, ಅಡ್ವಾಣಿ, ಪೇಜಾವರ ಶ್ರೀ ಹಿಂದೂ ಮಹಾಸಭಾ ಎಲ್ಲರು ಕರೆ ನೀಡಿದ 1992ರಲ್ಲಿ ಬಾಬರಿ ಮಸೀದಿ ವಿರುದ್ದ ಹೋರಾಟಕ್ಕೆ ತೆರಳಲಾಯಿತು. ಅಂದು ಕರಸೇವಕರ ಹುಮಸ್ಸು ನೋಡುವ ಕ್ಷಣಗಳ ನನ್ನದಾಯಿತು.
ಅಯೋಧ್ಯೆಯ ಪುಣ್ಯ ಭೂಮಿಯಲ್ಲಿ ಲಕ್ಷಾಂತರ ರಾಷ್ಟ್ರ ಭಕ್ತ ಕರಸೇವಕರು, ಜಮಾಯಿಸಿ ಹಿಂದೂ ಸಮಾಜಕ್ಕೆ ದಾಸ್ಯದ ನೆನಪಾಗಿದ್ದ ಕಟ್ಟಡವನ್ನು ಕೆಡವಿದನ್ನು ಇಂದು ಸಹ ಮರೆಯಲಾಗದ ಅನುಭವ.
ಡಿಸೆಂಬರ್ 6 ಹಿಂದೂ ಸಮಾಜಕ್ಕೆ ಶೌರ್ಯ ದಿನ, ಅದೇ ದಿನ ರಾಮನ ದರ್ಶನ ಮಾಡಬೇಕು ಎಂಬ ನನ್ನ ಸಂಕಲ್ಪ ಇಂದು ಈಡೇರಿತು. ಇಂದು ದರ್ಶನ ಮಾಡುತ್ತಿದ್ದಂತೆ ಕಣ್ಣುಗಳಲ್ಲಿ ನೀರು ತುಂಬಿ ಹೋಗಿತ್ತು. ಲಕ್ಷಾಂತರ ರಾಷ್ಟ್ರ ಭಕ್ತರ ತ್ಯಾಗ, ಬಲಿದಾನ ಈ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಕಾರಣ ಎಂದರೆ ತಪ್ಪಾಗಲಾರದು.
ಜೀವನದಲ್ಲಿ ಕೆಲವೇ ಕೆಲವು ಜನರಿಗೆ ಈ ರೀತಿ ಅವಕಾಶ ದೊರೆಯುತ್ತದೆ. ಇಂದು ಆ ಅವಕಾಶ ನನ್ನದಾಯಿತು.
ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನಿಗೆ ನನ್ನ ನಮನಗಳು ಎಂದು ಹೇಳಿದರು.