" ದಿನಾಂಕ: 14.12.2024 ಶನಿವಾರ - ಶ್ರೀ ದತ್ತ ಜಯಂತೀ "

varthajala
0

ಶ್ರೀಮದಾಚಾರ್ಯ ವಿರಚಿತ " ತಂತ್ರಸಾರ " ದಲ್ಲಿ ಶ್ರೀ ಕಪಿಲ ಮತ್ತು ಶ್ರೀ ದತ್ತಾತ್ರೇಯ ಮಂತ್ರ..... 

ಸ್ವಯಮುದ್ಧೇಶವಾನ್ ಪೂರ್ವವರ್ಣ 

ಪೂರ್ವೋ ನಮೋ ಯುತಃ ।

ಸ ತಾರೋsಷ್ಟಾಕ್ಷರಶ್ಚೈವ 

ನವಾರ್ಣಶ್ಚ ಮನೂ ಸ್ಮೃತೌ ।।

ಓಂಕಾರ ಮತ್ತು ತನ್ನ ಮೊದಲನೆ ಅಕ್ಷರಗಳಿಂದ ಕೂಡಿದ, ಚತುರ್ಥಂತ್ಯಗಳಾದ " ಕಪಿಲ " ದತ್ತಾತ್ರೇಯ " ಶಬ್ದಗಳು. ಕೊನೆಯಲ್ಲಿ " ನಮಃ " ಶಬ್ದ ಇವು " ಕಪಿಲಾಷ್ಟಾಕ್ಷರ " ಮತ್ತು ದತ್ತಾತ್ರೇಯ ನವಾಕ್ಷರಗಳು. 


" ಮಂತ್ರಾಕಾರ "

ಓಂ ಕಂ ಕಪಿಲಾಯ ನಮಃ 

ಓಂ ದಂ ದತ್ತಾತ್ರೇಯಾಯ ನಮಃ 

ಅಧೃಶ್ಯತಾ ಜ್ಞಾನಮೋಕ್ಷಪ್ರದೌ 

ಭಕ್ತೇಷ್ಟಿಮೌ ಸದಾ ।।

ಈ ಎರಡೂ ಮಂತ್ರಗಳು ಪರಾಭವವಿಲ್ಲದ ಜೀವನವನ್ನೂ, ಜಣ್ಣನವನ್ನೂ ಮತ್ತೂ ಸಂಸಾರದಿಂದ ಬಿಡುಗಡೆಯನ್ನು ಕೊಡುವಂತಾಹುವವು. 

" ಋಷ್ಯಾದಿಗಳು "

ಅಸ್ಯ ಶ್ರೀ ಕಪಿಲ ಮಂತ್ರಸ್ಯ 

ಬ್ರಹ್ಮಾಋಷಿ: ।

ಪ್ರಜಾಪತ್ಯಾ ಗಾಯತ್ರೀ 

ಯಜುಷೀ ಅನುಷ್ಟಪ್ ಛಂದಃ ।

ಶ್ರೀ ಕಪಿಲೋ ದೇವತಾ ।।


ಅಸ್ಯ ಶ್ರೀ ದತ್ತಾತ್ರೇಯ

ಮಂತ್ರಸ್ಯ ಬ್ರಹ್ಮಾಋಷಿ: ।

ಯಜುಷೀ ಅನುಷ್ಟಪ್ ಛಂದಃ ।

ಶ್ರೀ ದತ್ತಾತ್ರೇಯ ದೇವತಾ ।। 

" ಧ್ಯಾನ ಮಂತ್ರ "

ಪ್ರೋದ್ಯದ್ದಿವಾಕರ - ಸಮಾನ - ತನುಂ ಸಹಸ್ರಾಮ್ - ಸೂರ್ಯೋರು - ದೀಧಿತಿಭಿರಾಪ್ತ - ಸಮಸ್ತ ಲೋಕಮ್ । ಜ್ಞಾನಾಭಯಾಂಕಿತ ಕರಂ ಕಪಿಲಂ ಚ ದತ್ತಂ 

ಧ್ಯಾಯೇದಾಜಾದಿ ಸಮಿತಿಂ ಪ್ರತಿಬೋಧಯಂತಮ್ ।।

ಉದಿಸುವ ಸೂರ್ಯನಂತೆ ಹೊಂಬಣ್ಣದ ಶರೀರವುಳ್ಳ - 

ಸಾವಿರಾರು ಸೂರ್ಯರಿಗಿಂತಲೂ ಅಧಿಕವಾದ ಕಿರಣಗಳ ಕಾಂತಿಯಿಂದ ಎಲ್ಲ ಲೋಕಗಳಲ್ಲಿ ತುಂಬಿರುವ - ಬಲಗೈಯಲ್ಲಿ ಜ್ಞಾನಮುದ್ರೆ - 

ಎಡಗೈಲ್ಲಿ ಅಭಯ ಮುದ್ರೆಯನ್ನು ಧರಿಸಿರುವ - 

ಬ್ರಹ್ಮಾದಿ ದೇವತೆಗಳ ಸಮೂಹಕ್ಕೆ ತತ್ತ್ವವನ್ನು ಬೋಧಿಸುತ್ತಿರುವ ಶ್ರೀ ಕಪಿಲನನ್ನೂ - ಶ್ರೀ ದತ್ತಾತ್ರೇಯನನ್ನೂ ಧ್ಯಾನಿಸಬೇಕು!

ಶ್ರೀ ಕಪಿಲ ರೂಪದ ಧ್ಯಾನದಲ್ಲಿ " ದತ್ತ " ಪದ ( ದದಾತಿ ಇತಿ ದತ್ತ ) ಅಭೀಷ್ಟಪ್ರದ ಎಂಬ ಅರ್ಥದಲ್ಲಿ ಯೋಗಕ; " ದತ್ತ " ರೂಪದ ಧ್ಯಾನದಲ್ಲಿ.. 

" ಕಪಿಲ " ಪದ - 

" ಕಂ = ಸುಖಂ ( ಪಿಬತಿ ಇತಿ ಕಪಿ: )ಲಾತಿ = ಭಕ್ತಾನ್ ಸ್ವೀಕರೋತಿ ಲಃ - ಸುಖಭೋಕ್ತಾ - ಭಕ್ತಾನುಗ್ರಾಹಕ " ಎಂದರ್ಥ. 

ವಿಶೇಷ ವಿಚಾರ..... 

ಮೂರು ಮುಖ, ನಾಲ್ಕು ನಾಯಿಗಳೂ, ಒಂದು ಹಸು ಇರುವ ದತ್ತಾತ್ರೇಯ ಶ್ರೀ ಹರಿಯ ಅವತಾರ ಅಲ್ಲ!

ಇಲ್ಲಿರುವ ರೂಪವೇ ಸಾಕ್ಷಾತ್ ಶ್ರೀ ದತ್ತಾತ್ರೇಯ ನಾಮಕ ಶ್ರೀ ಹರಿ!

ಆಚಾರ್ಯ ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ





Post a Comment

0Comments

Post a Comment (0)