ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಡಾ||ಸಿ.ಬಿ.ಕುಲಿಗೋಡ, ಬೆಳಗಾವಿರವರು ನೇಮಕ

varthajala
0

ಬೆಂಗಳೂರು: ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದ ಜಿ.ಎಸ್.ಮಂಜುನಾಥ್ ರವರು ರಾಜ್ಯ ಉಪಾಧ್ಯಕ್ಷರಾಗಿ ಡಾ||ಸಿ.ಬಿ.ಕುಲಿಗೋಡ, ಬೆಳಗಾವಿರವರನ್ನು ನೇಮಕ ಮಾಡಿ ಆದೇಶ ಪತ್ರ ನೀಡಿದರು.

ಬೆಳಗಾಂ ಜಿಲ್ಲೆಯಿಂದ ಅಸಂಖ್ಯಾತ ಕಾರ್ಮಿಕರು ಮತ್ತು ಕಾಂಗ್ರೆಸ್ ಪಕ್ಷದ  ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್ ರವರು ಮಾತನಾಡಿ  ಅಸಂಘಟಿತ ಕಾರ್ಮಿಕ ವಿಭಾಗ 1999ರಲ್ಲಿ ರಾಹುಲ್ ಗಾಂಧಿರವರ ನಾಯಕತ್ವದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸಂಘಟನೆ ರೂಪಿಸಲಾಯಿತು.

ದೇಶದಲ್ಲಿ ಶೇಕಡ 35ರಷ್ಟು ಅಂದಾಜು 30ರಿಂದ 35ಕೋಟಿ ಜನ ಇದ್ದಾರೆ. ಚಿಕ್ಕ, ಚಿಕ್ಕ ಕೆಲಸ ಮಾಡುವವರನ್ನ ಅಸಂಘಟಿತ ಕಾರ್ಮಿಕರು ಎಂದು ಗುರುತಿಸಲಾಗಿದೆ.


ಕಾರು, ಆಟೋ ಚಾಲಕರು, ಹಮಾಲಿ ಕೆಲಸ, ಚಮ್ಮಾರ, ಕಟ್ಟಡ ಕಾರ್ಮಿಕರು ಸರಿಸಮಾರು 49 ಉದ್ಯೋಗಿಗಳನ್ನು ಅಸಂಘಟಿತ ಕಾರ್ಮಿಕರು ಎಂದು ಗುರುತಿಸಲಾಗಿದೆ. ಅಂತರಜಾತಿ ವಿವಾಹ, ವಿಧವಾ ವೇತನ ಮತ್ತು ಸಾಲಸೌಲಭ್ಯ, ವಿದ್ಯಾರ್ಥಿಗಳ ಶಿಕ್ಷಣ ಹಾಗೂ ವಿವಿಧ ಸೌಲಭ್ಯಗಳು ರಾಜ್ಯ ಕಾರ್ಮಿಕ ಇಲಾಖೆ ಸಿಗುತ್ತಿದೆ.

ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರ ನೇತೃತ್ವದಲ್ಲಿ ರಾಜ್ಯಾದ್ಯಂತ ಅಸಂಘಟಿಕ ಕಾರ್ಮಿಕರನ್ನು ಗುರುತಿಸಿ, ರಾಜ್ಯ ಸರ್ಕಾರ ಯೋಜನೆಗಳನ್ನು ತಲುಪಿಸಿ ಕಾಂಗ್ರೆಸ್ ಪಕ್ಷದ ಸದಸ್ಯರನ್ನಾಗಿ ಮಾಡುವ ಜವಾಬ್ಬಾರಿ ನಮ್ಮ ಮೇಲಿದೆ ಎಂದು ಹೇಳಿದರು. 

ರಾಜ್ಯ ಉಪಾಧ್ಯಕ್ಷರಾದ ಡಾ||ಸಿ.ಬಿ.ಕುಲಿಗೋಡ ಬೆಳಗಾವಿರವರು ಮಾತನಾಡಿ ತರಕಾರಿ ವ್ಯಾಪಾರ, ಬೀದಿ ಬದಿಯ ವ್ಯಾಪಾರಿಗಳು, ಕಬ್ಬಿನ ಕಾರ್ಖಾನೆ ವಿವಿಧ ಕೆಳಹಂತದಲ್ಲಿ ಕೆಲಸ ಮಾಡುವವರನ್ನ ಗುರುತಿಸಿ ಅವರನ್ನ ಆರ್ಥಿಕವಾಗಿ ಸಬಲರಾಗಿ ಮಾಡುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಯೋಜನೆಗಳು ಸಹಕಾರಿಯಾಗಿದೆ.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ಸಚಿವರುಗಳಾದ ಸತೀಶ್ ಜಾರಕಿಹೊಳಿ, ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದ ಜಿ.ಎಸ್.ಮಂಜುನಾಥ್ ರವರ ನೇತೃತ್ವದಲ್ಲಿ ಅಸಂಘಟಿತ ಕಾರ್ಮಿಕರನ್ನು ಸಂಘಟನೆ ಮಾಡಿ, ಕಾಂಗ್ರೆಸ್ ಪಕ್ಷ ಬಲಪಡಿಸಲು ಹಗಲಿರುಳು ಶ್ರಮಿಸುತ್ತೇನೆ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಾಂಧಿ, ಸಾಮಾಜಿಕ ಜಾಲತಾಣದ ದೀಪಕ್ ತಿಮ್ಮಯ್ಯ, ಕೇಂದ್ರ ಜಿಲ್ಲಾ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ರಿಚರ್ಡ್ ಬರ್ಟನ್, ರಾಮು ರಾಜ್ಯ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ರೆಡ್ಡಿ  ರಾಜ್ಯ ಸಂಯೋಜಕರಾದ ರಾಕೇಶ್ ರವರು ಉಪಸ್ಥಿತರಿದ್ದರು.

Post a Comment

0Comments

Post a Comment (0)