ಕೂಡ್ಲು ನೂತನ ಅಂಚೆ ಕಚೇರಿ ಉದ್ಘಾಟನೆ

varthajala
0

 ನೂತನ ಅಂಚೆ ಕಚೇರಿಯನ್ನು ಆರಂಭಿಸುವ ಮೂಲಕ ಕೂಡ್ಲು ಭಾಗದ ಜನರ ಬಹು ದಿನಗಳ ಆಶಯ ವನ್ನು ಈಡೇರಿಸಲಾಗಿದೆ, ಎಂದು ಕರ್ನಾಟಕ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ತಿಳಿಸಿದರು. 




ಕೂಡ್ಲು ಅಂಚೆ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಈ ಅಂಚೆ ಕಚೇರಿಯಲ್ಲಿ ಎಲ್ಲಾ ಅಂಚೆ ಸೇವೆಗಳು ಲಭ್ಯವಿದ್ದು ಈ ಭಾಗದ ಜನರು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಂಗಳೂರು ಎಚ್ ಕ್ಯೂ ರೀಜನ್ ನ ಪೋಸ್ಟ್ ಮಾಸ್ಟರ್ ಜನರಲ್ ಎಲ್ ಕೆ ಡಾಶ್ ರವರು ಈ ಅಂಚೆ ಕಚೇರಿಯ ಸಂಪೂರ್ಣ ಸೌಲಭ್ಯವನ್ನು ಕೂಡ್ಲು ಸುತ್ತಮುತ್ತಲಿನ ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಅಂಚೆ ವಿಭಾಗದ ಹಿರಿಯ ಅಂಚೆ  ಅಧೀಕ್ಷಕರಾದ ಪರ್ವೀನ್ ರಘ್ ಬೀರ್ ಸಿಂಗ್, ಸಹಾಯಕ ಅಂಚೆ *ಅಧೀಕ್ಷಕರಾದ* ಹರ್ಷ ಮತ್ತು ಶ್ರೀಮತಿ ನಳಿನಿ, ಸಾರ್ವಜನಿಕ ಸಂಪರ್ಕ ನಿರೀಕ್ಷಕರಾದ ಬಿ. ಆನಂದ್ ಸ್ಥಳೀಯ ಮುಖಂಡರುಗಳಾದ ಮಂಜಣ್ಣ ಮತ್ತು ವರದರಾಜ್ ಮೊದಲಾದವರು ಹಾಜರಿದ್ದರು

Post a Comment

0Comments

Post a Comment (0)