" ಶ್ರೀ ಕನಕದಾಸರ ಜೀವನ ಚರಿತ್ರೆಯಲ್ಲಿ ಬರುವ ಕೆಲವು ಸ್ವಾರಸ್ಯಕರ ಸಂಗತಿಗಳು " Kanakadasa jayanthi

varthajala
0

 " ದಿನಾಂಕ : 18.11.2024 ಸೋಮವಾರ - ಶ್ರೀ ಕನಕ ಜಯಂತಿ "



" ನಾಡಿನ ಸಮಸ್ತ ಸಜ್ಜನ ಹರಿದಾಸ ಆಧ್ಯಾತ್ಮ ಬಂಧುಗಳಿಗೆ ಮಾತ್ರ -

ಕವಿಸಾರ್ವಭೌಮ ಶ್ರೀ ಕನಕದಾಸರ ಜಯಂತಿ ಶುಭಾಶಯಗಳು "

" ಶ್ರೀ ಕನಕದಾಸರ ಜೀವನ ಚರಿತ್ರೆಯಲ್ಲಿ ಬರುವ ಕೆಲವು ಸ್ವಾರಸ್ಯಕರ ಸಂಗತಿಗಳು "

1. ಕ್ರಿ ಶ 1564 ರಲ್ಲಿ ಶ್ರೀ ಪುರಂದರದಾಸರು ದೇಹ ತ್ಯಾಗ ಮಾಡಿದರು. 

ಅನಂತರ ಅವರ ತಂಬೂರಿಯನ್ನು ಶ್ರೀ ಕನಕದಾಸರು ಶ್ರೀ ತಿರುಮಲೆಯ ಚಲುವನಾದ ಶ್ರೀ ಶ್ರೀನಿವಾಸನಿಗೆ ಸಮರ್ಪಿಸಿ ಬಂದರೆಂದು ಐತಿಹ್ಯವಿದೆ. 

2. ಶ್ರೀ ಹೆಚ್ಲ ಕೆ ಕ್ಕಪ್ಪ ಗೌಡರ್  ಅವರು -

ಕಾಗಿನೆಲೆಗೆ ಕೊಂಚ ದೂರದಲ್ಲಿರುವ " ಕಮ್ಮಾರು " ಯೆಂಬ ಗ್ರಾಮದಲ್ಲಿ ಅವರ ವಂಶಸ್ಥರೂ ಈಗಲೂ ಇದ್ದಾರೆ. 

ಅಲ್ಲಿ ಶ್ರೀ ಕನಕನಾಯಕನು ಕಟ್ಟಿಸಿದ ಕಾಲುವೆಗಳೂ - ಕುದುರೆ ಲಾಯಗಳೂ - ದಾಸರ ಕೂಟ ಎಂದು ಕರೆಯಲಾಗುತ್ತಿರುವ " ತುಳಸೀ ತೋಟ " ಇಂದಿಗೂ ಇದೆ. 

3. ಡಾ।। ರಾ. ಸತ್ಯನಾರಾಯಣ ಅವರು -

ಶ್ರೀ ಕನಕದಾಸರು ಮೊದಲು ಶ್ರೀ ವ್ಯಾಸರಾಜರಿಂದ ದೀಕ್ಷೆ ಪಡೆದು ಕೆಲವು ಕಾಲದ ನಂತರ ಆನೆಗೊಂದಿಯ ಶ್ರೀ ತಾತಾಚಾರ್ಯರಿಂದ ಶ್ರೀ ವೈಷ್ಣವ ದೀಕ್ಷೆಯನ್ನೂ ತೆಗೆದು ಕೊಂಡರು. 

ಅವರ ವಂಶಸ್ಥರೂ - ಕುಲಸ್ಥರೂ ಇಂದಿಗೂ " ಕದರಮಂಡಲಗಿ " ಶ್ರೀ ಸಮೀರರಾಯರ ಮಠ " ದಲ್ಲಿ ಮುದ್ರಾಧಾರಣೆ ಮಾಡಿಸಿಕೊಂಡು ವೈಷ್ಣವ ದಾಸ ದೀಕ್ಷೆಯನ್ನು ತೆಗೆದು ಕೊಳ್ಳುತ್ತಾರೆ. 

