ಮೋಕ್ಷಪ್ರದನಾದ ಶ್ರೀ ಮುಕುಂದ ರೂಪಿ ಶ್ರೀ ಹರಿಯಲ್ಲಿ ಮಾಡಿದ ಭಕ್ತಿಯೇ ಮುಕ್ತಿಗೆ ಕಾರಣ. ಶ್ರೀ ಮುಕುಂದನಲ್ಲಿ ಮಾಡುವ ಭಕ್ತಿಯಾದರೋ ವಿಶ್ವಗುರುಗಳೂ, ಜೀವೋತ್ತಮರೂ ಆದ ಶ್ರೀ ವಾಯುದೇವರಲ್ಲಿ ಮಾಡಿದ ಭಕ್ತಿಯಿಂದ ಉತ್ಪಾದಿತವಾಗಿರಬೇಕು. ಹರಿಭಕ್ತಿಗೆ ಗುರುಭಕ್ತಿಯಿಂದ ಜನ್ಯತ್ವವಾದರೋ...
ಗುರುದ್ವಾರಾ ಪ್ರಸಾದಕೃದಹಂ ।
ಯಸ್ಯ ದೇವೇಪರಾ ಭಕ್ತಿ-
ರ್ಯಥಾದೇವೇ ತಥಾ ಗುರೌ ।
ಅಗಮ್ಯತ್ವಾದ್ಧರಿಸ್ತಸ್ಮಿನ್ನಾ-
ವಿಷ್ಟೋಮುಕ್ತಿದೋ ಭವೇತ್ ।
ಇತ್ಯಾದಿ ಪ್ರಮಾಣಗಳಿಂದ ಸಿದ್ಧವಾಗಿದೆ. ಶ್ರೀ ಹರಿ ವಾಯು ಗುರುಗಳ ಪ್ರಮಾನುಗ್ರದಿಂದ ಅಂಥಾ ದೇವತೆಯನ್ನು ಸ್ತುತಿಸುವ ಚಿಕ್ಕ ಪ್ರಯತ್ನ ಇಲ್ಲಿದೆ.
ರಚನೆ :
ಆಚಾರ್ಯ ನಾಗರಾಜು ಹಾವೇರಿ
( ಬಾಲ ಭಾಷೆಯಲ್ಲಿ ) ...
ರಾಗ : ಹಂಸಾನಂದೀ ತಾಳ : ಆದಿ
ವಾಯುನಂದನ ಹನುಮ
ಭೀಮ ಮಧ್ವ ಗುರೋ ।
ವಾಯುಜಾತ ಮಧ್ವ ಮತ
ಸಂಸ್ಥಾಪಕ ಗುರೋ ।। ಪಲ್ಲವಿ ।।
ಅಂಬುಜಾರಿಧರ ವಂದ್ಯನೇ ।
ಅಂಬುಜ ಸಂಭವ ನೀನಯ್ಯಾ ।। ಚರಣ ।।
ಅಂಚಿವಾಹನ ಮುಖ್ಯಪ್ರಾಣ ಸಲಹೋ ।
ಅಂಜನಾಸುತ ಹನುಮಯ್ಯಾ ।। ಚರಣ ।।
ಭಾವಿ ಅಜನೇ ಮಧ್ವ ಗುರುವೇ ।
ಭಾವಿಸಮೀರ ವಾದಿರಾಜ ಕರುಣಿಸೋ ।। ಚರಣ ।।
ಪ್ರಾಣಪ್ರಭ ಪ್ರಾಣದೇವ ।
ಪ್ರಾಣಸುತ ಪ್ರಾಜ್ಞ ಪ್ರಾಣ ।। ಚರಣ ।।
ಪ್ರಾಣ ಪಂಚಕ ರೂಪ ಹನುಮಾ ।
ಪ್ರಾಣ ವಾಯುಗಳೂ ನೀನೇನಯ್ಯಾ ।। ಚರಣ ।।
ವಾಯ್ವಾವೇಶಯುತ ಪ್ರಹ್ಲಾದರಾಯಾ ।
ವಾಯುನಂದನ ಭೀಮನ ಸೇವಿಪ ಬಾಹ್ಲೀಕರಾಯ ।। ಚರಣ ।।
