ಬೆಂಗಳೂರು: ಬಿಬಿಎಂಪಿ ಮಹದೇವಪುರ ವಲಯ ಅಧಿಕಾರಿ ಮತ್ತು ನೌಕರರ ಕನ್ನಡ ಸಂಘದ ವತಿಯಿಂದ ಫೀನಿಕ್ಸ್ ಮಾರ್ಕಟ್ ಸಿಟಿ ಮಾಲ್ ಅವರಣದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಮತ್ತು ಸಾಧಕ/ಸಾಧಕಿಯರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ
ದೀಪ ಬೆಳಗಿಸಿ ಕಾರ್ಯಕ್ರಮವನ್ನು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್,ವಲಯ ಆಯುಕ್ತರಾದ ಕೆ.ಎನ್.ರಮೇಶ್, ಜಂಟಿ ಆಯುಕ್ತರಾದ ಶ್ರೀಮತಿ ಕೆ.ದಾಕ್ಷಾಯಿಣಿ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಉಪ ಆಯುಕ್ತರಾದ ಶಶಿಕುಮಾರ್, ಸಂಜೀವಿನಿ ಗ್ರೂಪ್ಸ್ ಮಾಲೀಕರಾದ ಉಮೇಶ್ ಗೌಡ, ಚಲನಚಿತ್ರ ನಟಿ ಪ್ರಿಯಾ, ಸಹಾಯುಕ ಆಯುಕ್ತರಾದ ಡಾ.ಬಸವರಾಜ್ ಮಗಿ, ಮಹದೇವಪುರ ವಲಯ ಅಧ್ಯಕ್ಷರಾದ ಹೆಚ್.ಬಿ.ಹರೀಶ್ ರವರು, ಗೌರವಾಧ್ಯಕ್ಷರಾದ ಸಾಯಿಶಂಕರ್, ಪದಾಧಿಕಾರಿಗಳಾದ ಬಾಬಣ್ಣ, ಕೆ.ಜಿ.ರವಿ, ಮಂಜುನಾಥ್ ಮಾರ್ಕಟ್ ರವರು ಉದ್ಘಾಟನೆ ಮಾಡಿದರು.
*ವಿಧಾನಪರಿಷತ್ ಸದಸ್ಯ ಗೋವಿಂದರಾಜು* ರವರು ಮಾತನಾಡಿ ಇಂದು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರ ವೆಂದರೆ ಬೆಂಗಳೂರುನಗರ ಸುಂದರವಾಗಿರಲು ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಶ್ರಮ ಕಾರಣ. ಕನ್ನಡ ಭಾಷೆ ಉಳಿಸಿ, ಬೆಳಸಬೇಕು ಎಂದರೆ ಪ್ರತಿಯೊಬ್ಬರು ಆಡಳಿತ ಮತ್ತು ವ್ಯವಹಾರದಲ್ಲಿ ಕನ್ನಡ ಬಳಸಿದರೆ ಕನ್ನಡ ಭಾಷೆ ಉಳಿಯುತ್ತದೆ ಎಂದು ಹೇಳಿದರು.
*ಎ.ಅಮೃತ್ ರಾಜ್* ರವರು ಮಾತನಾಡಿ ಬೆಂಗಳೂರುನಗರದಲ್ಲಿ ನಾಮಫಲಕದಲ್ಲಿ ಕನ್ನಡ ಭಾಷೆ ಶೇಕಡ 60ರಷ್ಟು ಹಾಕಬೇಕು ಎಂದು ಸರ್ಕಾರದ ನಿಯಮವನ್ನು ಬಿಬಿಎಂಪಿ ಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತಂದಿದೆ.
ಕಾಶಿ, ಹರಿದ್ವಾರದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಮತ್ತು ನೇಪಾಳದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಅಚರಿಸಲಾಯಿತು.
ಅಂತರಾಷ್ಟ್ರ ಮತ್ತು ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಅಧಿಕಾರಿಗಳು ಹೆಚ್ಚಿನ ಸಹಕಾರ ನೀಡಿದ್ದರು.
ಕನ್ನಡ ಭಾಷೆ ಉಳಿಸಿ,ಬೆಳಸಲು ಅಂದೋಲನವಾಗಬೇಕು, ಕನ್ನಡ ಭಾಷೆ ಉಳಿಸಲು ಜನಜಾಗೃತಿ ಅಭಿಯಾನವಾಗಬೇಕು.
