ನವರಾತ್ರಿ ನಂದಿನಿ ಉತ್ಸವಕ್ಕೆ ತೆರೆ

varthajala
0

 ಮಹಾಲಕ್ಷ್ಮೀ ಲೇಔಟ್ ನ ನಂದಿನಿ ಲೇಔಟ್ ನಲ್ಲಿ 9 ದಿನಗಳ ಕಾಲ ನಡೆಯುವ ನವರಾತ್ರಿ ನಂದಿನಿ ಉತ್ಸವ - 2024.

ಇಂದು ಕೊನೆಯದಿನವಾಗಿದ್ದು,ಇಂದು ದೇವಿಗೆ ಪೂಜೆ ಸಲ್ಲಿಸಿ ದೇವಸ್ಥಾನದಿಂದ ದೇವಿಯ ಮೆರವಣಿಗೆ ಯನ್ನು ಡೊಳ್ಳು ಕುಣಿತ, ತಮಟೆ ವಾದ್ಯ, ಕಂಸಾಳೆ ನೃತ್ಯ ಹಾಗೂ ವೀರಗಾಸೆಯೊಂದಿಗೆ ನಂದಿನಿ ಬಡಾವಣೆಯ ಎಲ್ಲ ಮುಖ್ಯ ರಸ್ತೆಗಳಾದ ಜೈ ಮಾರುತಿ ನಗರ, ರವಿ ಬಡಾವಣೆ, ಸಾಕಮ್ಮ ಬಡಾವಣೆ ಕಂಠೀರವ ನಗರ ರಸ್ತೆ ಮೂಲಕ ಮೆರವಣಿಗೆ ಹೊರಟಿತು. ರಸ್ತೆ ಮಧ್ಯೆ ಸಾವಿರಾರು ಭಕ್ತರು ದೇವಿಗೆ ಪೂಜೆ ಸಲ್ಲಿಸಿ ಆರತಿ ಎತ್ತಿ ತಮ್ಮ ಭಕ್ತಿ ಪರಕಾಷ್ಟೇ ಮೆರೆದರು. ಇನ್ನು ಡಿಜೆ ಸಂಗೀತ ವಾದ್ಯ ಮೂಲಕ ಯುವಕರು, ಯುವತಿಯರು ಹಾಗೂ ಮಕ್ಕಳು ಡ್ಯಾನ್ಸ್ ಮಾಡುತ್ತ ಮೆರವಣಿಗೆಯಲ್ಲಿ ಸಾಗಿದರು. ಇನ್ನು ಮೆರವಣಿಗೆಯಲ್ಲಿ  ಹನುಮಾನ್ ಟ್ಯಾಬ್ಲೋ ಎಲ್ಲರ ಗಮನ ಸೆಳೆಯಿತು ಮೆರವಣಿಗೆ ಹೊರಟ ಕಡೆ ನೆರೆದಿದ್ದ ಜನರು ದೇವಿಯ ದರ್ಶನ ಪಡೆದು ಪುನೀತರಾದರು.ಕೊನೆಗೆ ದೇವಿಯನ್ನು ಹೆಸರುಘಟ್ಟ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಮೆರವಣಿಗೆಯಲ್ಲಿ ಸುಮಾರು 10ಸಾವಿರ ಜನರು ಭಾಗವಹಿಸಿದ್ದರು.

ನವರಾತ್ರಿ ನಂದಿನಿ ಉತ್ಸವ ಸಮಿತಿಯ ಅಧ್ಯಕ್ಷರಾದ ಕೆ ವಿ ರಾಜೇಂದ್ರಕುಮಾರ್ ಅವರು ಈ  9 ದಿನಗಳ ವೈಭವೊಪಿತ ಉತ್ಸವಕ್ಕೆ ಹಗಲಿರುಳು ತಮ್ಮೊಂದಿಗೆ ಶ್ರಮಿಸಿದ ಎಲ್ಲ ಯುವ ತಂಡಕ್ಕೆ, ಮತ್ತು ಕ್ಷೇತ್ರದ ಶಾಸಕರಾದ ಕೆ, ಗೋಪಾಲಯ್ಯ, ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಹಾಗೂ ನಮ್ಮ ಕ್ಷೇತ್ರದ ಎಲ್ಲ ಮುಖಂಡರು ಕಾರ್ಯಕರ್ತರು ಹಾಗೂ ನಂದಿನಿ ಬಡಾವಣೆಯ ಎಲ್ಲ ನಾಗರಿಕರಿಗೆ ಹಾಗೂ ಉತ್ಸವಕ್ಕೆ ಸಹಕಾರ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಪ್ರಾಯೋಜಕರು, ಪೊಲೀಸ್ ಇಲಾಖೆ,ಹಾಗೂ ಮಾಧ್ಯಮಗಳಿಗೆ ವಿಶೇಷವಾಗಿ ಧನ್ಯವಾದ ತಿಳಿಸಿದರು. 

ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಕೊನೆಯ ದಿನವಾದ ಇಂದು ದೇವಿಯ ಮೆರವಣಿಗೆ ಮೂಲಕ ನವರಾತ್ರಿ ನಂದಿನಿ ಉತ್ಸವ ಸಂಪನ್ನ ಗೊಂಡಿತು.

Post a Comment

0Comments

Post a Comment (0)