ದಾಸರೆಂದರೆ ಪುರಂದರ ದಾಸರಯ್ಯ ಎಂದು ಗುರು ವ್ಯಾಸರಾಯರಿಂದ ಪ್ರಶಂಸಿಸಲ್ಪಟ್ಟ ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಕುರಿತಾದ ಹರಿದಾಸರ ದಿನಚರಿ ಚಲನಚಿತ್ರದ ಪ್ರೀಮಿಯರ್ ಶೋ ನೋಡಿ ಬಂದೆ . ಇತ್ತೀಚೆಗೆ ಉಡುಪಿಯಲ್ಲಿ ಟ್ರೈಲರ್ ಬಿಡುಗಡೆಯಲ್ಲಿ ಪರಿಚಿತಗೊಂಡ ಈ ಚಿತ್ರದ ಪರಿಕಲ್ಪನೆಯ ರೂವಾರಿ ಗಿರೀಶ ನಾಗರಾಜರಿತ್ತ ಆಹ್ವಾನ
ಸಂಗೀತ ಕಲಾ ನಿಧಿ ಡಾ.ವಿದ್ಯಾಭೂಷಣರ ಗಾನ ಮಾಧುರ್ಯ ಅಭಿನಯಚಾತುರ್ಯ ಈ ಚಿತ್ರದ ನಾದಯಾನದಲ್ಲಿ ನಮ್ಮನ್ನು ಅಪೂರ್ವ ಭಾವ ಲೋಕಕ್ಕೆ ಕರೆದೊಯ್ಯುತ್ತದೆ
ಡಿಸೆಂಬರ್ 5ರಂದು ತೆರೆ ಕಾಣಲಿರುವ ಸೀನಪ್ಪ ನಾಯಕನ ಸಿನಿ ಪಯಣ ಯಶಸ್ವಿಯಾಗಲಿ
ಶಾಲಾ ದಿನಗಳಲ್ಲಿ ನೋಡಿದ ಜೀವಿ ಅಯ್ಯರ್ ನಿರ್ದೇಶನದ ಶ್ರೀ ಮಧ್ವಾಚಾರ್ಯರು ಚಿತ್ರದಲ್ಲಿ ಪೂರ್ಣಪ್ರಜ್ಞರಾಗಿ ಅಭಿನಯಿಸಿದ ಪ್ರಭಾತ್ ಕಲಾವಿದರು ಹಿರಿಯ ನಟ ಡಾ. ಪೂರ್ಣಪ್ರಸಾದ್ ಜೊತೆಗೂಡಿದರು
ಪ್ರಿಯ ಬಂಧು ಕಲಾ ದಂಪತಿಗಳಾದ ಸ್ಮೃತಿ ಹರಿತಸ್ ಮತ್ತು ಶ್ರೀಕಾಂತ 'ಆಡಿಸಿದಳು ಯಶೋಧೆ' ಕೃತಿಗೆ ಭಾವಪೂರ್ಣ ಅಭಿನಯ ನೀಡಿರುವುದು ಕಾಕೋಳು ಕುಟುಂಬಕ್ಕೆ ಹೆಮ್ಮೆ.
ಬೆಂಗಳೂರು ನ್ಯಾಷನಲ್ ಕಾಲೇಜು ಎದುರಿನ ಉತ್ತರಾದಿ ಮಠದ ದಿಗ್ವಿಜಯ ನರಸಿಂಹ ದೇವಾಲಯದ ಮುಂಭಾಗ ಶ್ರೀನಿವಾಸ ಉತ್ಸವ ಬಳಗದ ರೂವಾರಿ ಟಿ ವಾದಿರಾಜರ ಸಂಕಲ್ಪ ಬೃಹತ್ ಪುರಂದರ ದಾಸರ ಏಕಶಿಲಾ ಪ್ರತಿಮೆಯನ್ನು ಸಾಕಾರಗೊಳಿಸಿದ ಕೆ.ಆರ್ ಗುರುರಾಜ ರಾವ್.
, purandaradasa.co. in ಮೂಲಕ ದಾಸರ ಸಾರಸ್ವತ ಸೇವೆ ಮಾಡುತ್ತಿರುವ ಅನಂತ್ ರಾವ್ ದಂಡಿನ್ ಜೊತೆಯ ಚಿತ್ರ ಪಟ.