ಬೆಂಗಳೂರು : ನಮ್ಮ ಸಂಸ್ಕೃತಿ, ಕಲೆ, ಪರಂಪರೆಯನ್ನು ಉಳಿಸಿ ಬೆಳಸುವ ಜವಾಬ್ದಾರಿ ನಮ್ಮೆಲ್ಲರದು ಎಂದು ಹಿರಿಯ ಪತ್ರಕರ್ತ ನ. ಶ್ರೀ,ಸುಧೀಂದ್ರರಾವ್ ಹೇಳಿದರು,
ಅವರು ಎಸ್ ವಿ ಕೆ ಸಂಸ್ಥೆಯ ವಾರ್ಷಿಕೋತ್ಸವ ಹಾಗು ಸಂಗೀತ ಕಲಾ ಉತ್ಸವ ಕಾರ್ಯಕ್ರಮವನ್ನು ನಗರದ ಮಲ್ಲತ್ತಹಳ್ಳಿಯಲ್ಲಿರುವ ಕಲಾ ಗ್ರಾಮದಲ್ಲಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸಂಗೀತಕ್ಕೆ ತನ್ನದೇ ಆದ ವಿಶಿಷ್ಟ ಶಕ್ತಿ ಇದೇ ಅದರಿಂದ ನಾವು ಮನೋಲ್ಲಾಸ ಹೊಂದಿ ಉತ್ತಮ ಅರೋಗ್ಯ ದಿಂದಿರಬಹುದು ಎಂದರು, ಯಾವುದೇ ಕಲೆ ಮತ್ತು ವಿದ್ಯೆಗೆ ಜಾತಿ ಮತ ವೆಂಬ ಬೇದವಿಲ್ಲ ಎಂದರು,
ಕೆಂಗೇರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ||ಹೆಚ್. ಜಿ ರಮೇಶ್ ರವರು ಮಾತನಾಡಿ, ಕಾರ್ಯಕ್ರಮ ಅತ್ಯದ್ಭುತವಾಗಿ ಯಶಸ್ವಿಯಾಗಿ ಮೂಡಿಬಂದಿದ್ದು ಗುರು ವಿದುಷಿ ಶಶಿಕಲಾರವರ ನೇತೃತ್ವದಲ್ಲಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಹಾಗೂ ಅಭಿನಯವು ವಾದ್ಯಗೋಷ್ಠಿಗಳೂಂದಿಗೆ ಯಶಸ್ವಿಯಾಗಿ ಮೂಡಿಬಂದಿದು ಯಶಸ್ವಿಯಾಗಿದೆ ಎಂದರು,
ಸಮಾರಂಭ ದಲ್ಲಿ ಜನಪದ ಕಲಾವಿದ ಮೈಲಾರಪ್ಪ ಕರಮುಡಿಯವರು ಹಾಗೂ ಕೆಂಗೇರಿ ಪ್ರಥಮ ದರ್ಜೆ ಕಾಲೇಜಿನ ಉಪಾಧ್ಯಾ ಯರಾದ ಡಿ. ಆರ್. ರಂಗಪ್ಪ ರವರು ಅತಿಥಿಯಾಗಿ ಆಗಮಿಸಿ ಮಾತನಾಡಿದರು,
ಹಿಮ್ಮೆಳದಲ್ಲಿ ಮೃದಂಗ ನುಡಿಸಿದ ವಿಧ್ವಾನ್ ನರಸಿಂಹನ್ ರಾಮಸ್ವಾಮಿ ಅಯ್ಯಂಗಾರ್ ಮತ್ತು ವೈಲಿನ್ ವಾದ್ಯನುಡಿಸಿದ ವಿಧ್ವಾನ್ ರಾಘವೇಂದ್ರ ಹಾಗೂ ಕು. ಕಾವ್ಯ ರವರು ಸುಮಧುರವಾಗಿ ನುಡಿಸಿ ಸಂಗೀತಕ್ಕೆ ಮೆರು ಗು ಕೊಟ್ಟರು.
ಎಸ್. ವಿ. ಕೆ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಶಾಸ್ತ್ರಿಯ ಸಂಗೀತ, ಸುಗಮ ಸಂಗೀತ ಮತ್ತು ಅಭಿನಯದ ಜೊತೆಗೆ ಮುದ್ದಾಗಿ ಹಾಡುತ್ತ ಚಿತ್ರದುರ್ಗದ ಓಬವ್ವನ ಕಥೆ, ಕಣಿ ಹೇಳುವಿಕೆ,ತರಕಾರಿ ಗೀತೆ, ಕೇಳಿದ್ದು ಸುಳ್ಳಾಗಬಹುದು ಹೇಳಿದ್ದು ಸುಳ್ಳಾಗಬಹುದು ಎಂಬ ಮುಂಗೂಸಿಯ ಪ್ರಾಮಾಣಿಕತೆ ಮತ್ತು ಪುಣ್ಯಕೊಟಿಯ ನೀತಿ ಕಥೆಯನ್ನ ತಮ್ಮ ಸುಮದುರ ಕಂಠದಿಂದ ಹಾಡಿ ಹಾಗೆಯೆ ನಿಷ್ಕಲ್ಮಶವಾದ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸನ್ನು ಮುಟ್ಟುವಂತೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು .