ಬೆಂಗಳೂರು ನಗರ ಜಿಲ್ಲೆ : ಬೆಂಗಳೂರು ಪಶ್ಚಿಮ ಅಂಚೆ ವಿಭಾಗ ಮಟ್ಟದ ಡಾಕ್ ಅದಾಲತ್ ಅನ್ನು ಡಿಸೆಂಬರ್ 10 ರಂದು ಬೆಳಿಗ್ಗೆ 11 ಗಂಟೆಗೆ ಹಿರಿಯ ಅಂಚೆ ಅಧೀಕ್ಷಕರ ಕಛೇರಿ, ಬೆಂಗಳೂರುು ಪಶ್ಚಿಮ ವಿಭಾಗ, ವಿದ್ಯಾ ಭಾರತಿ ಶಾಲೆಯ ಎದುರು, ವೆಸ್ಟ್ ಆಫ್ ಕಾರ್ಡ್ ರಸ್ತೆ, ಎರಡನೇ ಹಂತ, ಅಂಚೆ ಕಚೇರಿ ಕಟ್ಟಡ, ಬೆಂಗಳೂರು- 560086 ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂಚೆ ಸೇವೆಗಳಿಗೆ ಸಂಬಂಧಿಸಿದ ಕುಂದು-ಕೊರತೆಗಳು ಅಥವಾ ಮೈಲ್ಸ್ ಗಳ ವಿತರಣೆ, ಸ್ಪೀಡ್ ಪೋಸ್ಟ್ ಲೇಖನಗಳು, ಪಾರ್ಸೆಲ್‌ಗಳು, ಮನಿ ಆರ್ಡರ್ ಗ ಳು, ಉಳಿತಾಯ ಬ್ಯಾಂಕ್, ನಗದು ಪ್ರಮಾಣಪತ್ರಗಳು ಮತ್ತು ಕೌಂಟರ್ ಸೇವೆಗಳು, ಬೆಂಗಳೂರು ಪಶ್ಚಿಮ ವಿಭಾಗಕ್ಕೆ ಸಂಬಂಧಿಸಿದ ಯಾವುದಾದರೂ ದೂರುಗಳು ಇದ್ದರೆ ಕಳುಹಿಸಬಹುದು, ಅಥವಾ ಹಿರಿಯ ಅಧೀಕ್ಷಕರನ್ನು ಭೇಟಿ ಮಾಡಿ ದೂರುಗಳನ್ನು ಸಲ್ಲಿಸಬಹುದು.
ದೂರುಗಳೇನಾದರೂ ಇದ್ದಲ್ಲಿ ಡಿಸೆಂಬರ್ 7 ರಂದು ಸಂಜೆ 4.00 ಗಂಟೆಯೊಳಗಾಗಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ದೂರವಾಣಿ ಸಂಖ್ಯೆ : 080-23493264, 23493267, ಈ - ಮೈಲ್ dobangalorewest.ka@indiapost.gov.in