ವ್ಯಾಸ ಮುನಿ ಪೂಜಿತ ಮಾರುತಿರಾಯಾ ।
ಶ್ರೀಶ ಮೂಲರಾಮಾರ್ಚಕ ರಾಘವೇಂದ್ರ ಪ್ರಿಯಾ ।। ಚರಣ ।।
" ಕೃತಿಯ ವಿಮರ್ಶೆ - ಅರ್ಥ ವಿವರಣೆ "
ವಾಯುನಂದನ = ವಾಯುಪುತ್ರ ( ಹನುಮ, ಭೀಮ, ಮಧ್ವ )
ವಾಯುಜಾತ = ಶ್ರೀ ವಾಯುದೇವರ ಅಂಶ
ಅಂಬುಜಾರಿ = ಚಂದ್ರ
ಅಂಬುಜಾರಿಧರ = ಶಿವ ( ಚಂದ್ರಶೇಖರ )
ಅಂಬುಜ = ಕಮಲ
ಅಂಬುಜಸಂಭವ = ಶ್ರೀ ಚತುರ್ಮುಖ ಬ್ರಹ್ಮದೇವರು
ಅಂಚಿ = ಹಂಸ
ಅಂಚಿ ವಾಹನ = ಹಂಸವಾಹನ
ಭಾವಿ ಅಜನೇ ಮಧ್ವ ಗುರುವೇ ।
ಭಾವಿಸಮೀರ ವಾದಿರಾಜ ಕರುಣಿಸೋ ।। ಚರಣ ।।
" ಹನುಮಾ "
" ಹನ " ಯೆಂದರೆ " ಜ್ಞಾನ ".
" ಹನುಮಾನ್ " ಯೆಂದರೆ ಸ್ವರೂಪ ಭೂತವಾದ ಅತಿಶಯವಾದ ಜ್ಞಾನ ಉಳ್ಳವರು.
ಶ್ರೀಮದಾಚಾರ್ಯರು ಬಲಿತ್ಥಾ ಸೂಕ್ತದ ಅರ್ಥ ವಿವರಣೆಯಲ್ಲಿ...
" ಹನ ಶಬ್ದೋ ಜ್ಞಾನವಾಚೀ ಹನೂಮಾನ್ ಮತಿ ಶಬ್ದಿತಃ " ಯೆಂದು ಹೇಳಿದ್ದಾರೆ.
" ತೈತ್ತಿರೀಯ " ದಲ್ಲಿ...
ನಮಸ್ತೇ ವಾಯೋ।
ತ್ವಮೇವ ಪ್ರತ್ಯಕ್ಷ೦ ಬ್ರಹ್ಮಾಸೀ ।।
" ಮಹಾಭಾರತ ತಾತ್ಪರ್ಯ ನಿರ್ಣಯ ೨-೧೪೮ " ದಲ್ಲಿ....
ವಾಯುರ್ಹಿ ಬ್ರಹ್ಮತಾಮೇತಿ ತಸ್ಮಾದ್ ಬ್ರಹ್ಮೈವ ಸ ಶ್ರುತಃ ।
ನ ಬ್ರಹ್ಮ ಸದೃಶಃ ಕಶ್ಚಿಚ್ಛಿವಾದಿಷು ಕಥಂಚನ ।।
ಎಂದು ತೈತ್ತೀರೇಯೋಪನಿಷತ್ತು ಶ್ರೀ ಮುಖ್ಯಪ್ರಾಣದೇವರನ್ನು ಅನುಭವಗೋಚರರಾದ ಶ್ರೀ ಬ್ರಹ್ಮದೇವರೆಂದೇ ಪರಾಮರ್ಶಿಸಿದೆ.
ಭಾವಿಸಮೀರ ವಾದಿರಾಜ ಕರುಣಿಸೋ ।।
" ಪ್ರಮಾಣಗಳು "
" ಋಕ್ಸಂಹಿತಮ್ " ವಚನದಂತೆ...
