ನ್ಯಾಷನಲ್ ಕಾಲೇಜಿನ 13ನೇ ಘಟಿಕೋತ್ಸವ: 16 ಚಿನ್ನದ ಪದಕ, 485 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

varthajala
0

 ಬೆಂಗಳೂರು, 24 : JAYANAGARAಜಯನಗರ ನ್ಯಾಷನಲ್ ಕಾಲೇಜಿನಲ್ಲಿ NATIONAL COLLEGE ಆಯೋಜಿಸಿದ್ದ 13ನೇ ಘಟಿಕೋತ್ಸವದಲ್ಲಿ ಕಾಲೇಜಿನ ವಿವಿಧ ವಿಭಾಗದ ಒಟ್ಟು ಹದಿನಾರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 485 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಎಂಕಾಂಗಣಿತಭೌತಶಾಸ್ತ್ರ ವಿಭಾಗದ 52 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಹಾಗೂ 433 ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆದುಕೊಂಡರು.

 

ಘಟಿಕೋತ್ಸವ ಭಾಷಣ ಮಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ JAYAKAR SHETTY ಡಾ. ಎಂ. ಜಯಕರ ಶೆಟ್ಟಿಶಿಕ್ಷಣ ಪಡೆಯುವುದಷ್ಟೇ ಅಲ್ಲದೇ ವಿದ್ಯಾರ್ಥಿಗಳ ಕೆಲಸವಲ್ಲ. ಬದುಕಿನಲ್ಲಿ ಉತ್ಕೃಷ್ಟ ಸಾಧನೆ ಮಾಡಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಅತ್ಯುತ್ತಮ ಶಿಕ್ಷಣ ವ್ಯವಸ್ಥೆಯಿದ್ದುಇದರಿಂದ ವ್ಯಾಪಕ ಪರಿವರ್ತನೆ ತರಲು ಸಾಧ್ಯವಾಗಲಿದೆ. ಮುಂದಿನ ಪೀಳಿಗೆಯ ವಿದ್ಯಾರ್ಥಿಗಳನ್ನು ಜಾಗತಿಕ ಸವಾಲುಗಳಿಗೆ ಸಜ್ಜುಗೊಳಿಸಲು ಸಹಕಾರಿಯಾಗಲಿದೆ. ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಿ ನಗರ ವಿದ್ಯಾರ್ಥಿಗಳಿಗೆ ಸರಿ ಸಮನಾಗಿ ಸ್ಪರ್ಧೆಗೆ ಅಣಿಗೊಳಿಸಬೇಕು ಎಂದರು. ಶಿಕ್ಷಣವೆಂದರೆ ಕೇವಲ ಪ್ರಮಾಣಪತ್ರಗಳುಚಿನ್ನದ ಪದಕಗಳಲ್ಲನಿಮಗೆ ಶಿಕ್ಷಕರು ಸೂಕ್ತ ರೀತಿಯಲ್ಲಿ ಮಾರ್ಗದರ್ಶನ  ಮಾಡಿದ್ದುನಿಮ್ಮ ಪಾಲಕರು ನಿಮಗಾಗಿ ಹೆಚ್ಚಿನ ತ್ಯಾಗ ಮಾಡಿದ್ದಾರೆ. ನೈತಿಕ ಶಿಕ್ಷಣ ನಿಮಗೆ ಭದ್ರ ಬುನಾದಿಯಾಗಬೇಕು. ಇಂದು ನೀವು ಪದವಿಯನ್ನಷ್ಟೇ ಪಡೆದಿಲ್ಲ. ಬದಲಿಗೆ ಸಮಾಜದ  ಅತಿದೊಡ್ಡ ಜವಾಬ್ದಾರಿಯ ಪಾಲುದಾರರಾಗುತ್ತಿದ್ದೀರಿ ಎಂದರು.        

ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಿದ ಗಾಂಧಿನಗರದ ರಾಷ್ಟ್ರೀಯ ವಿಧಿ ವಿಜ್ಞಾನ ವಿವಿ ಅಧ್ಯಾಪಕರ ವಿಭಾಗದ ಮುಖ್ಯಸ್ಥರು ಹಾಗೂ 32 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ, 600 ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ರಚಿಸಿರುವಫ್ಲೋರಿಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಪ್ರೊ. ಸುಂದರಾಜ ಸೀತಾರಾಮ ಅಯ್ಯಂಗಾರ್ ನ್ಯಾಷನಲ್ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿನ ದೂರದೃಷ್ಟಿಯ ಜೊತೆಗೆವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ತುಂಬಿದೆ. ಮುಂದೆ ನೀವೆಲ್ಲರೂ ಉತ್ತಮ ಸಮಾಜದ ಬದಲಾವಣೆಗೆ ಮುನ್ನುಡಿ ಬರೆಯಬೇಕು ಎಂದರು. ಅಪರಾಧ ವಿಜ್ಞಾನ ಅತ್ಯಂತ ವ್ಯಾಪಕವಾಗಿ ಬೆಳವಣಿಗೆಯಾಗಿದ್ದುವಿದ್ಯಾರ್ಥಿಗಳಿಗೆ ವಿಪುಲ ಅವಕಾಶಗಳನ್ನು ಕಲ್ಪಿಸುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.



 

 

ಎನ್ ಇಎಸ್ ಆಫ್ ಕರ್ನಾಟಕ ಅಧ್ಯಕ್ಷರಾದ ಡಾ.ಎಚ್.ಎನ್.ಸುಬ್ರಮಣ್ಯಎನ್ ಇಎಸ್ ಆಫ್ ಕರ್ನಾಟಕ ಗೌರವ ಕಾರ್ಯದರ್ಶಿಡಾ.ಎಚ್. ಎನ್. ಎನ್.ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷರಾದ ವಿ.ವೆಂಕಟಶಿವಾ ರೆಡ್ಡಿ,  ಎನ್ ಇ ಎಸ್ ಕಾರ್ಯದರ್ಶಿ ಬಿ.ಎಸ್.ಅರುಣ್ ಕುಮಾರ್ಜಂಟಿ ಕಾರ್ಯದರ್ಶಿ ಸುಧಾಕರ ಇಸ್ತೂರಿಕೋಶಾಧಿಕಾರಿ ತಲ್ಲಮ್ ಆರ್.ದ್ವಾರಕನಾಥ್ಚೇರ್ಮನ್ ಡಾ. ಪಿ.ಎಲ್.ವೆಂಕಟರಾಮ ರೆಡ್ಡಿಅಸೋಸಿಯೇಟ್‌ ಉಪಾಧ್ಯಕ್ಷರಾದವಿ. ಮಂಜುನಾಥ್ಪ್ರಾಂಶುಪಾಲರಾದ ಡಾ.ಪಿ.ಎಲ್.ರಮೇಶ್ಕಾಲೇಜ್ ಕೌನ್ಸಿಲ್ ಸೆಕ್ರೆಟರಿ ಪ್ರೊ.ಚೆಲುವಪ್ಪಅಧ್ಯಾಪಕರು ಭಾಗವಹಿಸಿದ್ದರು.


Post a Comment

0Comments

Post a Comment (0)