" ಶ್ರೀ ಕನಕದಾಸರ ಕಾಲ ನಿರ್ಣಯ "

varthajala
0

" ಶ್ರೀ ವ್ಯಾಸರಾಜ ಗುರುಸಾರ್ವಭೌಮರೂ - ಶ್ರೀ ತಾತಾಚಾರ್ಯರೂ - ಶ್ರೀ ವಾದಿರಾಜ ಗುರುಸಾರ್ವಭೌರ ಹಾಗೂ ಶ್ರೀ ಕನಕದಾಸರ ಸಂಬಂಧ - ಒಂದು ಚಿಂತನೆ "

ಶ್ರೀ ವ್ಯಾಸರಾಜ ಗುರುಸಾರ್ವಭೌಮರು ವ್ಯಾಸ ಸಮುದ್ರವನ್ನು ಕಟ್ಟಿಸುತ್ತಿರುವಾಗ್ಗೆ - ಶ್ರೀ ಕನಕದಾಸರು ಅವರ ಪ್ರಥಮ ಸಂದರ್ಶನ ಹೊಂದಿ  ಮಂತ್ರೋಪದೇಶವನ್ನು ಪಡೆದರೆಂದು ತಿಳಿದು ಬರುತ್ತದೆ. 

ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಗೆ " ವ್ಯಾಸ ಸಮುದ್ರ " ದ ಉಂಬಳಿಯು ದೊರೆತಿದು ಕ್ರಿ ಶ 1525 - 1526 ಇಸ್ವಿಯಲ್ಲಿ! ಕೂಡಲೇ ಅವರು ಶ್ರೀ ವ್ಯಾಸರಾಜ ಗುರುಸಾರ್ವಭೌಮರು " ವ್ಯಾಸ ಸಮುದ್ರ " ಕಟ್ಟಿಸಲಾರಂಭಿಸಿದರು. 

ಮತ್ತೊಂದು ಕಥೆಯಂತೆ ತಿಳಿಯಬರುವುದೇನೆಂದರೆ -

ಶ್ರೀ ಕನಕದಾಸರು 98ನೇ ವಯಸ್ಸಿನಲ್ಲಿ ತಿರುಮಲೆಗೆ ಬಂದು ತಿರುಮಲೆಯ ಚಲುವನಾದ ಸ್ವಯಂವ್ಯಕ್ತ  ಶ್ರೀ ಶ್ರೀವಾಸನ ಮುಂದೆ ನಿಂತು -

" ಈಶ ನಿನ್ನ ಚರಣ ಭಜನೆ 

ಆಶೆಯಿಂದ ಮಾಡುವೆ " 

ನೆಂಬ ಕೃತಿಯನ್ನು ರಚಿಸಿ ಆ ಶ್ರೀ ಶ್ರೀನಿವಾಸನ ಮೂಲ ವಿಗ್ರಹದಲ್ಲಿ ಲೀನವಾದರು!

ಮೇಲಣ ಎರಡೂ ವಿಷಯಗಳು ನಿಜವೆಂದು ತಿಳಿದು - ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಪ್ರಥಮ ಸಂದರ್ಶನದ ಸಮಯದಲ್ಲಿ ಶ್ರೀ ಕನಕದಾಸರಿಗೆ 15 - 16 ವರ್ಷಗಳ ವಯಸ್ಸಾಗಿತ್ತೆಂದು  -

ಅಂದರೆ -

ಶ್ರೀ ಕನಕದಾಸರ ಕಾಲವು ಸುಮಾರಾಗಿ ಕ್ರಿ ಶ 1508 - 1606 ಇಸ್ವಿಯ ವರೆಗೂ ಬಾಳಿ ಬದುಕಿದರೆಂದು ಖಚಿವಾಗುತ್ತದೆ. 