ವಾದಿರಾಜಾಭಿದಂ ರೂಪಂ
ದಶಪ್ರಮತಿ ಸಂಜ್ಞಿತಮ್ ।।
" ಬ್ರಹ್ಮ ವೈವಸ್ವತ ಪುರಾಣ "
ವ್ಯಾಸ ಸೇವಾರತೋ ನಿತ್ಯಂ
ವಾದಿರಾಜ ಋಜುರ್ಯತಿಃ ।।
" ಮಹಾಭಾರತ ತಾತ್ಪರ್ಯ ನಿರ್ಣಯಃ "
ಬ್ರಹ್ಮಯೋಗ್ಯ ಋಜವೋ
ನಾಮ ದೇವಾಃ ಪೃತಗ್ಗಣಾಃ ।
ತೈರೇವಾಪ್ಯಂ ತತ್ಪದಂ ತು
ನೈವಾನ್ಯೈಃ ಸಾಧನೈರಪಿ ।।
" ಪದ್ಮ ಪುರಾಣ "
ತತ್ಪೂರ್ವಮಸ್ಯ ವಂಶೇ ತು
ಋಜುಸ್ಥೋಹಿ ಸುರೇಶ್ವರಃ ।
ವಾದಿರಾಜಯತಿರ್ಭೂತ್ವಾ
ಚೈತದ್ವಿಸ್ತಾರಯಿಶ್ಯತಿ ।।
" ಸ್ಕಾಂದ ಪುರಾಣ "
ಸಹೋರೂಪಸ್ಯ ದೇವಸ್ಯ
ಲಾತವ್ಯಸ್ಯ ಬಲಾತ್ಮಕಮ್ ।
ರೂಪತ್ರಯಾವತಾರಯ
ನಿಹಿತಂ ಹರಿಣಾ ಸ್ವಯಮ್ ।।
ಅಂಡಾದ್ಬಹಿಃ ಸ್ಥಿತಂ ಮೂಲಂ
ಸತ್ಯಲೋಕಸ್ಥಿತಂ ಮಹತ್ ।
ಗೃಹೀತ್ವಾ ರುಕ್ಮಿಣೀಪತ್ರಂ
ಕೃಷ್ಣಾ೦ತಿಕಮುಪಾಗತಮ್ ।
ವಾದಿರಾಜಭಿದು ಚೇತಿ
ಮೂಲಭೇದ ವಿವರ್ಜಿತಮ್ ।।
" ವಾಮನ ಪುರಾಣ "
ವಾಯುಸ್ಥಾನ ಸಮಾರೋಪ
ಯೋಗ್ಯೋಯಂ ಯತಿ ರೂಪವಾನ್ ।
ಆಕಲ್ಪಂ ಬ್ರಹ್ಮಣ ಕೃಷ್ಣಾ ಪ್ರಸಾದೈಕ ಭಾಜನಂ
ಕೃಷ್ಣಾರ್ಚಕೋ ಯತಿರ್ಭೂತ್ವಾ ವಾದಿರಾಜೋವದಿಷ್ಯತಿ ।।
ಪ್ರಾಣಪ್ರಭ = ಜೀವರ ಒಡೆಯ
ಪ್ರಾಣಸುತ = ಹನುಮ - ಭೀಮ - ಮಧ್ವರು
ಪ್ರಾಜ್ಞ = ಎಲ್ಲವನ್ನು ಬಲ್ಲವರು = ಸರ್ವಜ್ಞರು
ಪ್ರಾಣ = ಜೀವ / ವಾಯು
ಪ್ರಾಣ ಪಂಚಕ ರೂಪ = ಪ್ರಾಣ - ಅಪಾನ - ವ್ಯಾನ - ಉದಾನ - ಸಮಾನಗಳೆಂಬ ಐದು ರೂಪಗಳು
ಪ್ರಾಣ ವಾಯುಗಳು = ಪ್ರಾಣ - ಅಪಾನ - ವ್ಯಾನ - ಉದಾನ - ಸಮಾನ ವಾಯುಗಳು
ಆಚಾರ್ಯ ನಾಗರಾಜು ಹಾವೇರಿ , ಗುರು ವಿಜಯ ಪ್ರತಿಷ್ಠಾನ
****
" ಶ್ರೀ ಮರುದಂಶ ಪ್ರಾಣೇಶದಾಸರು ವದನಾರವಿಂದದಲ್ಲಿ ಹೊರಹೊಮ್ಮಿದ ಶ್ರೀ ವಾಯುದೇವರ 32 ಲಕ್ಷಣಗಳ ವಿವರ "
ರಾಗ : ಕಾಂಬೋಧಿ ತಾಳ : ಝಂಪೆ