ಆನೆಗೊಂದಿಯ ಶ್ರೀ ತಾತಾಚಾರ್ಯರ ಮಠದ ಯತಿಗಳಿಗೆ ಮೆರವಣಿಗೆ ಮಾಡಿಸಿ ಕಪ್ಪ ಕಾಣಿಕೆಗಳನ್ನು ಕೊಡುತ್ತಾರೆ. 

ನಾಮ ಧಾರಿಗಳಾದ ದಾಸರೂ ಆಗಿದ್ದಾರೆ. 

4. ಶ್ರೀ ಕನಕದಾಸರ ಅಂತ್ಯ :

ಶ್ರೀ ಕನಕದಾಸರು ತಿರುಮಲೆಯಲ್ಲಿ [ ತಿರುಪತಿ ] ಶ್ರೀ ಶ್ರೀನಿವಾಸದೇವರ ಸಂದರ್ಶನವನ್ನು ಮಾಡುತ್ತಿದ್ದಂತೆಯೇ ಶ್ರೀ ಶ್ರೀನಿವಾಸನ ಪಾದಾರವಿಂದಗಳಲ್ಲಿ [ ಲೀನವಾದರು ]  ತಮ್ಮ ಜೀವನವನ್ನು ಸಮಿಪತಿಗೊಳಿಸಿದರೆಂದು ಐತಿಹ್ಯ!

ಇನ್ನೂ ಕೆಲವರು ತಮ್ಮ ಊರಾದ ಕಾಗಿನೆಲೆಗೆ ಹಿಂತಿರಿಗಿ ಅಲ್ಲಿಯೇ ವಿಧಿವಶರಾದರೆಂದು ಹೇಳುವರು. 

ಇದಕ್ಕೆ ಕುರುಹಾಗಿ ಅಲ್ಲಿ ಶ್ರೀ ಕನಕದಾಸರ ಸಮಾಧಿಯಿರುವುದನ್ನು ತೋರಿಸುವರು. 

ಮತ್ತೆ ಇನ್ನಿತರರು - 

ಶ್ರೀ ಕನಕದಾಸರು ಕದರಮಂಡಲಿಗಿಯಲ್ಲಿರುವ ಶ್ರೀ ಹನುಮಂತದೇವರ ಬಳಿಯಲ್ಲಿ ಧ್ಯಾನ ಮಾಡುತ್ತಾ ಅಲ್ಲೇ ಸ್ವರ್ಗಸ್ಥರಾದರೆಂದು ಭಾವಿಸುತ್ತಾರೆ. 

5. ವಾಗ್ಗುಡಿ -

ಅ } ಕನಕನ ಕವಡು 

ಆ ] ಕನಕಪ್ಪನ ಮುಂಡಿಗೆ 

ಇ ] ಕನಕನ ಕೆಣಕ ಬೇಡಿ - ಕೆಣಕಿ ತಿಣಕ ಬೇಡಿ 

6. " ಕಾಗಿನೆಲೆಯಾದ ಕೇಶವರಾಯ " ಯೆಂಬ ಮುದ್ರಿಕೆಯ ಪದಗಳನ್ನು ಶ್ರೀ ಕನಕದಾಸರು ಬರೆದದ್ದುಯೆಂಬ ಭಾವನೆ ಅನೇಕರದ್ದು. 

ಆದರೆ, ಶ್ರೀ ಕನಕದಾಸರು ತಾವು ಹೋದಲ್ಲೆಲ್ಲಾ ತನ್ನ ಮೆಚ್ಚಿನ ದೇವರ ನಾಮಗಳುಳ್ಳ ಮುದ್ರಿಕೆಯಿಂದ ಪದಗಳನ್ನು ರಚಿಸಿರುವುದು ಬೆಳಕಿಗೆ ಬಂದಿದೆ. 