ಶ್ರೀ ತಾತಾಚಾರ್ಯರು ಹಾಗೂ ಶ್ರೀ ತ್ರಿವಿಕ್ರಮದಾಸರು ಎಂಬ ಎರಡು ಹೆಸರುಗಳನ್ನು ಶ್ರೀ ಕನಕದಾಸರು ನಿರ್ದೇಶಿಸಿದ್ದರು ಅಷ್ಟೇ!

" ಮೋಹನ ತರಂಗಿಣಿ " 

ಯನ್ನು ಬರೆದ ಕಾಲವು ಗೊತ್ತಾದ ಮೇಲೆ - ಆ ಕಾಲದ ಇತಿಹಾಸವನ್ನೋದಿದರೆ ಆ ಎರಡೂ ಹೆಸರುಗಳ ವ್ಯಕ್ತಿಗಳು ಆರೆಂಬುದು ಗೊತ್ತಾಗುತ್ತದೆ. 

" ಶ್ರೀ ತಾತಾಚಾರ್ಯರ ಬಗ್ಗೆ ಸಂಕ್ಷಿಪ್ತ ಮಾಹಿತಿ "

ಶ್ರೀ ರಾಮಾನುಜ ಗುರುಗಳಾದ ಶ್ರೀ ತಾತಾಚಾರ್ಯರೆಂದರೆ - " ತಿರುಮಲೈ ತಾತಾಚಾರ್ಯರು "!

ಇವರು ವಿಜಯನಗರದಲ್ಲಿ ಕೃಷ್ಣದೆವರಾಯನ ಆಸ್ಥಾನ ಪಂಡಿತರು. 

ಇವರಿಗೆ ಕೃಷ್ಣದೇವರಾಯನ ಜಾಮಾತನಾದ " ಅಳಿಯ ರಾಮರಾಯ " ನು ಎಷ್ಟೋ ಬಾರಿ ಸನ್ಮಾನಿಸಿದುದುಂಟು. 

ಶ್ರೀ ತಾತಾಚಾರ್ಯರು " ಅಳಿಯ ರಾಮರಾಯ " ನ ಗುರುಗಳು!


ಆರುವೀಡು ಮನೆತನದ ವಿಜಯನಗರದ ನರಪತಿಗಳ ಮೇಲೆ ಇವರ ವರ್ಚಸ್ಸು ವಿಶೇಷವಾಗಿದ್ದಿತು. 


ಶ್ರೀ ತಿರುಮಲೈ ತಾತಾಚಾರ್ಯರ ಮಕ್ಕಳಾದ ಶ್ರೀ ಕುಮಾರ ತಾತಾಚಾರ್ಯರು " ವೆಂಕಟಪತಿದೇವರಾಯ " ನ ರಾಜ ಗುರುಗಳಾಗಿದ್ದರು. 


" ಶ್ರೀ ವಾದಿರಾಜ ಗುರುಸಾರ್ವಭೌಮರ ಕುರಿತು ಸಂಕ್ಷಿಪ್ತ ಮಾಹಿತಿ "


ಶ್ರೀ ತ್ರಿವಿಕ್ರಮದಾಸರೆಂದರೆ -


ಸೋದೆಯ ಮಠದ ಶ್ರೀ ವಾದಿರಾಜ ಗುರುಸಾರ್ವಭೌಮರು ಋಜು ಪದಸ್ಥ ದೇವತೆಗಳು. 


ಶ್ರೀ ವಾದಿರಾಜರು 98ನೆಯ ಬ್ರಹ್ಮಕಲ್ಪ ಸಾಧನೆಯಲ್ಲಿರುವರು. 


ಈಗಿರುವ ಶ್ರೀ ವಾಯುದೇವರು ಶ್ರೀ ಬ್ರಹ್ಮ ಪದವಿಗೆ ಏರಿದ ಕೂಡಲೇ ಶ್ರೀ ವಾದಿರಾಜರು ಶ್ರೀ ವಾಯುದೇವರ ಪದಕ್ಕೆ ಬರುವರು. 


