ಅಂತರಾಷ್ಟ್ರೀಯ ಲಯನ್ ಸಂಸ್ಥೆ 317 f ನಿಂದ ಬೃಹತ್ ವನಮಹೋತ್ಸವ

varthajala
0

 ಅಂತರಾಷ್ಟ್ರೀಯ ಲಯನ್  ಸಂಸ್ಥೆ 317 f ನಿಂದ ಬೃಹತ್ ವನಮಹೋತ್ಸವ ಕಾರ್ಯಕ್ರಮವನ್ನು ಗೌರಿಬಿದನೂರು ತಾಲೂಕಿನ ಆರ್ಕುಂದ ಗ್ರಾಮದ ಹೂರ ವಲಯದಲ್ಲಿರುವ ಸಸ್ಯ ಕ್ಷೇತ್ರದಲ್ಲಿ ಏರ್ಪಡಿಸಲಾಗಿತ್ತು.



   ಕಾರ್ಯಕ್ರಮ ಉದ್ಘಾಟನೆ ಮಾಡಿದ ಜಿಲ್ಲಾಧಿಕಾರಿ ಪಿಎನ್ ರವೀಂದ್ರ ರವರು ಮಾತನಾಡುತ್ತಾ ಸುಮಾರು ಐದು ವರ್ಷಗಳಿಂದ ಜಿಲ್ಲಾ ಲಯನ್ ಸಂಸ್ಥೆ ಈ ಸ್ಥಳದಲ್ಲಿ ಸಾವಿರಾರು ಗಿಡಗಳನ್ನು ನೆಡುವುದರ ಮುಖಾಂತರ ಉತ್ತಮ ಸೇವಾ ಕಾರ್ಯವನ್ನು ಮಾಡುತ್ತಿದೆ ಮುಂಚೆ ಹಾಕಿರುವ ಸಸಿಗಳು ಈಗ ಬೃಹತ್ಕಾರವಾಗಿ ಬೆಳೆದು  ಉತ್ತಮ ಪರಿಸರ ಏರ್ಪಟ್ಟಿದೆ. 

ಮುಂದೆ ಈ ಸೇವಾ ಕಾರ್ಯಕ್ಕೆ ಬೇಕಾಗುವ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು. 

     ಲಯನ್ ಜಿಲ್ಲ ಗವರ್ನರ್ ಸಿಎಂ ನಾರಾಯಣಸ್ವಾಮಿ ಮಾತನಾಡುತ್ತಾ ಅಂತರಾಷ್ಟ್ರೀಯ ಮಟ್ಟದಲ್ಲಿ ಲಯನ್ ಸಂಸ್ಥೆ ಉತ್ತಮ ಸೇವಾ ಕಾರ್ಯಗಳನ್ನು ಮಾಡುತ್ತಿದ್ದು ಇದರಲ್ಲಿ ಪರಿಸರವೂ ಒಂದು ವನ್ಯ ಸಸಿಗಳನ್ನು ನೆಡುವುದರ ಮುಖಾಂತರ ಸಮಾಜಕ್ಕೆ ಒಂದು ಒಳ್ಳೆ ಸಂದೇಶ ನೀಡುವ ಯೋಜನೆಯನ್ನು ನಮ್ಮ ಲಯನ್  ಸಂಸ್ಥೆ ಮಾಡಿದೆ ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಗವರ್ನರ್ ಎಚ್. ಕೆ. ಗಿರಿಧರ್ ಹಾಗೂ ಅನೇಕ ಮಾಜಿ ಗವರ್ನರ್ಗಳು,  ಉಪರಾಜ್ಯಪಾಲರಾದ ರಾಜು ಚಂದ್ರಶೇಖರ್, ಪಿ.ಎಂ. ಶಿವಪ್ರಸಾದ್, ಎಂ.ಎಸ್. ಬಾಬು, ಮುಂತಾದ  ಜಿಲ್ಲಾ ಲಯನ್ಸ್ ಕ್ಯಾಬಿನೆಟ್ ಸದಸ್ಯರು, ಎಲ್ಲಾ ಕ್ಲಬ್ಬಿನ ಅಧ್ಯಕ್ಷರು , ಪದಾಧಿಕಾರಿಗಳು, ಲಿಯೋ ಸದಸ್ಯರು, ಗೌರಿಬಿದನೂರು ಲಯನ್ಸ್ ಸಂಸ್ಥೆಯ ಅಧ್ಯಕ್ಷರು ಸದಸ್ಯರು ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು.

Post a Comment

0Comments

Post a Comment (0)