ಗ್ರಂಥದ ಗುಡಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಜರುಗಿದ ಜ್ಞಾನ ದಸರಾ...ಅಕ್ಷರ ದಸರಾ..

varthajala
0

ಇಲ್ಲಿ...ಅಂದರೆ ರಾಜ್ಯದ ನಂಬರ್ 1 ಗ್ರಂಥಾಲಯವೆಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರದ ಕುಮಾರಸ್ವಾಮಿ ಬಡಾವಣೆಯ ಗ್ರಂಥದ ಗುಡಿ ನಗರ ಕೇಂದ್ರ ಗ್ರಂಥಾಲಯದಲ್ಲಿ ಜರುಗಿದ ಜ್ಞಾನ ದಸರಾ...ಅಕ್ಷರ ದಸರಾ...ವೈಭವದ ಗೊಂಬೆಗಳ ಹಬ್ಬ-2024... ಎಂಬ ಶೀರ್ಷಿಕೆಯಡಿಯಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಮಾದರಿಯೆಂಬಂತೆ ತನ್ನದೇ ಆದ ವಿಶೇಷಣಗಳ ಅಲಂಕಾರಗಳಿಂದ ಅಲಂಕೃತಗೊಂಡು ಮನಸೂರೆಗೊಂಡಿತು ಎಂಬುದರಲ್ಲಿ ಎರಡು ಮಾತಿಲ್ಲ. 










ಅಬ್ಬಬ್ಬಾ ಹತ್ತು ದಿನಗಳು ಎಂತೆಂತಹ ಮಹನೀಯರು ಎಂತೆಂತಹ ಕಲಾವಿದರು ಎಂತೆಂತಹ ಸಮಾಜ ಸೇವಕರು... ಎಂಥಹ ದಾರ್ಶನಿಕರು...ಅವರ ಹೆಸರುಗಳನ್ನು ಸ್ಮರಿಸುತ್ತಿದ್ದರೆ ಮೈಮನಗಳೆಲ್ಲ ರೋಮಾಂಚನಗೊಳ್ಳುತ್ತದೆ. ಖ್ಯಾತ ಚಿತ್ರ ನಟರಾದ ಶ್ರೀ ಸುಂದರ್ ರಾಜ್, ಖ್ಯಾತ ಗಾಯಕಿ ಡಾ.ಅಂಬಿಕಾ ಶಾಸ್ತ್ರಿ,  ನಗೆ ಸಿಂಹ ಎಂದೇ ಖ್ಯಾತಿ ಪಡೆದಿರುವ ಡಾ. ಎಂ ಎಸ್ ನರಸಿಂಹಮೂರ್ತಿ,ಡಾ. ಬಿ ಆರ್ ಸುಹಾಸ್, ನಗೆ ಸಾಹಿತಿ ವೈ ವಿ ಗುಂಡೂರಾವ್ ಹೀಗೆ ಈ ಹತ್ತು ದಿನಗಳು ಭಾಗವಹಿಸಿದ್ದ ಗಣ್ಯಾತಿಗಣ್ಯರ ಹೆಸರುಗಳನ್ನು ಹೇಳುತ್ತಿದ್ದರೆ ಅವರ ಮಾತುಗಳನ್ನು ಕೇಳುತ್ತಿದ್ದರೆ ನಿಜಕ್ಕೂ ಮನೆಗಳೆಲ್ಲ ಪುಳಕಿತಗೊಳ್ಳುತ್ತದೆ.

ಈ ಎಲ್ಲಾ ಯಶಸ್ವಿ ಕಾರ್ಯಕ್ರಮಗಳ ರೂವಾರಿ ನಾಡಿನ ಶ್ರೇಷ್ಠ ಗ್ರಂಥ ಪಾಲಕರಾದ ಶ್ರೀ ಎಸ್ ಆನಂದ್ ಸರ್ ರವರು ಇಡೀ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು🙏

Post a Comment

0Comments

Post a Comment (0)