ಹರಿದ್ವಾರ,ಋಷಿಕೇಶ ಗಂಗಾತೀರದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ

varthajala
0

 ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ ಕನ್ನಡ ಪುಸ್ತಕ ಮಳಿಗೆ ಆರಂಭಿಸಿ, ಮದುವೆ, ಗೃಹ ಪ್ರವೇಶಕ್ಕೆ ಉಡುಗೊರೆಯಾಗಿ ಕನ್ನಡ ಪುಸ್ತಕ ನೀಡಿ-ಚಲನಚಿತ್ರ ನಟ ನೆನಪಿರಲಿ ಪ್ರೇಮ್

*ಸಂಗೀತ, ಸಾಹಿತ್ಯದ ಕುರಿತು ಎಲ್ಲರು ಆಸಕ್ತಿ ಬೆಳಸಿಕೊಳ್ಳಿ- ಆಯುಕ್ತರು ಆರ್.ಎಲ್.ದೀಪಕ್*


ಉತ್ತರಖಂಡ್ :ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ.)ವತಿಯಿಂದ ಉತ್ತರಖಂಡ್‌ನ ಹರಿದ್ವಾರ ಮತ್ತು ಋಷಿಕೇಶದ ಸನ್ನಿಧಿಯಲ್ಲಿ *ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ* ಉದ್ಘಾಟನೆಯನ್ನು ಆದಾಯ ತೆರಿಗೆ ಇಲಾಖೆಯ ಆಯುಕ್ತರಾದ ಆರ್.ಎಲ್.ದೀಪಕ್ ರವರು 

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮುಖ್ಯ ಅತಿಥಿಗಳಾಗಿ ಮಾಜಿ ಮಹಾಪೌರರಾದ ಎಂ. ಗೌತಮ್ ಕುಮಾರ್, ,ಚಲನಚಿತ್ರ ನಟ ನೆನಪಿರಲಿ ಪ್ರೇಮ್ ,ಪಲಿಮಾರು ಮಠ ಪ್ರಬಂಧಕರು ಹರಿದ್ವಾರ್ ಹಾಗೂ ರಾಜ್ಯಾಧ್ಯಕ್ಷರು, ಹಿಂದು ರಕ್ಷಾ, ಸೇನಾ ಗೋ ಸೇವಾ ಸಮಿತಿಯ ಪ್ರಭಾಕರ್ ಮಂಜುನಾಥ್,ಮಹದೇವಪುರ ವಲಯ ಜಂಟಿ ಆಯುಕ್ತರಾದ ಡಾ|| ದಾಕ್ಷಾಯಿಣಿ, ಕೆ.ಎ.ಎಸ್,ವಕೀಲರಾದ  ವಿ. ಶ್ರೀನಿವಾಸ್, ಭೀಮಪುತ್ರಿ ಬ್ರಿಗೇಡ್ ಅಧ್ಯಕ್ಷರಾದ ಭೀಮಪುತ್ರಿ ರೇವತಿರಾಜ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.

*ಚಲನಚಿತ್ರ ನಟ ಪ್ರೇಮ್ ರವರು* ಮಾತನಾಡಿ ಕನ್ನಡ ಭಾಷೆಯನ್ನ ಪಸರಿಸುವ ಕಾರ್ಯ ಪ್ರತಿಯೊಬ್ಬರು ಮಾಡಬೇಕು. ಬೇರೆ ಭಾಷೆಯನ್ನ ದ್ವೇಷ ಮಾಡುವುದಿಲ್ಲ, ನಮ್ಮ ಭಾಷೆಯನ್ನ ಬಿಟ್ಟುಕೊಡಬಾರದು . ಬೆಂಗಳೂರಿನ ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕನ್ನಡ ಪುಸ್ತಕದ ಮಳಿಗೆ ತೆರೆಯಬೇಕು ಎಂದು ಆಯುಕ್ತರಿಗೆ ಮನವಿ ಮಾಡಲಾಗಿದೆ.

ಕನ್ನಡ ಸಾಹಿತ್ಯ ಮತ್ತು ಚಲನಚಿತ್ರ ರಂಗ ಉಳಿಯಬೇಕು ಎಂದರೆ ಪ್ರತಿಯೊಬ್ಬರು ಕನ್ನಡ ಪುಸ್ತಕ ಖರೀದಿಸಬೇಕು ಮತ್ತು ಚಲನಚಿತ್ರ ರಂಗಮಂದಿರಕ್ಕೆ ಬಂದು ಚಿತ್ರ ವೀಕ್ಷಣೆ ಮಾಡಬೇಕು ಕನ್ನಡ ಸಾಹಿತ್ಯ, ಚಲನಚಿತ್ರ ರಂಗ ಉಳಿಯುತ್ತದೆ.

ಮದುವೆ, ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಹೋಗುವವರು ಕನ್ನಡ ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಎಂದು ಹೇಳಿದರು.

*ಆಯುಕ್ತರಾದ ಆರ್.ಎಲ್.ದೀಪಕ್* ರವರು ಸಾಹಿತ್ಯ, ಸಂಗೀತದ ಆಸಕ್ತಿ ಎಲ್ಲರು ಬೆಳಸಿಕೊಳ್ಳಿ ಇದರಿಂದ ಮಾನಸಿಕವಾಗಿ ಸದೃಢವಾಗಿ ಇರಬಹುದು.

ಕನ್ನಡ ಭಾಷೆಯನ್ನು ಅತ್ಯಂತ ಸರಳ ಸುಂದರ ಆಡು ಭಾಷೆಯಾಗಿದೆ.ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಬಂದಿದೆ ಇದರಿಂದ ತಿಳಿಯುತ್ತದೆ ಕನ್ನಡ ಭಾಷೆ ಎಷ್ಟು ಶ್ರೀಮಂತವಾಗಿದೆ ಎಂದು ಹೇಳಿದರು.