ಶ್ರೀ ಕನಕದಾಸರು ಸುಮಾರು 50 ಮುದ್ರೆಗಳ ಬಳಿಕೆಯುಂಟು.   

ಈ ವೈಶಿಷ್ಟ್ಯವು ಜಗತ್ತಿನಲ್ಲಿಯ ಯಾವ ಕಾವ್ಯ ಕರ್ತರಲ್ಲಿಯೂ ಕಂಡು ಬಂದಿಲ್ಲ ಎಂದು ಶ್ರೀ ಕರಿಯಪ್ಪ ಹುಚ್ಚಣ್ಣವರ್ ಹೇಳಿದ್ದಾರೆ. 

7. ಶ್ರೀ ಕನಕದಾಸರು ಒಮ್ಮೆ ಗರಳಪುರಿ { ನಂಜನಗೂಡು ] ಕ್ಷೇತ್ರಕ್ಕೆ ಹೊರಟರು. 

ಮಧ್ಯದಲ್ಲಿ " ಕಡಕೋಳ " ಯೆಂಬ ಗ್ರಾಮ ಬರುತ್ತದೆ. 

ಕಾಡಿನಲ್ಲಿದ್ದ ಮದ್ದಾನೆಯೊಂದು ಆರ್ಭಟಿಸುತ್ತಾ ಶ್ರೀ ಕನಕದಾಸರ ಬಳಿ ಬಂದಿತು. 

ಬಹು ವೇಗವಾಗಿ ಬಂದಿದ್ದರಿಂದ ತುಸು ಆಯಾಸವಾಗಿ ಸೊಂಡಲನ್ನು ಎತ್ತಿ ಇನ್ನೇನು ಶ್ರೀ ಕನಕದಾಸರನ್ನು ತೆಗೆದುಕೊಂಡು ಬಾರಿಸ ಬೇಕು ಎನ್ನುವಷ್ಟರಲ್ಲಿ ಶ್ರೀ ಕನಕದಾಸರು ಮೃದು ವಾಕ್ಯಗಳಿಂದ ಮಧುರವಾಗಿ -

ಎಲೈ ಗಜರಾಜ !

ಇಷ್ಟೇಕೆ ಧಾವಿಸಿ ಓಡಿ ಬಂದೆ?

ಎಷ್ಟು ಆಯಾಸವಾಗಿದೆಯಲ್ಲಾ?

ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೋ? 

ಎಂದು ನುಡಿದರು!

ಆಗ ಆನೆ ತನ್ನ ಉದ್ಧಟತನ ಬಿಟ್ಟು ಸೊಂಡಲನ್ನು ಬಗ್ಗಿಸಿಕೊಂಡು ಅತಿ ವಿನಯದಿಂದ ನಿಂತು ಕೊಂಡಿತು!

ಆಗ ಶ್ರೀ ಕನಕದಾಸರು ಕೀರ್ತನೆಯೊಂದನ್ನು ಹೇಳಿದರು - ಅದು ಹೀಗಿದೆ -

ಧನ್ಯಾಸಿ ತಾಳ : ಅಟ್ಟ 

ಆನೆ ಬಂದಿದೆಗೋ ಮುದ್ದಾನೆ ।। ಪಲ್ಲವಿ ।।

ಜ್ಞಾನಿಗಳೊ ಳಾಡುವ ಪಟ್ಟದಾನೆ ।। ಅ ಪ ।।

ದೇವಕಿಯೊಳು ಪುಟ್ಟದಾನೆ । ವಸು ।  ದೇವನ ಬಳಿಯೊಳು ನಲಿದಾಡುತಾವೆ । ಶ್ರೀ ವಾಸುದೇವನೆಂಬಾನೆ । ಭಾವಿ ಬ್ರಹಮಾಧ್ಯಮರು ಪೂಜಿಪ ಪಟ್ಟದಾ ।। ಚರಣ ।।

