ಬಿಬಿಎಂಪಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸುವುದು ಅದರ ಜಾಯಮಾನದಲ್ಲಿ ಇಲ್ಲವೇ ಇಲ್ಲಾ!!! ಎಂಬುದು ಸುಳ್ಳಲ್ಲ?!

varthajala
0

 *ನಗರದ ರಾಜಾಜಿನಗರದಂತಹ ಪ್ರಮುಖ ವಾರ್ಡಿನಲ್ಲಿಯೇ, ದೂರು ನೀಡಿ ವಾರ ಕಳೆದರೂ... ಆ ಬಗ್ಗೆ ಗಮನವನ್ನು ನೀಡದ ಬಿಬಿಎಂಪಿಯ ಈ ಅಸಡ್ಡೆ ಧೋರಣೆ ಖಂಡನಾರ್ಹ. 


ಶ್ರೀ ಸಾಯಿ ದೇವಸ್ಥಾನದ ರಸ್ತೆಯಲ್ಲಿ, ಒಳಚರಂಡಿ ವ್ಯವಸ್ಥೆಯಲ್ಲಿ ಉಂಟಾಗಿರುವ ಸಮಸ್ಯೆಯಿಂದಾಗಿ, ಕೆಟ್ಟ ದುರ್ವಾಸನೆ ಬೀರುವ ಕೊಳಚೆ ನೀರು ರಸ್ತೆಯ ಮೇಲೆ ಉಕ್ಕಿ ಹರಿಯುತ್ತಾ ಈ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರಿಗೆ ಇದರಿಂದಾಗಿ ಬಹಳ ತೊಂದರೆ ಅನುಭವಿಸುವಂತಾಗಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೂ ಏನೂ ಪ್ರಯೋಜನವಿಲ್ಲಾ ಎಂದು ಸ್ಥಳೀಕರು ಪಾಲಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸಮೀಪದಲ್ಲೇ ನವರಂಗ್ ಡಯಾಗ್ನೋಸ್ಟಿಕ್ ಸೆಂಟರ್ ಇದ್ದು, ವೃದ್ಧರು ಮಕ್ಕಳಾದಿಯಾಗಿ ಆರೋಗ್ಯ ಸಮಸ್ಯೆಯ ಕಾರಣದಿ, ಅನೇಕ ಬಗೆಯ ತಪಾಸಣೆಗಾಗಿ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಈ ವಿಷಮ ಪರಿಸ್ಥಿತಿಯು ಮತ್ತಷ್ಟು  ಇನ್ಫೆಕ್ಷನ್ ಗೆ ದಾರಿಯಾಗುವಂತೆ ಮಾಡುವಲ್ಲಿ ತನ್ನದು ಒಂದು ಪಾಲಿರಲಿ ಎಂಬಂತಿದೆ!

  ಇದೇ ಜಾಗದ ಸಮೀಪ ಹೋಟೆಲ್ಗಳು ಇದ್ದು, ಇಲ್ಲಿ ಸಾರ್ವಜನಿಕರು ವಿಧಿ ಇಲ್ಲದೇ ಈ ಕೆಟ್ಟ ಪರಿಸ್ಥಿತಿಯಲ್ಲೇ ಆಹಾರ ಪಾನೀಯಗಳನ್ನು ಸೇವಿಸಬೇಕಾದ ಅನಿವಾರ್ಯತೆ. ಇದೇ ರಸ್ತೆ ದಾರಿಯಲ್ಲಿ ಕಾಲೇಜು ಇದ್ದು ಸಾವಿರಾರು ವಿದ್ಯಾರ್ಥಿಗಳೂ ಇಲ್ಲಿ ಹಾಡುಹೋಗುತ್ತಾರೆ. ಒಟ್ಟಾರೆ ಪಾಲಿಕೆ ಈ ಸಮಸ್ಯೆಗೆ ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತಗೋಳ್ಳೋಕೆ ಬಂತು ಎಂಬ ಗಾದೆ ಮಾತಿನಂತೆ ವರ್ತಿಸುತ್ತಿರುವುದಕ್ಕೆ ಬಹಳ ಖೇದವೆನಿಸುತ್ತಿದೆ.

Post a Comment

0Comments

Post a Comment (0)