*ವಲಯ ಆಯುಕ್ತರಾದ ಕೆ.ಎನ್.ರಮೇಶ್* ಮಾತನಾಡಿ 2ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಲಿಪಿಗಳ ರಾಣಿ ಎಂದು ವಿನೋಭ ಬಾವೆರವರು ಹೇಳಿದ್ದರು. ಪ್ರಾಚಿನ ಭಾಷೆ ಎಂದರೆ ಕನ್ನಡ ಭಾಷೆಗೆ ಗೌರವ ಸಿಕ್ಕಿದೆ.
ಕನ್ನಡ ಭಾಷೆ ಉಳಿಸಲು ಎಲ್ಲಾದರು ಎಂತಾದರು ಇರು ಕನ್ನಡಿಗನಾಗಿರು ಎಂಬ ಧೃಡಸಂಕಲ್ಪ ಮಾಡಬೇಕು.
ಅನ್ಯ ಭಾಷಿಗರಿಗೆ ಕನ್ನಡ ಕಲಿಸುವ ಕಾರ್ಯವಾಗಬೇಕು.ಕನ್ನಡವನ್ನು ವ್ಯವಹಾರಿವಾಗಿ ಬಳಸಬೇಕು ಎಂದು ಹೇಳಿದರು.
*ಬಸವರಾಜ್ ಮಗಿ* ರವರು ಮಾತನಾಡಿ ಪದ್ಯಗಳನ್ನು ಕನ್ನಡದಲ್ಲಿ ಬರೆದರೆ ಮಾತ್ರ ಚನ್ನಾಗಿ ಮೂಡಿ ಬರಲು ಸಾಧ್ಯ ಎಂದು ದ.ರಾ.ಬೆಂದ್ರೆರವರ ಅಭಿಪ್ರಾಯವಾಗಿತ್ತು. ಮೊದಲು ಮೈಸೂರು ರಾಜ್ಯವಾಗಿ ನಿರ್ಮಾಣವಾಗಿತ್ತು 1973ರಲ್ಲಿ ಕರ್ನಾಟಕ ರಾಜ್ಯವನ್ನು ನಾಮಕರಣ ಮಾಡಲಾಯಿತು. ಕರ್ನಾಟಕ ಎಂದರೆ ಕರುನಾಡು ಎಂಬ ಅರ್ಥವಿದೆ.
ಕನ್ನಡ ಭಾಷೆ ಮತ್ತು ನಮ್ಮ ರಾಜ್ಯ ಉಳಿಯಲು ನಾಡಿನ ಸಾಹಿತಿಗಳ ಕೊಡುಗೆ ಅಪಾರ. ಇಂದು ಕರ್ನಾಟಕದಲ್ಲಿ ಎಲ್ಲ ನಾಮಫಲಕದಲ್ಲಿ ಶೇಕಡ 60ರಷ್ಟು ಕನ್ನಡ ಭಾಷೆಯಲ್ಲಿ ಇರಬೇಕು ಎಂದು ರಾಜ್ಯ ಸರ್ಕಾರ ಕಾನೂನಿ ಜಾರಿಗೆ ತಂದಿದೆ. ಕನ್ನಡ ನಾಡಿನಲ್ಲಿ ನಾವು ಹುಟ್ಟಿರುವುದು ನಮ್ಮ ಪುಣ್ಯ ಎಂದು ಹೇಳಿದರು.
ಸಾಧಕ/ ಸಾಧಕಿಯರಾದ ಬಿಬಿಎಂಪಿ ಅಧಿಕಾರಿ ಮತ್ತು ನೌಕರರು ಹಾಗೂ ಸಮಾಜದಲ್ಲಿ ಸೇವೆ ಸಲ್ಲಿಸಿದ ಗಣ್ಯ ಮಹನೀಯರುಗಳಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕನ್ನಡ ಕಹಳೆ ರಸಸಂಜೆ ಮತ್ತು ಸರಿಗಮಪ ಎಂಟರ್ ಟೈನರ್ , ಸರಿಗಮಪ ಖ್ಯಾತ ಗಾಯಕರುಗಳಾದ ಶರದಿ ಪಾಟೀಲ್, ಕಂಬದರಂಗಯ್ಯ, ಸುರಕ್ಷದಾಸ್, ಶ್ರೀರಾಮ್ ಕಾಸರ್ ರವರಿಂದ ಸಂಗೀತ ಸಂಜೆ ಹಾಗೂ ಜನಪದ ಸಾಂಸ್ಕೃತಿಕ ವೇದಿಕೆ ಕಾಡುಗೋಡಿ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.