ಅನಿಲ್ ನಮ್ಮ ಅಮ್ಮ ಹೇಳಿದಂತೆ ಕಾಲೇಜು ದಿನಗಳಿಂದಲೇ ನಾಟಕಗಳಲ್ಲಿ ಸಹಭಾಗಿ. ಬೀದಿ ನಾಟಕ ಕೂಡಾ ಆಡುತ್ತಿದ್ದರು ಎನಿಸುತ್ತದೆ.ಮುಂದೆ ಅನಿಲ್ ನೀನಾಸಂನಲ್ಲಿ ಅಭಿನಯದ ಕೋರ್ಸ್ ಮಾಡಿಕೊಂಡರು.ನಂತರ ಮೂಡಲಮನೆ, ಮನೆತನ ಇತ್ಯಾದಿ ಟೆಲಿ ಸೀರಿಯಲ್ ಗಳಲ್ಲಿ ಅಭಿನಯಿಸಿ ಕರ್ನಾಟಕ ತುಂಬಾ ಮನೆ ಮಾತಾದರು.ಮುಂದೆ ಅವರದ್ದು ಪ್ರೇಮವಿವಾಹ,ಪತ್ನಿ ಕೂಡಾ ನಟಿ ಹಾಗು ಗಾಯಕಿ. ಈ ವಿಷಯ ನನಗೆ ಗೆಳೆಯ ಉಗಮ ಶ್ರೀನಿವಾಸ್ ತಿಳಿಸಿದರು.
ಗತಿಸಿದ ಕಿರು ತೆರೆ ನಟ ಅನಿಲ್ ಬಗ್ಗೆ ಒಂದೆರಡು ಮಾತುಗಳು.ಅನಿಲ್ ಅವರ ತಂದೆ ರಂಗಪ್ಪ ತಾಯಿ ಪುಟ್ಟಮ್ಮ.ಅವರು ಗೌಡರು.ತಂದೆ ತಿಪಟೂರಿನ ಪ್ರಖ್ಯಾತ ವಕೀಲರು.ರಂಗಪ್ಪನವರ ಕುಟುಂಬ ಬಾಡಿಗೆ ವಾಸ ಇದ್ದ ಮನೆ ಹಾಗು ನಮ್ಮ ತಂದೆ ತಾಯಿ ವಾಸ ಇದ್ದ ಬಾಡಿಗೆ ಮನೆಗಳ ಮಾಲಿಕರು ಒಬ್ಬರೇ.ಗಂಗಣ್ಣ ನವರು.ನಮ್ಮ ಕಟ್ಟಡ ಒಂದು ಬದಿ.ಅವರ ಮನೆ ಇದ್ದ ಭಾಗ ರಸ್ತೆಯ ಇನ್ನೊಂದು ಬದಿ.ರಂಗಪ್ಪನವರಿಗೆ ಬಹುಶಃ ಮೂವರು ಗಂಡು ಮಕ್ಕಳು ಒಬ್ಬ ಹೆಣ್ಣು ಮಗಳು.ಮಗಳು ಬ್ಯೂಟಿ ಪಾರ್ಲರ್ ಇಟ್ಟಿದ್ದರು.ಮದುವೆ ಆಗಿತ್ತು.ಅವರಿಗೆ ಸನಿಹದ ಹಳ್ಳಿಯಲ್ಲಿ ತೋಟ, ತೋಟದ ಮನೆ ಕೂಡಾ ಇದ್ದವು.
ಅನಿಲ್ ವಿಷಯ ನನಗೆ ಹೆಚ್ಚು ತಿಳಿದಿಲ್ಲ.ಆದರೆ ಅವರ ಅಭಿನಯ ನಾನು ಮೆಚ್ಚಿ ಕೊಳ್ಳುತ್ತಿದ್ದೆ. ಈಗ ಆತ ಬದುಕಿಲ್ಲ.ಬಹುಶಃ ಕುಡಿತದ ಕಾರಣದಿಂದ ಸಾವು ಸಂಭವಿಸಿರಬಹುದೇನೋ.
ಅನಿಲ್ರ ಜೀವನ ಕಲಾವಿದರಿಗೆ ಪಾಟ ಕೂಡಾ ಎನಿಸುತ್ತದೆ.
ದೇವರು ಅನಿಲ್ ಆತ್ಮಕ್ಕೆ ಶಾಂತಿ ಕೊಡಲಿ.ಅವರ ಕುಟುಂಬ ಚೆನ್ನಾಗಿರಲಿ.
ರಾಧಿಕಾ ಜಿ.ಎನ್
ಟೀವೀ ಹೋಸ್ಟ್
brahmies@gmail.com