ಶ್ರೀ ವಾಯು ಪದಾರ್ಹ ಋಜುವಿನ ಹೆಸರು " ಶ್ರೀ ಲಾತವ್ಯರು ". 


ಶ್ರೀ ತ್ರಿವಿಕ್ರಮೋಪಾಸನೆಯು ಋಜು ಪದಸ್ಥರಿಗೆ ಉಕ್ತವಾಗಿರುವುದು!


ಸೊದೆಯಲ್ಲಿ ಶ್ರೀ ತ್ರಿವಿಕ್ರಮದೇವರನ್ನು ಶ್ರೀ ವಾದಿರಾಜರು ಪ್ರತಿಷ್ಠಿಸಿದರು. 


ತೀರ್ಥ ಪ್ರಬಂಧದಲ್ಲಿ -


ತ್ರಿವಿಕ್ರಮಂ ರಮ್ಯಗಡಾರಿಶಂಖ-

ಸರೋಜಮಾಲಾಧರಮಿಂದುವರ್ಣಂ ।

ಮನೋಹರಾಂಗಂ ಯತಿ ವಾದಿರಾಜ -

ಪ್ರತಿಷ್ಠಿತಂ ನೌಮಿ ಸದಾ ಪ್ರಸನ್ನಂ ।।


ಕೆಲ ಕಾಲದ ಮೇಲೆ ವಿಜಯನಗರದ ನರಪತಿಯಾದ ವೆಂಕಟಪತಿದೇವರಾಯನ ಮಾಂಡಲೀಕನಾದ ಸೋದೆಯ ಅರಸಪ್ಪನಾಯಕನೇ ಮುಂತಾದ ಅನೇಕ ಜನರಿಂದ ದತ್ತಿಗಳನ್ನು ಗಳಿಸಿ - ಶ್ರೀ ತ್ರಿವಿಕ್ರಮದೇವರ ಪೂಜೆ - ಅರ್ಚೆ - ರಥೋತ್ಸವಗಳು ಲೋಪವಿಲ್ಲದೆ ಅವ್ಯಾಹತವಾಗಿ ನಡೆಯುವಂತೆ ಶ್ರೀ ವಾದಿರಾಜ ಗುರುಸಾರ್ವಭೌಮರೇ ವ್ಯವಸ್ಥೆ ಮಾಡಿದರು. 


ಅವರಿಂದ ಪ್ರಾರಂಭವಾದ ಶ್ರೀ ತ್ರಿವಿಕ್ರಮದೇವರ ರಥೋತ್ಸವವು ಈ ಹೊತ್ತಿಗೂ ಫಾಲ್ಗುಣ ಶುದ್ಧ ನವಮಿಯಿಂದ ಪೌರ್ಣಮೆಯ ವರೆಗೂ ನಡೆಯುತ್ತಾ ಬಂದಿದೆ. 


ಕೊನೆಗೆ ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರು ಶ್ರೀ ತ್ರಿವಿಕ್ರದೇವರ ಸನ್ನಿಧಿಯಲ್ಲಿಯೇ ಶಾಲಿವಾಹನ ಶಕೆ 1522 ಅಂದರೆ ಕ್ರಿ ಶ 1600 ರ ಶಾರ್ವರೇ ನಾಮ ಸಂವತ್ಸರ ಫಾಲ್ಗುಣ ಬಹುಳ ತೃತೀಯಾ ಬುಧವಾರದಲ್ಲಿ ಸಶರೀರರಾಗಿ ವೃಂದಾವನ ಪ್ರವೇಶ ಮಾಡಿದರು. 

ಆಚಾರ್ಯ ನಾಗರಾಜು ಹಾವೇರಿ 

ಗುರು ವಿಜಯ ಪ್ರತಿಷ್ಠಾನ 

ಮುಂದುವರೆಯುವುದು -

Post a Comment

0Comments

Post a Comment (0)