ಸ್ವಾತಂತ್ರ ಹೋರಾಟಗಾರ, ಸಹಕಾರ ದುರೀಣ, ಮಾಜಿ ಶಾಸಕ ದಿ. ಕೆ.ಎ.ಶೇಖ್ ರವರ 124ನೇ ಜಯಂತ್ಯೋತ್ಸವ

varthajala
0

ದಿಶಾ ಚಾರಿಟಿಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ಕಂಡ ಅಪರೂಪದ ರಾಜಕಾರಣಿ, ಸ್ವಾತಂತ್ರ ಹೋರಾಟಗಾರರು ಸಹಕಾರ ದುರೀಣರು ಮತ್ತು ಮಾಜಿ ಶಾಸಕರು ಆದ ದಿವಂಗತ ಕೆ.ಎ.ಶೇಖ್ ರವರ 124ನೇ ಜಯಂತ್ಯೋತ್ಸವ ಬೆಂಗಳೂರು ನಗರದ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ವಿಜೃಂಭಣೆಯಿ0ದ ಆಚರಿಸಿತು. 




ಕಾರ್ಯಕ್ರಮವನ್ನು ವಿಧಾನಪರಿಷತ್‌ನ ಸದಸ್ಯರು ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶ್ರೀ ಕೆ.ಅಬ್ದುಲ್ ಜಬ್ಬಾರ್ ರವರು ಉದ್ಭಾಟನೆ ಮಾಡಿದರು. ಉದ್ಭಾಟನೆ ಭಾಷಣದಲ್ಲಿ ಮಾತನಾಡುತ್ತಾ ದಿ.ಕೆ.ಎ.ಶೇಖ್ ರವರು ದೇಶಾಭಿಮಾನ ಮತ್ತು ಅವರು ನೈತಕತೆ ನೆಲಗಟ್ಟಿನಲ್ಲಿ ಮಾಡಿದ ರಾಜಕರಣ ಇಂದಿನ ಯುವ ಪಿಳಿಗಿಗೆ ಪ್ರಸ್ತುತವಾಗಿದೆ. ಮಹಾತ್ಮಗಾಂಧಿಜೀಯವರು ಬೆಳಗಾವಿಯಲ್ಲಿ 1924ರಲ್ಲಿ ಜರುಗಿದ ಕಾಂಗ್ರೆಸ್‌ನ ಮಹಾ ಅಧಿವೇಶನದಲ್ಲಿ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಆ ಕಾರ್ಯಕ್ರಮದ ಸಂಘಟಕರಾಗಿದ್ದ ಹುದಲಿ ಗ್ರಾಮದ ದಿ.ಗಂಗಾಧರರಾವ್ ದೇಶಪಾಂಡೆ ರವರು. ಗರಡಿಯಲ್ಲಿ ಪಳಗಿದ್ದಂತಹ ಶೇಖ್ ರವರು ಎಲ್ಲ ಸಮುದಾಯದ ನಾಯಕರಾಗಿದ್ದರು. ಸ್ವಾತಂತ್ರ÷್ಯ ಹೋರಾಟದಲ್ಲಿ ಬೆಳಗಾವಿಯಲ್ಲಿ ಮುಂಚೂಣಿಯಲ್ಲಿದ್ದು ಅನೇಕ ನಾಯಕರುಗಳ ಜೊತೆ ಸೇರಿ ಆ ಭಾಗದಲ್ಲಿ ಸ್ವಾತಂತ್ರ÷್ಯದ ಕಿಚ್ಚನ್ನು ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ಹೋರಾಟ ಸತ್ಯ ನಿಷ್ಟೆ, ಮತ್ತು ನೈತಿಕತೆಯ ಅಡಿಯಲ್ಲಿ ಮಾಡಿದ ರಾಜಕರಣ ಅವರು ನಡೆದು ಬಂದ ಜೀವನವನ್ನು ಒಂದು ಪುಸ್ತಕದ ರೂಪದಲ್ಲಿ ಬಂದರೆ ಇಂದಿನ ಪಿಳಿಗಿಗೆ ಅವರ ಬಗ್ಗೆ ತಿಳಿಯಲು ಸಹಾಯವಾಗುತ್ತದೆ. 

ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಧಾನಪರಿಷತ್‌ನ ಸದಸ್ಯರು ಮತ್ತು ಕೆಪಿಸಿಸಿ. ವಕ್ತರರಾದ ಶ್ರೀ ನಾಗರಾಜ್ ಯಾದವ್ ಬೆಳಗಾವಿ ಜಿಲ್ಲೆಯಲ್ಲಿ ಸ್ವತಂತ್ರ÷್ಯ ಹೋರಾಟಕ್ಕೆ ನಾಯಕತ್ವ ನೀಡಿದ ಶೇಖ್ ಸಾಹೇಬರು ರಾಷ್ಟçಮಟ್ಟದಲ್ಲಿ ಬಹಳಷ್ಟು ನಾಯಕರ ಒಡನಾಟ ಹೊಂದಿದ್ದರು. ಅವರ ಗ್ರಾಮಕ್ಕೆ ಬಾಲಗಂಗಾಧರ ತಿಲಕ್ ರವರನ್ನು ಕರೆಸಿದ್ದು ಒಂದು. ಇತಿಹಾಸ ಅವರ ಮಾಡಿದ ಸೇವ ಕಾರ್ಯ ಮತ್ತು ಮೌಲ್ಯದಾರಿತ ರಾಜಕರಣವನ್ನು ಅವರ ಶಾಸಕರಾಗಿದ್ದಾಗ ಅವರ ನಡಾವಳಿಗಳು, ಕಾರ್ಯವೈಖರಿಯನ್ನು ಕರ್ನಾಟಕ ಸಚಿವಾಲಯ ಪ್ರಕಟಿಸಬೇಕೆಂದರು. 

 ಬೆಳಗಾವಿಯಲ್ಲಿ ಜರುಗಿದ 1924ರ ಕಾಂಗ್ರೆಸ್‌ನ ಮಹಾಧಿವೇಶನಕ್ಕೆ 100 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಅವರ ದೇಶಕ್ಕೆ ಮಾಡಿದ ಹೋರಾಟವನ್ನು ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರ ಸ್ಮರಿಸಬೇಕೆಂದರು. ಅಪ್ಪಟ ಗಾಂಧಿವಾದಿಗಳಾಗಿದ್ದ ಅವರ ತತ್ವ ಸಿದ್ದಾಂತಗಳನ್ನು ಇವತ್ತಿನ ದ್ವೇಷ ಅಸೂಯೆ ಮತ್ತು ಮನುಷ್ಯರನ್ನು ಜಾತಿ ಧರ್ಮದ ಆಧಾರದ ಮೇಲೆ ಒಡೆಯುತ್ತಿರುವ ಶಕ್ತಿಗಳನ್ನು ದೂರವಿಡಲು ಅವರ ಸಿದ್ದಾಂತವನ್ನು ಯುವಜನರಲ್ಲಿ ತಿಳಿಸಬೇಕೆಂದು ಹೇಳಿದರು. 

ಇದೇ ಸಂದರ್ಭದಲ್ಲಿ ಅವರ ಮೊಮ್ಮಗನಾದ ಹೈಕೋರ್ಟ್ನ ಖ್ಯಾತ ವಕೀಲ ಡಾ.ಎಸ್.ಬಿ.ಶೇಖ್ ರವರು ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಮತ್ತು ಪಾಶ್ಚಪೂರ ಸಹಕಾರಿ ಬ್ಯಾಂಕ್‌ನ ಸಂಸ್ಥಾಪಕರಾಗಿ ಗಣನೀಯವಾಗಿ ಸೇವೆ ಸಲ್ಲಿಸಿದ್ದಾರೆ. ಅಂದಿನ ಕೇಂದ್ರ ಸಚಿವರಾದ ದಿವಗಂತ ಬಿ.ಶಂಕರಾನ0ದ ಮಾಜಿ ಸಂಸದ ನಾಗನೂರು, ಮಾಜಿ ಶಾಸಕರು ಆದ ಟಕ್ಕೇದ್ ರವರು ಶಿಷ್ಯಂದರು ಆಗಿದ್ದರು ಎಂದು ಸ್ಥರಿಸಿದರು. ಮತ್ತೊಬ್ಬ ಮೊಮ್ಮಗ ಶ್ರೀ ನಜೀರ್‌ಶೇಖ್, ಮಾಜಿ ಅಧ್ಯಕ್ಷರು ಗೋಕಾಕ್ ನಗರ ಸಭೆ. ಅವರು ಈ ಸಂದರ್ಭದಲ್ಲಿ ಮಾತನಾಡಿದರು. ಇನ್ನಿತರ ಮುಖಂಡರುಗಳು ಸಭೆಯಲ್ಲಿ ಉಪಸ್ಥಿತರಿದ್ದರು. ದಿಶಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಇರ್ಷಾದ್ ಅಹಮ್ಮದ್ ಶೇಖ್ ರವರು ಸ್ವಾಗತ ಭಾಷಣ ಮಾಡಿದರು. ಜಯಂತ್ಯೋತ್ಸವದ ಅಂಗವಾಗಿ ದೇಶಭಕ್ತಿ ಹಾಗೂ ಕನ್ನಡ ನಾಡಿ ನುಡಿ ಬಗ್ಗೆ ಸಾಂಸ್ಕತಿಕ ಕಾರ್ಯಕ್ರಮಗಳು ಒರುಗಿದೆವು. ಬಸವರಾಜು ರವರು ಕಾರ್ಯಕ್ರಮ ನಿರೂಪಿಸಿದರು. ಶ್ರೀ ಡಿ.ಶ್ರೀನಾಥ್ ರವರು ವಂದಿಸಿದರು

Post a Comment

0Comments

Post a Comment (0)