ಹರಿದ್ವಾರ, ಋಷಿಕೇಶ ಗಂಗಾತೀರದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ*

varthajala
0

 *ನವೆಂಬರ್ 16ರಂದು ಉತ್ತರಖಂಡ್: ಹರಿದ್ವಾರ, ಋಷಿಕೇಶ ಗಂಗಾತೀರದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ*

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ.)ವತಿಯಿಂದ ಉತ್ತರಖಂಡ್‌ನ ಹರಿದ್ವಾರ ಮತ್ತು ಋಷಿಕೇಶದ ಸನ್ನಿಧಿಯಲ್ಲಿ “ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ"

ನವೆಂಬರ್ ದಿನಾಂಕ : 16-11-2024ರ ಶನಿವಾರ ಸಂಜೆ 4ಗಂಟೆಗೆ  ಉತ್ತರಖಂಡ್‌ನ ಹರಿದ್ವಾರದ ಗಂಗಾನದಿ ತೀರದಲ್ಲಿ ಜರುಗಲಿದೆ ಇದರ ಕುರಿತು ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. 

ಹರಿದ್ವಾರ, ಋಷಿಕೇಶ ಗಂಗಾತೀರದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವನ್ನು ಅಚರಿಸಲಾಗುತ್ತಿದೆ ಇದರ ಉದ್ಘಾಟನೆಯನ್ನು ಆದಾಯ ತೆರಿಗೆ ಇಲಾಖೆಯ ಆಯುಕ್ತರಾದ ಆರ್.ಎಲ್.ದೀಪಕ್ ರವರು 

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು

ಮುಖ್ಯ ಅತಿಥಿಗಳಾಗಿ ಮಾಜಿ ಮಹಾಪೌರರಾದ ಎಂ. ಗೌತಮ್ ಕುಮಾರ್ ,ಚಲನಚಿತ್ರ ನಟ ನೆನಪಿರಲಿ ಪ್ರೇಮ್ ,ಪಲಿಮಾರು ಮಠ ಪ್ರಬಂಧಕರು ಹರಿದ್ವಾರ್ ಹಾಗೂ ರಾಜ್ಯಾಧ್ಯಕ್ಷರು, ಹಿಂದು ರಕ್ಷಾ, ಸೇನಾ ಗೋ ಸೇವಾ ಸಮಿತಿಯ ಪ್ರಭಾಕರ್ ಮಂಜುನಾಥ್

ಮಹದೇವಪುರ ವಲಯ ಜಂಟಿ ಆಯುಕ್ತರಾದ ಡಾ|| ದಾಕ್ಷಾಯಿಣಿ, ಕೆ.ಎ.ಎಸ್,ವಕೀಲರಾದ  ವಿ. ಶ್ರೀನಿವಾಸ್,ಭೀಮಪುತ್ರಿ ಬ್ರಿಗೇಡ್ ಅಧ್ಯಕ್ಷರಾದ ಭೀಮಪುತ್ರಿ ರೇವತಿರಾಜ್ ರವರು ಉದ್ಘಾಟನೆ ನೇರವೆರಿಸುವರು.

ಬಿಬಿಎಂಪಿ ಅಧಿಕಾರಿ ಮತ್ತು ನೌಕರರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಖ್ಯಾತ ಗಾಯಕಿ ಎಂ.ಡಿ.ಪಲ್ಲವಿರವರಿಂದ  ಭಾವಗೀತೆ ಮತ್ತು ಕುಮಾರಿ ಭಾಗ್ಯಶ್ರೀ ಗೌಡರವರಿಂದ ಚಲನಚಿತ್ರ ಗೀತೆ ಕಾರ್ಯಕ್ರಮ.

ಹರಿದ್ವಾರದ ಕರ್ನಾಟಕ ರಾಜ್ಯೋತ್ಸವದಲ್ಲಿ ಉಪ ಆರೋಗ್ಯಧಿಕಾರಿ ಡಾ||ಸಂಧ್ಯಾ ಮತ್ತು ಆಡಳಿತಗಾರರ ಅಪ್ತ ಕಾರ್ಯದರ್ಶಿ ನಾರಾಯಣಸ್ವಾಮಿ , ಬಿಬಿಎಂಪಿ ನೌಕರರ ಕನ್ನಡ ಸಂಘದ ಅಧ್ಯಕ್ಷರಾದ ಸಾಯಿಶಂಕರ್ ರವರಿಗೆ ಗೌರವ ಸನ್ಮಾನ ಮಾಡಲಾಗುತ್ತದೆ.

ಕನ್ನಡ ನಾಡಿನ ನಾಡು, ನುಡಿ ಸಂಸ್ಕೃತಿಯನ್ನು ಹೊರ ರಾಜ್ಯ ದೇಶದವರಿಗೆ ಪರಿಚಯಿಸಬೇಕು ಹಾಗೂ ಹೊರ ನಾಡ ಕನ್ನಡಿಗರ ಸಂಘಟನೆ ನಮ್ಮ ಕಲೆ, ಸಂಸ್ಕೃತಿ ಮಾತೃಭಾಷೆ ಮರೆಯಬಾರದು.

ಕಾಶಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು ನೇಪಾಳದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಅಚರಿಸಲಾಯಿತು ಇದೀಗ ಹರಿದ್ವಾರದಲ್ಲಿ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

Post a Comment

0Comments

Post a Comment (0)