ಪೂತನಿ ಅಸು ಹೀರಿದಾನೆ ಕಡು । ಘಾತಕ ಶಕಟನ ಕಾಲಿಲೊದ್ದಾನೆ । ವತ್ಸಾಸುರನ ಕೊಂದಾನೆ ಕೃಷ್ಣ । ತೆತ್ತಿಸ ಗೋಪೇರ ಒಡನಾಡಿದಾನೆ ।। ಚರಣ ।।

ಕಾಡುಕಿಚ್ಚನು ನುಂಗಿದಾನೆ ಕೃಷ್ಣ । ಕಡಹದ ಮರವನೇರಿ ಮಡುವು ಧುಮಿಕಿದಾನೆ । ಜೋಡಿಯಿಲ್ಲದ ಹೆಚ್ಚಿದಾನ ರಂಗ । ಪೊಡವಿ ಗೋವಳರನ್ನು ಕಾಪಾಡಿದಾನೆ ।। ಚರಣ ।।

ಅಕ್ರೂರರೊಡನೆ ಬಂದಾನೆ । ಮದ  । ಸೊಕ್ಕಿ ಬರುವ ಜಟ್ಟಿಯ ಮುರಿದಾನೆ । ಡೊಂಕು ಕುಬ್ಜೆಗೆ ತಿದ್ದಿದಾನೆ ಮಾವ । ಕಂಸನ ಕೊಂಡು ತಾತನ ಪೊರದಾನೆ ।।ಚರಣ ।।

ತರುಳೆ ರುಕ್ಮಿಣಿಯ ತಂದಾನೆ । ಬಹು । ಕರುಣದಿ ಪಾಂಡವರನ್ನು ಕಾಯ್ದನೆ । ವರವೇಲಾಪುರದಲ್ಲಿಪ್ಪಾನೆ ರಂಗ । ವರದಾದಿಕೇಶವನೆಂಬುವ ತಾನೆ ।। ಚರಣ ।।

ಆನೆಯು ಕಣ್ಣು ಮುಚ್ಚಿಕೊಂಡು ತಲೆಯಲ್ಲಾಡಿಸುತ್ತಾ ತದೇಕ ಧ್ಯಾನವಾಗಿ ನಿಂತಿತು. 

ಈ ಕೀರ್ತನೆ ಮುಗಿಸಿ ಶ್ರೀ ಕನಕದಾಸರು ಮುಂದೆ ನಡೆದರು. 

ಆನೆಯೂ ಶ್ರೀ ಕನಕದಾಸರ ಬೆನ್ನು ಬಿಡಲೇ ಇಲ್ಲ!

ಹಿಂದಿನಿಂದ ಮೆಲ್ಲಮೆಲ್ಲನೆ ನಡೆಯಿತು.  

ಇಬ್ಬರೂ ಗರಳಪುರಿಯನ್ನು [ ನಂಜನಗೂಡನ್ನು ] ಸೇರಿದರು. 

ಜನರಿಗೆ ಅತೀವ ಸೋಜಿಗವಾಯಿತು. 

ಅವರಾವ ಮಹಾತ್ಮರೊ ಆನೆಯನ್ನು ವಶ ಮಾಡಿಕೊಂಡು ಬಂದಿರುವರೆಂದು ಜನರು ಗುಂಪು ಗುಂಪಾಗಿ ನೆರೆದರು. 

ಶ್ರೀ ಕನಕದಾಸರು ನೆಟ್ಟಗೆ ಶ್ರೀ ನಂಜುಂಡೇಶ್ವರನ ದೇವಾಲಯಕ್ಕೆ ಹೊರಟರು. 

ಆನೆಯೂ ಅಲ್ಲಿಗೆ ಬಂದು ನಿಂತಿತು - ಸ್ವಾಮಿಯ ಸೇವೆಯಲ್ಲಾ ಮುಗಿಯಿತು. 

ಕಡೆಗೆ ಆನೆಗೆ ಹೇಳಿದರು -

ಎಲೈ ಕರಿರಾಜ !

