ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಸುವಿಧಾ ರಿಟೈರ್ ಮೆಂಟ್ ವಿಲೇಜ್ ನಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವೆಂಬರ್ 1ರಂದು ಸುಗಮ ಸಂಗೀತ ಕನ್ನಡ ಗೀತೆಗಳನ್ನು ಗಾನ ಸಿದ್ಧಗಂಗಾ ಸಂಗೀತ ವಿದ್ಯಾಲಯದಿಂದ ಪ್ರಸ್ತುತ ಪಡಿಸಲಾಯಿತು.
ಗಾಯನದಲ್ಲಿ ಶ್ರೀಮತಿ ಗೀತಾ ಬತ್ತದ್, ಶ್ರೀವೀರೇಶ ಎಂಪಿಎಂ, ವಾದ್ಯವೃಂದದಲ್ಲಿ ಕೀಬೋರ್ಡ್ ನಲ್ಲಿ ಮಲ್ಲಿಕಾರ್ಜುನ್ ಪತ್ತಾರ್, ತಬಲಾದಲ್ಲಿ ಶರಣು, ರಿದಂಪ್ಯಾಡನಲ್ಲಿ ತ್ಯಾಗರಾಜ್ ಸಾಥ್ ನೀಡಿದರು. ಕಾರ್ಯಕ್ರಮ ಅದ್ಬುತವಾಗಿತ್ತು. ಸಭಿಕರೆಲ್ಲ ನಿವೃತ್ತ ಜೀವನ ನಡೆಸುವ ಒಂದು ಗ್ರಾಮವನ್ನೇ ಕಟ್ಟಿಕೊಂಡಿರುವುದು ವಿಶೇಷ. ಇಲ್ಲಿ ಸುವಿಧಾ ಟ್ರಸ್ಟ್ ನ ಇನ್ನೂರು ಮನೆಗಳ ಕಾಟೇಜ್ ಗಳಿವೆ.
ವಯಸ್ಸಾದವರು ಇರುವ ಫಾರೀನ್ ಈ ಗ್ರಾಮ ಎಂದರೆ ತಪ್ಪಾಗಲಾರದು. ಭಾವಗೀತೆ, ಜನಪದ ಗೀತೆ, ಕನ್ನಡ ಭಾಷೆಯ ಹಿರಿಮೆಯ ಸಾರುವ ಗೀತೆಗಳ ಜತೆಗೆ ಸಭಿಕರು ಕೋರಿದ ಡಾ. ರಾಜ್ ಕುಮಾರ್ ಅವರ ಹಳೆಯ ಕನ್ನಡ ಚಿತ್ರಗೀತೆಗಳನ್ನು ಇಲ್ಲಿ ಹಾಡಲಾಯಿತು. ಒಟ್ಟಾರೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗಿತ್ರು.
ರವಿ ಅವರ ಸೌಂಡ್ಸ್ ನಿರ್ವಹಣೆ ಕೂಡ ಅತ್ಯುತ್ತಮ ವಾಗಿತ್ತು. ಮಧ್ಯೆ ಸ್ವಲ್ಪ ಮಳೆಯ ನಡುವೆಯೂ ಸಭಿಕರು ಹಾಡಿನ ಮಳೆಯಲ್ಲಿ ಮಿಂದೆದ್ದು ಇಳಿವಯಸ್ಸಿನವರು ಕೂಡ ಹಾಡುಗಳಿಗೆ ನೃತ್ಯ ಮಾಡಿದ್ದು ವಿಶೇಷವಾಗಿತ್ತು.