ಎಂ.ಎಡ್ ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿಗೆ ಅರ್ಜಿ ಆಹ್ವಾನ

varthajala
0


ಬೆಂಗಳೂರು, ನವೆಂಬರ್ 23 (ಕರ್ನಾಟಕ ವಾರ್ತೆ):

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿರುವ ಸಂಯೋಜಿತ ಕಾಲೇಜುಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಎಂ.ಎಡ್ ಕೋರ್ಸು ಪ್ರವೇಶಾತಿ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸಲಾಗಿದೆ. ಅರ್ಜಿಗಳನ್ನು ಯುಯುಸಿಎಂಎಸ್ ಪೋರ್ಟಲ್ ವೆಬ್‍ಸೈಟ್ https://uucms.karnataka.gov.in/Login/Index ಮುಖಾಂತರ ಸಲ್ಲಿಸಬಹುದಾಗಿದೆ.

ಆನ್‍ಲೈನ್‍ನಲ್ಲ್ಲಿ ನವೆಂಬರ್ 20 ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ನವೆಂಬರ್ 27 ದಂಡ ಶುಲ್ಕವಿಲ್ಲದೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ದಂಡ ಶುಲ್ಕ ಸಹಿತ ರೂ.200/- ಅರ್ಜಿ ಸಲ್ಲಿಸಲು  ನವೆಂಬರ್ 30 ಕೊನೆಯ ದಿನಾಂಕವಾಗಿದೆ, ಡಿಸೆಂಬರ್ 03 ರಂದು ಜೇಷ್ಠತಾ ಪಟ್ಟಿ ಪ್ರಕಟಿಸಲಾಗುವುದು. ಡಿಸೆಂಬರ್ 05 ರಂದು  ಸಮಾಲೋಚನೆ ನಡೆಯಲಿದೆ.

ಯುಯುಸಿಎಂಎಸ್ ಪೋರ್ಟಲ್‍ನಲ್ಲಿ ದಂಡ ಶುಲ್ಕ ರಹಿತ ಪ್ರವೇಶಾತಿ ಶುಲ್ಕ ಪಾವತಿಸಲು ಡಿಸೆಂಬರ್ 10 ಹಾಗೂ ದಂಡ ಶುಲ್ಕ ಸಹಿತ ರೂ.500/- ದೊಂದಿಗೆ ಪಾವತಿಸಲು ಡಿಸೆಂಬರ್ 12 ಕೊನೆಯ ದಿನಾಂಕವಾಗಿದೆ.

ಪ್ರವೇಶಾತಿ ಶುಲ್ಕ ಸಾಮಾನ್ಯ ವರ್ಗದವರಿಗೆ ರೂ.600/- ಹಾಗೂ ಪ.ಜಾ/ಪ.ಪಂ/ವರ್ಗ-1 ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳಿಗೆ ರೂ.300/- ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದು, ಆನ್‍ಲೈನ್ ಮೂಲಕವೇ ಅರ್ಜಿ ಶುಲ್ಕವನ್ನು ಪಾವತಿಸಬೇಕು ಎಂದು ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)