ಬೆಂಗಳೂರು -ಅ. 27. ನಗರದ ತ್ಯಾಗರಾಜ ನಗರದ ಸಾಯಿ ಆಧ್ಯಾತ್ಮಿಕ ಕೇಂದ್ರದ 70 ನೇ ವಾರ್ಷಿಕೋತ್ಸವದ ಮಹತ್ವದ ಸಂದರ್ಭದಲ್ಲಿ ದೇಶದಲ್ಲಿ ಶಾಂತಿ, ಸಕಲ ಅಭಿವೃದ್ಧಿ ಮಾತ್ತು ಲೋಕ ಕಲ್ಯಾಣಕ್ಕಾಗಿ ಶ್ರೀ ಸಾಯಿನಾಥ ಮಂದಿರದಲ್ಲಿ ಒಂದು ಸಹಸ್ರ ಕಳಸಾಭಿಷೇಕ ಕಾರ್ಯಕ್ರಮ ಇಂದು ನಡೆಯಿತು. 1008 ಭಕ್ತರು ತಾಮ್ರದ ಕಳಸಗಳಿಂದ ದೇವರಿಗೆ ಅಭಿಷೇಕ ಮಾಡಿದರು . ಇದರ ನಿಮಿತ್ತ ಬೆಳಗಿನಿಂದ ರಾತ್ರಿಯವರೆಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು .
ಇದಕ್ಕೆ ಸಂಭಂಧಿಸಿದಂತೆ ಇಂದು ಸಾಯಿಬಾಬಾ ಹೋಮ, ದತ್ತಾತ್ರೇಯ ಹೋಮ, ಮಹಾರುದ್ರ ಹೋಮಗಳು ನಡೆದವು, ಇದಕಾಗಿ ಶೃಂಗೇರಿ, ಕಾಲಾಡಿ ಹಾಗೂ ನೇಪಾಳದ ಪಶುಪತಿನಾಥ ದೇವಾಲಯದ ಅರ್ಚಕರುಗಳು ಅಗಮಿಸಿದ್ದರು. ಮಧ್ಯಾಹ್ನ ಆರತಿ ಮತ್ತು ಮಹಾ ಪ್ರಸಾದ ನಡೆಯಿತು. ಅಚ್ಚುಕಟ್ಟಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ಐದು ಸಾವಿರದಷ್ಟು ಭಕ್ತರು ಆಗಮಿಸಿದ್ದರು. ಸಂಸ್ಥೆಯ ಆಡಳಿತದಲ್ಲಿ
ಉದ್ಯಮಿಗಳು ಹಾಗೂ ಅನೇಕ ಕ್ಷೇತ್ರದ ನೌಕರರು ಇದ್ದು ವರ್ಷದಲ್ಲಿ ಅನೇಕಬಾರಿ ಲೋಕ ಕಲ್ಯಾಣಕ್ಕಾಗಿ ಧಾರ್ಮಿಕ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನಡೆಸುತ್ತಿರುತ್ತಾರೆ. ಸಾಯಿ ಆಧ್ಯಾತ್ಮಿಕ ಕೇಂದ್ರವು ಈಗಾಗಲೇ ಪ್ರತಿದಿನ ಎಂಟು ಸಾವಿರ ಶಾಲಾ ಮಕ್ಕಳಿಗೆ ಹಾಗೂ ಆಸ್ಪತ್ರೆಯಲ್ಲಿರುವ ಎರಡು ಸಾವಿರ ರೋಗಿಗಳಿಗೆ ಮತ್ತು ಹಸಿದವರಿಗೆ ಸೇರಿ ಒಟ್ಟು ಹತ್ತು ಸಾವಿರ ಜನರಿಗೆ lಆಹಾರ ಒದಗಿಸುತ್ತಿದ್ದಾರೆ, ಶಾಲಾ ಮಕ್ಕಳಿಗೆ ಸಮವಸ್ತ್ರ, ಪುಸ್ತಕ ನೀಡುತ್ತಿದ್ದಾರೆ.ಸಾರ್ವಜನಿಕರಿಗೆ ಅರೋಗ್ಯ ಮೇಳವನ್ನು ಆಯುಜಿಸುತ್ತಿರುತ್ತಾರೆ.