" ನೀನು ಇಲ್ಲಿಯೇ ಸ್ವಾಮಿಯ ರಥ ವಾಹನವಾಗಿ ಉತ್ಸವ ಕಾಲದಲ್ಲಿ ಮರ್ಯಾದೆ ಮಾಡುತ್ತಾ ಕೊನೆಗೆ ಸಾಯುಜ್ಯವನ್ನು ಹೊಂದು " 

ಆನೆಯು ಶ್ರೀ ಕನಕದಾಸರ ಮಾತು ತನಗೆ ತಿಳಿಯಿತೋ ಏನೋ ಅನ್ನುವಂತೆ ತಲೆಯಲ್ಲಾಡಿಸಿತು. 

ಮುಂದೆ ಅದು ಕಾಡಿಗೆ ಹೋಗಲಿಲ್ಲ - ಅಲ್ಲಿಯೇ ದೇವರ ಸೇವೆ ಮಾಡಹತ್ತಿತು ಎಂದು - ಕ್ರಿ ಶ 1920ರಲ್ಲಿ ಪ್ರಕಟವಾದ " ಕನಕ ಮಹಿಮಾ ದರ್ಶನ " ಪುಟಗಳಿಂದ ಸಂಗ್ರಹಿಸಲಾಗಿದೆ. 

8. ಮೋಹನ ತರಂಗಿಣೀ " ಯ ಪ್ರಾಚೀನ ಹಸ್ತಪ್ರತಿಗಳು " ಕದರಮಂಡಲಗಿ ಶ್ರೀ ಹನೂಮಂತದೇವರ ದೇವಾಲಯ " ದಲ್ಲಿ ಸಂರಕ್ಷಿಸಲ್ಪಟ್ಟಿವೆ. 

9. ಅಜ್ಞಾನಿಗಳ ಅಧಿಕ ಸ್ನೇಹಕ್ಕಿಂತ -

ಇದರ ಆಂಗ್ಲ ಅನುವಾದ - " ಶ್ರೀಯುತ ಬಸವರಾಜ ನಾಯ್ಕರ್ " [ Kanakadasa 2001, National Bank Trust India ]

Raaga : kaambodhi   Taala : Jampe 

It is better to quarrel [ ಜಗಳ ]  with the Wise [ ಬುದ್ಧಿವಂತ ]  than to be friend the ignorant. 

It is better to beg in a crowded city than restarve [ ಮತ್ತೆ ತಿನ್ನು ] and suffer in the court of King. 

It is better to converse [ ಸಂಭಾಷಣೆ ]  with Dasas than to spend one's time in idle talk. 

It is better to drink mere water [ ಕೇವಲ ನೀರು ]  than feed on food offered by others with taunts [ ಅಪಹಾಸ್ಯ ಮಾಡುತ್ತಾರೆ ]

It is better to wonder [ ಆಶ್ಚರ್ಯ ]  in wilderness [ ಕಾಡು ] than to quarrel with one's kith and kin [ ಸಂಬಂಧಿಕರು ]

It is better to stay in ruined [ ಹಾಳಾಗಿದೆ ] temple than to live in the vicinity [ ಸಮೀಪದಲ್ಲಿ ] of envious people [ ಅಸೂಯೆ ಪಡುವ ಜನರು / ಅಸೂಯೆ ಪಟ್ಟ ಜನರು ].

O Lotus - Eyed Lord Adikeshava of Kaninele. 

It is good to be your servant in the world.  

10. ಕನಕದಾಸರ ಮೇಲೆ ಕೃತಿಗಳು ಕಡಿಮೆ - ಅದ್ಯಾವ ಕಾರಣವೋ ತಿಳಿಯದು - ಉಪಲಬ್ಧವಿರುವ ಈ ಕೃತಿ ಶ್ರೀ ಕೊರಟಿ ಶ್ರೀನಿವಾಸರಾವ್ ಸಂಗ್ರಹಿಸಿದ್ದಾರೆ. 