ಶ್ರೀ ವಾಯುದೇವರಿಗೆ
ನೀತವಾದ ।
ಮೂವತ್ತೆರಡು ಸಲಕ್ಷಣಗಳನು
ವರ್ಣಿಸುವೆ ।। ಪಲ್ಲವಿ ।।
ತಾಲು ಜಾನುಗಳು ಸ್ತನತುದಿಯು ನಾಶಿಕ ಚಕ್ಷು ।ನಾಲಕ್ಕೊಂದು ಧೀರ್ಘ ಜಂಘೆ ಗ್ರೀವ । ಆಲಿಂಗ ಪೃಷ್ಠ ನಾಲ್ಕು ಹ್ರಸ್ವ ಕೇಶರದ । ಮೇಲಾದ ತ್ವಕು ಬೆರಳು ನಖ ಬೆರಳು ನಖ ಪಂಚ ಸೂಕ್ಷ್ಮ ।। ಚರಣ ।।
ಕಕ್ಷಿ ಕುಕ್ಷಿಯು ವಕ್ಷ ಕರ್ಣ ನಖಸ್ಕಂಧಾರು । ರಕ್ಷಜ್ಞನಿಗೆ ಶೋಭಿಪುದು ಉನ್ನತ । ಅಕ್ಷಿ ಚರಣ ನಖ ಅಧರ ಜಿಹ್ವೇಣುಜಿಹ್ವೆ । ಮೋಕ್ಷದನ ಈ ಏಳು ಅವಯವು ರಕ್ತ ।। ಚರಣ ।।
ಸತ್ವನಾಭಿಯು ಸ್ವರವು ಈ ಗಂಭೀರ । ಉತ್ತಮ ಲಲಾಟ ಉರುದ್ವಯ ವಿಸ್ತಾರ । ಸತ್ಯಸಂಕಲ್ಪ ಶ್ರೀ ಪ್ರಾಣೇಶವಿಠ್ಠಲನ । ಭೃತ್ಯೋತ್ತಮಗೆ ತಕ್ಕುವಿವಾರಿಗಿಲ್ಲ ।। ಚರಣ ।।
1. ತಾಲು = ಗಲ್ಲ
2. ಜಾನು = ಮೊಳಕಾಲು
3. ನಾಶಿಕ = ಮೂಗು
4. ಚಕ್ಷು = ಕಣ್ಣು
5. ನಾಲಕ್ಕೊಂದು = 4 + 1 = 5
6. ಜಂಘೆ = ಮೊಳಕಾಳು ಕೆಳಗಿನ ಭಾಗ
7. ಗ್ರೀವ = ಕುತ್ತಿಗೆ
8. ಹ್ರಸ್ವ = ಚಿಕ್ಕದು
9. ಕೇಶ = ಕೂದಲು
10. ರದ = ಹಲ್ಲು
11. ತ್ವಕು = ಚರ್ಮ
12. ನಖ = ಉಗುರು
13. ಕಕ್ಷಿ = ಕಂಕುಳು
14. ಕುಕ್ಷಿ = ಹೊಟ್ಟೆ
15. ವಕ್ಷ = ಎದೆ
16. ಕರ್ಣ = ಕಿವಿ
17. ನಖ = ಉಗುರು
18. ಸ್ಕಂಧ = ಹೆಗಲು
19. ರಕ್ಷಜ್ಞನಿಗೆ = ಪಾಲಕನಿಗೆ
20. ಅಕ್ಷಿ = ಕಣ್ಣು
21. ಚರಣ = ಕಾಲು
22. ಕರ = ಕೈ
23. ನಖ = ಉಗುರು
24. ಅಧರ = ತುಟಿ
25. ಜಿಹ್ವೆ = ನಾಲಿಗೆ
26. ಅಣುಜಿಹ್ವೆ = ಕಿರು ನಾಲಿಗೆ
27. ಲಲಾಟ ( ಹಣೆ ) ಮತ್ತು ಉರು ( ವಕ್ಷಸ್ಥಳ )
ವಿವರಣೆ :
1. ತಾಲು - ಜಾನು - ಸ್ತನ ತುದಿ - ನಾಶಿಕ - ಚಕ್ಷು = 05 ಈ ಐದು ದೀರ್ಘವಾಗಿವೆ.
