ಮಕ್ಕಳ ದಿನಾಚರಣೆ ಪ್ರಯುಕ್ತ "ನಿಮ್ಮ ಕನಸುಗಳನ್ನು ಮೂಡಿಸಿ" ಕಾರ್ಯಕ್ರಮ

varthajala
0

ಬೆಂಗಳೂರು, ನವೆಂಬರ್ 19, 2024: ಫಂಡ್ ಎ ಚೈಲ್ಡ್ ಇನ್ ಇಂಡಿಯಾ ಸಂಸ್ಥೆಯು 2024 ರ ನವೆಂಬರ್ 17 ರಂದು ಬೆಂಗಳೂರಿನ ವಂಡರ್ಲಾ ಪಾರ್ಕ್ಸ್ ಮತ್ತು ರೆಸಾರ್ಟ್ಸ್‌ನಲ್ಲಿ ತನ್ನ  "ಡ್ರಾ ಯುವರ್ ಡ್ರೀಮ್ಸ್" (ನಿಮ್ಮ ಕನಸುಗಳನ್ನು ಮೂಡಿಸಿ)- ಡ್ರಾಯಿಂಗ್ ಸ್ಪರ್ಧೆಯ ಮೂಲಕ ಮಕ್ಕಳ ದಿನಾಚರಣೆಯನ್ನು  ಆಚರಿಸಿತು. 


ಆರ್ಕ್ ಆಫ್ ರೇನ್‌ಬೋ, ಡಾ. ಅಂಬೇಡ್ಕರ್ ಫೌಂಡೇಶನ್, ಇಕೋ ಫೌಂಡೇಶನ್ ಮತ್ತು ಸಮರ್ಥನಂ ಎಂಬ ಎನ್‌ಜಿಒಗಳ ಸಹಭಾಗಿತ್ವದಲ್ಲಿ  5 ರಿಂದ 10 ನೇ ತರಗತಿಯಲ್ಲಿ ಓದುತ್ತಿರುವ 303 ಮಕ್ಕಳು ತಮ್ಮ ಕನಸುಗಳನ್ನು ಚಿತ್ತಾರ ಬಿಡಿಸಿದ್ದರು. ಈ ಮಕ್ಕಳ ಪ್ರತಿಭೆ ನಿಜಕ್ಕೂ ಅಚ್ಚರಿದಾಯಕವಾಗಿತ್ತು. ಈ ಚಂದದ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ನಡೆದ ಈ ಕಾರ್ಯಕ್ರಮವು ಮಕ್ಕಳ ಸೃಜನಶೀಲತೆಯನ್ನು ಮತ್ತಷ್ಟು ಹೆಚ್ಚಿಸುವ ಕಾರ್ಯ ಮಾಡಿತು. ಈ ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ಸ್ವಯಂಸೇವಕರು ಇದ್ದರು. 


ಈ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ನಾವು ವಂಡರ್ಲಾ ಹಾಲಿಡೇಸ್ ಲಿಮಿಟೆಡ್‌ ಗೆ ಧನ್ಯವಾದ ಸಮರ್ಪಿಸಲಾಯಿತು. ಮುಖ್ಯ ಅತಿಥಿ ಡಾ. ಸಾಕೆ ಶಾಮು,ಸಹ-ಪ್ರಾಯೋಜಕರಾದ ಬೆಟರ್ ವರ್ಲ್ಡ್ ಮತ್ತು ಇತರ ಪ್ರಾಯೋಜಕರು ಇದ್ದರು

Post a Comment

0Comments

Post a Comment (0)