ಶ್ರೀ ವರಗಡದಿನ್ನಿ ಶ್ರೀ ಶೇಷವಿಠ್ಠಲ ದಾಸರ ರಚನೆ ಹೀಗಿದೆ -

ಕನಕದಾಸರ ಪಾದ ವನಜ ಸ್ಮರಿಸುವ । ಮನುಜರೇ ಪರಮ ಧನ್ಯರು ।। ಪಲ್ಲವಿ ।।

ಹನುಮಾಂತರ್ಗತ ಜನಕಜೆ ರಮಣನ । ಘನ ಜ್ಞಾನ ಭಕುತಿ ಕೊಡುವ - ಭವ ಕಡೆವ ।। ಅ ಪ ।।

ಆಶಿಸದಾಗೀವೇ ಸೂಸಿಲಿ ದರ್ಶನ । ದಾಸ ನೀನಾಗೇಳೆಂದು । ಶ್ರೀಶನೇ ಬೆಂಬೆತ್ತಿ ದಾಸ ದೀಕ್ಷೆಯ ಕೊಡಿಸಿ । ತಾ ಸೇವೆ ಕೊಂಡವನ - ನಿಜ ಜವನ ।। ಚರಣ ।।

ವ್ಯಾಸರಾಯರು ಪೇಳೆ  ಶ್ರೀಶನ್ನ ಕರೆಯಲು । ತಾ ಶ್ವಾನನಾಗಿ ಬಂದ । ಭೂಸುರರು ಹೊಡೆದಟ್ಟೆ ಶೇಷ ರೂಪದಿ ಕರೆದೆ । ಆ ಸರ್ಪ ಕಂಡೋಡಿದರು - ನಿಜ ಮೂಢರು ।। ಚರಣ ।।

ಏಕಾಂತದಿ ತಿನಲು ಆ ಕದಳಿ ಫಲ ಕೊಡಲು । ತಾ ಕೈಲಿ ಹಿಡಿದು ಕುಳಿತ । ಏಕೆನಲು ಸರ್ವತ್ರ ಶ್ರೀಕಾಂತ ತಾ ವ್ಯಾಪ್ತ । ನಾ ಕಾಣೆನೇಕಾಂತ - ಜ್ಞಾನಿ ಸಂತ ।। ಚರಣ ।।

ಭಕ್ತಿ ಸಾರವ ಕಥೆ ಪದ್ಯೋಕ್ತಿಗಳ ನುಡಿದು । ಕಿತ್ತೆಸೆದ ಮೂಢರೂಢಿ । ಯುಕ್ತವಾದಾನಂದರುಕ್ತಿಗಳನುಸರಿಸಿ । ಭಕ್ತಿಯಲಿ ಗೋವಿನಂದನ - ಭಜಿಸರೆಂದನ ।। ಚರಣ ।।

ಹೀನ ಜನರೆಂದು ದೇವಸ್ಥಾನದಿಂದಟ್ಟಲು । ಮಾನವಂತರೆನೆ ತೊರೆದ । ಮಾನಿ ವರಗಡದಿನ್ನಿ ಶೇಷವಿಠ್ಠಲ ಭಕ್ತಿಗೆ । ತಾನೊಲಿದು ದರ್ಶನವಿತ್ತ - ಹಿಂದಿರುಗುತ್ತ ।। ಚರಣ ।।

11." ಕನಕದಾಸ ಅಧ್ಯಯನ ಸಂಶೋಧನಾ  ಪೀಠ " ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ - ಈ ಕೇಂದ್ರ ಶ್ರೀ ಕನಕದಾಸರ ಕೃತಿಗಳ ಶಾಸ್ತ್ರೀಯ ಸಂಪಾದನೆ, ಪ್ರಕಾಶನ. 

ಇದರ ಆಧಾರದಿಂದ ನಾಟಕ - ಯಕ್ಷಗಾನಗಳ ತಯಾರಿ ಮತ್ತು ಪ್ರದರ್ಶನ ಸಹಿತ ದಾಸ ಸಾಹಿತ್ಯ ಸಂಸ್ಕೃತಿ ಕೋಶ ನಿರ್ಮಾಣ ಇತ್ಯಾದಿ ಯೋಜನೆಗಳನ್ನು ಹಮ್ಮಿಕೊಂಡಿದೆ. 