2. ಜಂಘೆ - ಗ್ರೀವ - ಆಲಿಂಗ - ಪೃಷ್ಠ = 04 ಈ ನಾಲ್ಕು ಚಿಕ್ಕದು
3. ಕೇಶ - ರದ - ತ್ವಕು - ಬೆರಳು - ನಖ = 05 ಈ ಐದೂ ಸೂಕ್ಷ್ಮ
4. ಕಕ್ಷಿ - ಕುಕ್ಷಿ - ವಕ್ಷ - ಕರ್ಣ - ನಖ - ಸ್ಕಂಧ = 06 ಈ ಆರೂ ಉನ್ನತ
5. ಅಕ್ಷಿ - ಚರಣ - ಕರ - ನಖ - ಆಧಾರ -
ಜಿಹ್ವೆ - ಅಣು ಜಿಹ್ವೆ = 07 ಈ ಏಳೂ ರಕ್ತವರ್ಣ
6. ಸತ್ವ - ನಾಭಿ - ಸ್ವರ = 03 ಈ ಮೂರೂ ಗಂಭೀರ
7. ಲಲಾಟ - ಉರ ( ವಕ್ಷಸ್ಥಳ ) = 02 ಈ ಎರಡೂ ವಿಸ್ತಾರ
ಒಟ್ಟು : 32 ಲಕ್ಷಣಗಳು
ಚತುರಶ್ಚತುರಾನನಃ ಸ್ವಯಂ
ಪವನೋ ವಾ ವ್ರತಿರೂಪ ಆವ್ರಜನ್ ।
ಶ್ರುತಿನಾಥದಿಧೃಕ್ಷಯಾನ್ಯಥಾ ನ ಖಲು ಸ್ಯಾನ್ನಿಖಿಲಾಗ್ರ್ಯಲಕ್ಷ್ಮವಾನ್ ।।
ಶ್ರುತಿನಾಥರಾದ ಶ್ರೀ ವೇದವ್ಯಾಸದೇವರನ್ನು ಕಾಣುವ ಬಯಕೆಯಿಂದ ಸ್ವತಃ ಶ್ರೀ ಚತುರ್ಮುಖ ಬ್ರಹ್ಮದೇವರೋ ಅಥವಾ ಶ್ರೀ ವಾಯುದೇವರೋ ಯತಿ ರೂಪದಿಂದ ಬರುತ್ತಿರುವಂತಿದೆ.
ಇಲ್ಲವಾದಲ್ಲಿ ಹೀಗೆ ಸಕಲ ಲಕ್ಷಣಗಳನ್ನು ಹೊಂದಿರಲು ಸಾಧ್ಯವಿಲ್ಲ.
ಮೇಲ್ಕಂಡ 32 ಸಲಕ್ಷಣಗಳಿಂದ ಶ್ರೀ ವಾಯುದೇವರು ( ಶ್ರೀ ಹನುಮಂತ - ಶ್ರೀ ಭೀಮಸೇನ - ಶ್ರೀಮದಾಚಾರ್ಯರು ) ಶೋಭಿಸುತ್ತಿದ್ದಾರೆ೦ದು ಶ್ರೀ ಪ್ರಾಣೇಶದಾಸರು ಸ್ಪಷ್ಟ ವಿವರಣೆ ಕೊಟ್ಟಿದ್ದಾರೆ.
ಮಧ್ವರಾಯರೇ ದಯದಿ ಉದ್ಧರಿಸಿ ಸಲಹೂ । ಪದ ಪದ್ಮವನು ನ್ಯೆರೆ ನಂಬಿದೆ । ಅದ್ವೈತ ಮತ ತಿಮಿರ ಮಾರ್ತಾಂಡ ಯನ್ನ । ಹೃ । ತ್ಪದ್ಮದಲಿ ನ್ಯೆಲಿಸಿ ಶ್ರೀ ಪದ್ಮನಾಭನ ತೋರು ।।
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