*ಮಾಜಿ ಮಹಾಪೌರರಾದ ಗೌತಮ್ ಕುಮಾರ್ ರವರು* ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡಭಾಷೆ, ಸರಳ, ಸುಂದರ ಭಾಷೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ, ಕನ್ನಡ ನಾಡಿನಲ್ಲಿ ಹುಟ್ಟಲು ಏಳು ಜನ್ಮದ ಪುಣ್ಯ ಮಾಡಿರಬೇಕು.

ಬೆಂಗಳೂರುನಗರ ಅಭಿವೃದ್ದಿಗೆ ಮತ್ತು ಕನ್ನಡಿಗರ ಸೇವೆ ಮಾಡಲು ಬಿಬಿಎಂಪಿಯಲ್ಲಿ ಮಹಾಪೌರರಾಗಿ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದು ಪೂರ್ವ ಜನ್ಮದ ಪುಣ್ಯದ ಫಲ ಎಂದು ಹೇಳಿದರು.

*ಅಧ್ಯಕ್ಷರಾದ ಎ.ಅಮೃತ್ ರಾಜ್* ರವರು ಮಾತನಾಡಿ ಬಿಬಿಎಂಪಿಯಲ್ಲಿ ಸಂಪೂರ್ಣ ಆಡಳಿತ ವ್ಯವಹಾರ ಕನ್ನಡ ಭಾಷೆಯಲ್ಲಿ ನಡೆಯುತ್ತಿದೆ. ಕನ್ನಡ ಭಾಷೆ ವಿಶ್ವ ಭಾಷೆಯಾಗಬೇಕು, ಕನ್ನಡ ಸಂಸ್ಕೃತಿ ಎಲ್ಲರಿಗೂ ಪರಿಚಯವಾಗಬೇಕು ಎಂದು ಹೊರ ನಾಡಿನಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಅಚರಿಸಲಾಗುತ್ತಿದೆ.

ನಮ್ಮ ಸಂಘದಿಂದ ಕಾಶಿಯಲ್ಲಿ ರಾಷ್ಟ್ರೀಯ  ಮತ್ತು ನೇಪಾಳದಲ್ಲಿ ಅಂತರಾಷ್ಟ್ರೀಯ ಹಾಗೂ ಇದೀಗ  ಹರಿದ್ವಾರದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಅಚರಿಸಲಾಗುತ್ತಿದೆ.

ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಡಾ.ರಾಜ್ ಕುಮಾರ್ ಮತ್ತು ಡಾ.ಪುನೀತ್ ರಾಜ್ ಕುಮಾರ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. 

ಕನ್ನಡ ಭಾಷೆ ಉಳಿಸಿ, ಬೆಳಸಬೇಕು ಎಂದರೆ ಪ್ರತಿಯೊಬ್ಬರು ಕನ್ನಡದಲ್ಲಿ ಮಾತನಾಡಬೇಕು, ಕನ್ನಡದಲ್ಲಿ ವ್ಯವಹಾರಿಸಬೇಕು ಎಂದು ಹೇಳಿದರು.

ಬಿಬಿಎಂಪಿ ಅಧಿಕಾರಿ ಮತ್ತು ನೌಕರರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಖ್ಯಾತ ಗಾಯಕಿ ಎಂ.ಡಿ.ಪಲ್ಲವಿರವರಿಂದ  ಭಾವಗೀತೆ ಮತ್ತು ಕುಮಾರಿ ಭಾಗ್ಯಶ್ರೀ ಗೌಡರವರಿಂದ ಚಲನಚಿತ್ರ ಗೀತೆ ಕಾರ್ಯಕ್ರಮ.

ಹರಿದ್ವಾರದ ಕರ್ನಾಟಕ ರಾಜ್ಯೋತ್ಸವದಲ್ಲಿ ಉಪ ಆರೋಗ್ಯಧಿಕಾರಿ ಡಾ||ಸಂಧ್ಯಾ ಮತ್ತು ಆಡಳಿತಗಾರರ ಅಪ್ತ ಕಾರ್ಯದರ್ಶಿ ನಾರಾಯಣಸ್ವಾಮಿ , ಬಿಬಿಎಂಪಿ ನೌಕರರ ಕನ್ನಡ ಸಂಘದ ಅಧ್ಯಕ್ಷರಾದ ಸಾಯಿಶಂಕರ್ ರವರಿಗೆ ಗೌರವ ಸನ್ಮಾನ ಮಾಡಲಾಯಿತು.

ಸಂಘದ ಪದಾಧಿಕಾರಿಗಳಾದ ಬಾಬಣ್ಣ, ಡಾ.ಶೋಭಾ, ಡಿ.ರಾಮಚಂದ್ರ, ಕೆ.ಜಿ.ರವಿ, ರುದ್ರೇಶ್ ಬಿ., ಸೋಮಶೇಖರ್ ಎನ್.ಎಸ್., ಹೆಚ್.ಕೆ.ತಿಪ್ಪೇಶ್, ಹರೀಶ್ ಹೆಚ್.ಬಿ., ನರಸಿಂಹ, ಮಂಜೇಗೌಡ, ಆ‌ರ್.ರೇಣುಕಾಂಬ,ಎಸ್.ಜಿ.ಸುರೇಶ್, ಮಂಜುನಾಥ್, ಸಂತೋಷ್ ಕುಮಾರ್ ನಾಯ್ಕ, ಶ್ರೀಧರ್, ಸಂತೋಷ್ ಕುಮಾರ್ ರವರು ಉಪಸ್ಥಿತರಿದ್ದರು.

Post a Comment

0Comments

Post a Comment (0)