ಶ್ರೀ ಕನಕದಾಸರ ಬಗ್ಗೆ ಕೀರ್ತಿಶೇಷ ವಿದ್ವಾನ್ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಬರೆದ ಈ ಪದ್ಯ ಅರ್ಥ ಗರ್ಭಿತ ಮತ್ತು ಮನಮೋಹಕ. 

ಕನಕದಾಸರ ಮನೆಗೆ ।

ಕಣ್ಣ ಹಾಕಿದ ಕಳ್ಳ ।

ಕನಕ ಸಿಗಲಿಲ್ಲ ।।

13. ಶ್ರೀ ಕನಕದಾಸರ ಮಹತ್ವನರಿತ ಜನತೆ ಅವರ ಹೆಸರಲ್ಲೇ -

" ಕನಕ ಗುರು ಪೀಠ "

ವನ್ನು ಕಾಗಿನೆಲೆಯಲ್ಲಿ ಸ್ಥಾಪಿಸಿ ಜನಾಂಗದ - ನಾಡಿನ ಒಳಿತಿಗಾಗಿ ಶ್ರಮಿಸುತ್ತಿದೆ. 

14. ಮತಗಳ ಹೆಸರಿನಲ್ಲಿ ಮಜಾ ಮಾಡುತ್ತಿರುವರನ್ನು ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ - " ಶ್ರೀ ಕನಕದಾಸರು ". 

 ರಾಗ : ಮುಖಾರಿ  ತಾಳ ಅಟ್ಟ 

ತೀರ್ಥವನು ಪಿಡಿದವರು ತಿರುನಾಮ ಧಾರಿಗಳೇ ಜನ್ಮ । ಸಾರ್ಥಕವಿಲ್ಲದವರೆಲ್ಲ ಭಾಗವತರೇ ।। ಪಲ್ಲವಿ ।।

ಮೂಗ್ಹಿಡಿದು ನೀರೊಳಗೆ ಮುಣುಗಿ ಜಪ ತಪ ಮಾಡಿ । ವೇದ ಶಾಸ್ತ್ರ ಪುರಾಣಗಳು ಓದಿ । ಬಾಗಿಪರ ಸ್ತ್ರೀಯರಿಗೆ ಭ್ರಮಿಸಿ ಕಣ್ಣಿಡುವಂಥಾ । ಜಾತಿ ತಪ್ಪಿದವರೆಲ್ಲಾ ದೇವ ಬ್ರಾಹ್ಮಣರೇ ।। ಚರಣ ।।

ಪಟ್ಟಿ ನಾಮವ ಬಳಿದು ಪಾತ್ರೆ ಕೈಯಲಿ ಪಿಡಿದು । ಗುಟ್ಟೇನಲಿ ರಹಸ್ಯ ಗುರುತರಿಯದೇ ।ಕೆಟ್ಟ ಕೂಗನು ಕೂಗಿ ಬಗುಳಿ ಬಾಯಾರುವಂಥಾ ಈ । ಹೊಟ್ಟುಗುಡು ಮೃಗಗಳೆಲ್ಲ ಶ್ರೀ ವೈಷ್ಣವರಹರೇ ।। ಚರಣ ।।

-- -- -- ಆರು ಚಕ್ರದ ನೆಲೆಯ ಅಷ್ಟಾಂಗ ಯೋಗದಲಿ । ಮೂರು ಮೂರ್ತಿಯ ಮೂರು ಕಡೆಯೊಳಿರಿಸೀ । ಮಾರಾನೈಯ್ಯನು ಆದಿಕೇಶವ ಕಾಗಿನೆಲೆಯ ರಂಗನು । ಸಾರಿ ಭಜಿಸಿದವರಿಗೆ ಯಮನ ಕೊಲೆಯುಂಟೇ ।। ಚರಣ ।।

ಆಚಾರ್ಯ ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ

Post a Comment

0Comments

Post a Comment (0)