ಬೆಂಗಳೂರು, ನವೆಂಬರ್ 21, 2024: ಕರ್ನಾಟಕ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರಾದ ಶ್ರೀ ಶರಣ್ ಪ್ರಕಾಶ್ ಪಾಟೀಲ್ ಅವರು IRACON 2024 ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿದರು. ಉದ್ಘಾಟನೆ ನಂತರ ಮಾತನಾಡಿದ ಅವರು, “ಸಂಧಿವಾತ ಕಾಯಿಲೆಗಳ ಆಧುನಿಕ ಚಿಕಿತ್ಸೆ ಹಾಗು ಮುಂಜಾಗ್ರತ ಕುರಿತು ಜ್ಞಾನ ಹಂಚಿಕೊಳ್ಳಲು ಈ ರೀತಿಯ ಸಮ್ಮೇಳನಗಳು ಮಹತ್ವದ ವೇದಿಕೆಯಾಗಿ ಕೆಲಸ ಮಾಡುತ್ತವೆ” ಎಂದು ತಿಳಿಸಿದರು.
ಈ ಮಹತ್ವದ ಸಮಾವೇಶದಲ್ಲಿ ದೇಶದ ನಾನಾ ಭಾಗಗಳಿಂದ ನಾಲ್ಕು ಸಾವಿರಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು. ಅವರು ಚಿಕಿತ್ಸೆಗೆ ಹೊಸ ತಾಂತ್ರಿಕತೆ, ಜೈವಿಕ ಔಷಧಿ ಮತ್ತು ರೋಗಿಯ ಕೇಂದ್ರಿತ ಚಿಕಿತ್ಸಾ ವಿಧಾನಗಳ ಕುರಿತು ಚರ್ಚೆ ನಡೆಸಿದರು.ಕಾರ್ಯಕ್ರಮದಲ್ಲಿ IRACON ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಮತ್ತು ಡಾ. ನಾಗರಾಜ್ ಉಪಸ್ಥಿತರಿದ್ದರು. ಅವರು ಸಮಾವೇಶದ ಉದ್ದೇಶ, ವೈಶಿಷ್ಟ್ಯಗಳು ಮತ್ತು ಪ್ರಾತ್ಯಾಕ್ಷತೆ ಕುರಿತು ಮಾತನಾಡಿ, ಆರೋಗ್ಯ ಕ್ಷೇತ್ರಕ್ಕೆ ಈ ಕಾರ್ಯಕ್ರಮದ ಕೊಡುಗೆಯನ್ನು ಉಲ್ಲೇಖಿಸಿದರು. IRACON 2024 ಚಾಮರಾಜ ವಜ್ರ, ಪ್ಯಾಲೆಸ್ ಗ್ರೌಂಡ್ಸ್ನಲ್ಲಿ ನವೆಂಬರ್ 21-24ರ ವರೆಗೆ ನಡೆಯಲಿದ್ದು, ದೇಶಾದ್ಯಂತ
ವೈದ್ಯಕೀಯ ತಜ್ಞರಿಗೆ ಪರಿಣತಿಯನ್ನು ವಿಸ್ತರಿಸಲು ಅನುಕೂಲವಾಗಲಿದೆ.