ಬೆಂಗಳೂರು: ಕಾರ್ತಿಕ ಸೋಮವಾರದ ಪ್ರಯುಕ್ತ ಗಣೇಶ ಗೌರವ ಸಮರ್ಪಣಾ ಕಾರ್ಯಕ್ರಮಕ್ಕೆ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರ ತಿರುಮಲ ತಿರುಪತಿ ಶ್ರೀಕ್ಷೇತ್ರದ ಟಿಟಿಡಿ ಬೋಡ್೯ ಸದಸ್ಯರಾಗಿ ಕರ್ನಾಟಕದಿಂದ ನೂತನವಾಗಿ ಆಯ್ಕೆಯಾಗಿರುವ ಶ್ರೀ ನರೇಶ್ ಕುಮಾರ್ ಅವರಿಗೆ ಹಾಗೆಯೇ ವಿಜಯರಾವ್ ಮತ್ತು ನಾರಾಯಣ ರಾವ್ ರವರಿಗೆ ಐತಿಹಾಸಿಕ ಬಸವನಗುಡಿ ದೊಡ್ಡಗಣಪತಿ ದೇವಸ್ಥಾನದ ಸನ್ನಿಧಿಯಲ್ಲಿ ಸನ್ಮಾನ,ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಬಸವನಗುಡಿಯ ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷರಾದ ಕೆ ವಿ ರಾಮಚಂದ್ರ ಮತ್ತು ಪ್ರಧಾನ ಅರ್ಚಕ ಹರೀಶ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಶ್ರೀಮನ್ ಮಾಧವತೀರ್ಥ ಶ್ರೀ ಮಠದ ಪರಮಪೂಜ್ಯ 108 ಶ್ರೀ ವಿದ್ಯಾಸಿಂಧು ಮಾಧವತೀರ್ಥರು ಮತ್ತು ಟಿಟಿಡಿ ಯ ನಿಕಟಪೂರ್ವ ಸದಸ್ಯರಾದ ಡಿಪಿ ಅನಂತ್, ಪತ್ರಕರ್ತ ಎನ್ ಎಸ್ ಸುಧೀಂದ್ರ ರಾವ್, ಪ್ರವೀಣ್ ರಾವ್ ಹಾಗೂ ಗುಂಡಣ್ಣ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.