ಆಚಾರ್ಯ ಶ್ರೀ ರಾಕುಂ ಶಾಲೆಯಲ್ಲಿ ಸಂಸ್ಥಾಪನಾ ದಿನಾಚರಣೆ

varthajala
0

ಬೆಂಗಳೂರು: ಆಚಾರ್ಯ ಶ್ರೀರಾಕುಂ ಅಂಧರ ಶಾಲೆ ಮತ್ತು ಆಚಾರ್ಯ ಶ್ರೀರಾಕುಂ ಶಾಲೆಯ ಸಂಸ್ಥಾಪಕ ದಿನಾಚರಣೆ.

ಸ್ವಾಮಿ ರಾಕುಂಜೀರವರು ಶಾಲೆಯ ಪ್ರಾಂಶುಪಾಲರು, ಶಿಕ್ಷಕ ವೃಂದದವರು ಮತ್ತು ಶಾಲೆಯ ಮಕ್ಕಳು ದೀಪ ಬೆಳಗಿಸಿ ಸಂಸ್ಥಾಪನಾ ದಿನಾಚರಣೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಶಾಲೆಯ ಮಕ್ಕಳಿಂದ ನಾಟಕ, ಗೀತೆಗಾಯನ, ನೃತ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಸ್ವಾಮಿ ರಾಕುಂಜೀರವರು ಮಾತನಾಡಿ ಮಕ್ಕಳು ದೇವರ ಸಮಾನ, ಮಕ್ಕಳಿಗೆ ಭೇದಬಾವ ಮಾಡಬಾರದು, ಶ್ರೀಮಂತರ ಮಕ್ಕಳಿಗೆ ಸಿಗುವ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಬಡ, ಮಧ್ಯಮ ವರ್ಗದ ಕುಟುಂಬದ ಮಕ್ಕಳಿಗೆ ಸಿಗಬೇಕು.

ಮಕ್ಕಳಿಗೆ ಉಚಿತ ಶಿಕ್ಷಣ ಸಿಗಬೇಕು, ಅವರ ಸಹ ಸಮಾಜದ ಮುಖ್ಯವಾಹಿನಿ ತರಬೇಕು, ವಿದ್ಯಾವಂತ ಸಮಾಜ ನಿರ್ಮಾಣ ಎಂದು ಆಚಾರ್ಯ ಶ್ರೀ ರಾಕುಂ ಶಾಲೆ ಉಚಿತವಾಗಿ ಶಿಕ್ಷಣ ಮತ್ತು ವಸತಿ ಸೌಲಭ್ಯ ನೀಡುತ್ತಿದೆ.

ಸಾಮಾನ್ಯ ಮಕ್ಕಳು ಮತ್ತು ಅಂಧ ಹಾಗೂ ವಿಕಲ ಚೇತನ ಮಕ್ಕಳಿಗೆ ಉಚಿತ ಶಿಕ್ಷಣಕ್ಕೆ ಪ್ರವೇಶವಾಕಾಶ ನೀಡುತ್ತಿದ್ದೇವೆ.


ಬೆಳಯುವ ಪೈರು ಮೊಳೆಯಲ್ಲಿ ಗಾದೆ ಮಾತಿನಂತೆ ಮಕ್ಕಳು ಆಟ, ಊಟ ಪಾಠದ ಜೊತೆಯಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಲು ಸಹಕಾರಯಾಗಬೇಕು ಎಂದು ತರಭೇತಿ ನೀಡಲಾಗುತ್ತಿದೆ.

ಕರಾಟೆ, ಯೋಗ ಮತ್ತು ಆಧ್ಯಾತ್ಮ ಚಿಂತನೆ, ಪರಿಸರ, ಸಂಸ್ಕೃತಿ, ಭಾರತೀಯ ಸಂಪ್ರಾದಯ ಹೀಗೆ ಹಲವಾರು ಚಟುವಟಿಕೆಗಳನ್ನು ಕಲಿಸಲಾಗುತ್ತಿದೆ.

ಮಕ್ಕಳು ಈ ದೇಶದ ಸಂಪತ್ತು ಅವರಿಗೆ ಗುರಿ ಮತ್ತು ಗುರುಗಳ ಮಾರ್ಗದರ್ಶನ ಸಮರ್ಪಕವಾಗಿ ಸಿಕ್ಕರೆ ದೇಶ ಅಭಿವೃದ್ದಿಯತ್ತ ಸಾಗುತ್ತದೆ.

ಸಾರ್ವಜನಿಕರ ಸಹಕಾರ, ಬೆಂಬಲ ಮುಖ್ಯ ಪ್ರತಿಯೊಬ್ಬರು ಸಮಾಜ ಅಭಿವೃದ್ದಿಗೆ ಶ್ರಮಿಸಬೇಕು ಎಂದು ಹೇಳಿದರು.

Post a Comment

0Comments

Post a Comment (0)